ವಿಜಯಪುರ:ಹಿಜಾಬ್‌ ಗಲಾಟೆ ಇನ್ನೂ ಮುಗಿದಿಲ್ಲ. ಇಷ್ಟು ವರ್ಷ ಕಾಲೇಜೇ ಮುಖ್ಯವೆಂದು ಕಾಲೇಜಿನ ನಿಯಮಗಳನ್ನು ಪಾಲಿಸುತ್ತಿದ್ದ ವಿದ್ಯಾರ್ಥಿನಿಯರು ಏಕಾಏಕಿಯಾಗಿ ತಮ್ಮ ಕಾಲೇಜು, ಶಿಕ್ಷಣ ಸಂಸ್ಥೆ, ತಮಗೆ ಶಿಕ್ಷಣ ನೀಡುತ್ತಿರುವ ಉಪನ್ಯಾಸಕರು, ಹಿರಿಯರು ಎನ್ನದೇ ತಿರುಗಿ ಬೀಳುತ್ತಿದ್ದಾರೆ. ಕರ್ನಾಟಕದಲ್ಲಿ ಶುರುವಾದ ಈ ವಿವಾದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಬೆನ್ನಲ್ಲೇ ವಿಜಯಪುರದಲ್ಲಿ ಕುಂಕುಮ ಗಲಾಟೆ ಶುರುವಾಗಿದೆ.
ನಿನ್ನೆಯಷ್ಟೇ ವಿದ್ಯಾರ್ಥಿನಿಯೊಬ್ಬಳು ನಾವು ಹಿಜಾಬ್‌ ಹಾಕಬಾರದು ಎಂದು ವಿದ್ಯಾರ್ಥಿನಿಯರು ಕುಂಕುಮ ಹಚ್ಚಿಕೊಂಡು ಬರಬಾರದು ಎಂಬ ಹೇಳಿಕೆ ಕೊಟ್ಟಿದ್ದಳು. ಇದರ ಬೆನ್ನಲ್ಲೇ ಇದೀಗ ವಿಜಯಪುರ ಜಿಲ್ಲೆಯ ಕಾಲೇಜೊಂದರಲ್ಲಿ ಕುಂಕುಮ ಗಲಾಟೆ ಶುರು ಮಾಡಲಾಗಿದೆ.
ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಉಪನ್ಯಾಸಕ ಒಳಗೆ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ! ಈ ವಿದ್ಯಾರ್ಥಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದಿದ್ದಕ್ಕೆ ಉಪನ್ಯಾಸಕ ಆತನನ್ನು ತಡೆದಿದ್ದಾರೆ.
ದೈಹಿಕ ಶಿಕ್ಷಣ ಶಿಕ್ಷಕ ಸಂಗಮೇಶ ಗೌಡ ಹಾಗೂ ‌ಪದವಿ ವಿದ್ಯಾರ್ಥಿ ಗಂಗಾಧರ ಬಡಿಗೇರ ನಡುವೆ ಮಾತಿನ ಚಕಮಕಿ ನಡೆದಿದೆ. ಕುಂಕುಮ‌ – ನಾಮ ಹಾಕಲು‌ ಯಾಕೆ ಅನುಮತಿಯಿಲ್ಲ ಎಂದು ವಿದ್ಯಾರ್ಥಿ‌ ಪ್ರಶ್ನಿಸಿದ್ದಾನೆ. ಆದರೆ ಆತನನ್ನು ಒಳಗೆ ಸೇರಿಸಿಕೊಳ್ಳಲು ಉಪನ್ಯಾಸಕ ನಿರಾಕರಿಸಿದ್ದಾರೆ. ಕೊನೆಗೆ ಪೊಲೀಸರು ಪ್ರವೇಶ ಮಾಡಿ ವಿದ್ಯಾರ್ಥಿಗೆ ಮನವೊಲಿಸಿ ತರಗತಿಗೆ ಕಳುಹಿಸಿದ್ದಾರೆ!
ಇದರಿಂದ ಕಾಲೇಜಿನಲ್ಲಿ ಕೆಲ‌ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಇದಾಗಲೇ ಹಿಜಾಬ್‌ ಗಲಾಟೆ ನಡೆಯುತ್ತಿರುವ ಮಧ್ಯೆ ಬೆಂಕಿಗೆ ತುಪ್ಪ ಸುರಿದಂತೆ ಉಪನ್ಯಾಸಕರು ಈ ಗಲಾಟೆ ಶುರು ಮಾಡಿರುವುದಾಗಿ ಆಕ್ರೋಶ ವ್ಯಕ್ತವಾಗಿದೆ.
ವಿಡಿಯೋ ಇಲ್ಲಿವೆ ನೋಡಿ:
ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ: ಮಾತಿನ ಚಕಮಕಿpic.twitter.com/8ExAYlnZ02
— Vijayavani (@VVani4U)February 18, 2022

ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದ ಸರ್ಕಾರಿ ಪದವಿ ಮಹಾ ವಿದ್ಯಾಲಯದಲ್ಲಿ ಹಣೆಗೆ ಕುಂಕುಮ ಹಚ್ಚಿಕೊಂಡು ಬಂದ ವಿದ್ಯಾರ್ಥಿಗೆ ಪ್ರವೇಶ ನಿರಾಕರಣೆ: ಮಾತಿನ ಚಕಮಕಿpic.twitter.com/PKNYYFG9cW
— Vijayavani (@VVani4U)February 18, 2022

‘ಓದಿಗಿಂತ ಮೊದ್ಲು ಹಿಜಾಬ್‌ ಬೇಕಿದ್ರೆ ಅಜ್ಜಂದಿರು ಭಾರತದ ಬದ್ಲು ಪಾಕಿಸ್ತಾನವನ್ನೇ ಆಯ್ಕೆ ಮಾಡಿಕೊಳ್ಬೋದಿತ್ತಲ್ಲ!’

ಆತನ ದೃಷ್ಟಿ ಬಿತ್ತು ಎಂದರೆ ಸೆಕ್ಸ್‌ಗೆ ಕರೆದನೆಂದೇ ಅರ್ಥವಾಗಿದ್ದ ಕಾಲದ್ದು ಈ ಹಿಜಾಬ್‌ ಎಂದ ಲೇಖಕಿ ತಸ್ಲೀಮಾ ನಸ್ರೀನ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × two =
Remember me
