ಹುಬ್ಬಳ್ಳಿ:ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಒಂದೇ ಕಾಲಿನ ಮಗು ಜನಿಸಿ ಭಾರಿ ಸುದ್ದಿ ಮಾಡಿದೆ. ಸೊಂಟದ ಕೆಳಭಾಗದಲ್ಲಿ ಒಂಟಿ ಕಾಲು ಬಿಟ್ಟರೆ ಯಾವುದೇ ಸಾಮಾನ್ಯ ಅಂಗಾಂಗಗಳನ್ನು ಹೊಂದಿರದ ಈ ಮಗುವನ್ನು ನೋಡಿ ವೈದ್ಯರು ಅಚ್ಚರಿ ಪಟ್ಟಿದ್ದಾರೆ.
ಈ ಮಗುವಿನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಮೊದಲೇ ಜನಿಸಿದ ಅರ್ಧ ಗಂಟೆಯಲ್ಲಿಯೇ ಮಗು ಮೃತಪಟ್ಟಿದೆ. ಆದರೆ ಇಷ್ಟು ಹೊತ್ತಿಗಾಗಲೇ ಮಗುವಿನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೋಡುಗರನ್ನು ಬೆರಗುಗೊಳಿಸಿದೆ.
ಹೇರಿಗೆ ನೋವಿನಿಂದ ಬಳಲುತ್ತಿದ್ದ ರೇಷ್ಮಾ ಬಾನು ಎಂಬ ಮಹಿಳೆ ನಿನ್ನೆ ಭಾನುವಾರ ಕಿಮ್ಸ್​ಗೆ ದಾಖಲಾಗಿದ್ದರು. ಅವರು ಏಳು ತಿಂಗಳ ಗರ್ಭಿಣಿಯಾಗಿದ್ದರು. ಹೆರಿಗೆ ಮಾಡಿದಾಗ ಈ ಮಗು ಜನಿಸಿತ್ತು. ಮಕ್ಕಳ ವಿಭಾಗದ ತಜ್ಞರು ಈ ಮಗುವಿನ ಬಗ್ಗೆ ಮಾಹಿತಿ ಸಂಗ್ರಹಿಸಲು ಹಲವು ಕಡೆಗಳಲ್ಲಿ ಸಿದ್ಧತೆ ನಡೆಸಿದ್ದರು. ಆದರೆ ಅಷ್ಟರಲ್ಲಿಯೇ ಮಗು ಮೃತಪಟ್ಟಿದೆ.
ಏಳು ತಿಂಗಳಿಗೇ ಹೆರಿಗೆ ಆದ್ದರಿಂದ ಮಗುವಿನ ಬೆಳವಣಿಗೆ ಆಗಿರುವುದಿಲ್ಲ ಎಂದು ತಿಳಿದಿತ್ತು. ಆದರೆ ಒಂದೇ ಕಾಲಿನ ವಿಚಿತ್ರ ಮಗು ಜನಿಸಿದ್ದರಿಂದ ಅಚ್ಚರಿಪಟ್ಟೆವು. ಅನುವಂಶೀಯ ಸಮಸ್ಯೆಯಿಂದ ಅಂಗವೈಕಲ್ಯದ ಮಗು ಹುಟ್ಟುವುದು ಸಾಮಾನ್ಯವಾಗಿದ್ದರೂ, ಇದು ಮಾತ್ರ ಅಪರೂಪದ ಮಗುವಾಗಿತ್ತು ಎಂದಿದ್ದಾರೆ ವೈದ್ಯರು.
ಜುಲೈ 1ರಿಂದ ಹಣ ವಿತ್‌ಡ್ರಾ, ಚೆಕ್‌ಬುಕ್‌ನಲ್ಲಿ ಭಾರಿ ಬದಲಾವಣೆ- ಇಲ್ಲಿದೆ ನೋಡಿ ಡಿಟೇಲ್ಸ್‌

ಎಂಜಲು ಹಚ್ಚುವುದೇ ನನ್ನ ಬ್ಯೂಟಿ ಸೀಕ್ರೆಟ್‌: ಅಭಿಮಾನಿಗಳಿಗೆ ಶಾಕ್‌ ನೀಡಿದ ತಮನ್ನಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five − 4 =
Remember me
