ಪ್ರಶ್ನೆ: ಪರಿಶಿಷ್ಟ ಜಾತಿಯ ಮಹಿಳೆಗೆ ಸರಕಾರದಿಂದ ಭೂರಹಿತ ಯೋಜನೆಯ ಅಡಿ ಮಂಜೂರಾಗಿದ್ದ ಜಮೀನನ್ನು ಮೋಸದಿಂದ ಗೊಲ್ಲ ಜಾತಿಯವರು ವಿಲ್‌ /ಮರಣ ಶಾಸನ ಮಾಡಿಸಿಕೊಂಡಿದ್ದಾರೆ.
ಆಕೆಗೆ ಯಾರೂ ವಾರಸುದಾರರು ಇಲ್ಲ ನಾನೇ ನೋಡಿಕೊಳ್ಳುವುದು ಎಂದು ಸುಳ್ಳು ಹೇಳಿ ಬರೆಯಿಸಿಕೊಂಡಿದ್ದಾರೆ. ಈ ವಿಷಯ, ಆ ವೃದ್ಧ ಮಹಿಳೆ ತೀರಿಕೊಂಡ ಮೇಲೆ ಆಕೆಯ ವಾರಸುದಾರರಿಗೆ ತಿಳಿದುಬಂದಿರುತ್ತದೆ. ಪರಿಶಿಷ್ಟ ಜಾತಿಯವರಿಗೆ ಬಂದ ಜಾಗವನ್ನು ಬೇರೆಯವರಿಗೆ ವಿಲ್‌ ಮಾಡಿದರೆ ಅದು ಊರ್ಜಿತವಾಗುತ್ತದೆಯೇ ತಿಳಿಸಿ.
ಉತ್ತರ:ಒಬ್ಬ ವ್ಯಕ್ತಿಗೆ ಮಂಜೂರಾತಿ ಆದ ಜಮೀನು ಆ ವ್ಯಕ್ತಿಯ ಸ್ವಯಾರ್ಜಿತ ಆಸ್ತಿ ಆಗಿರುತ್ತದೆ. ಅದನ್ನು ಅವರು ಯಾರಿಗೆ ಬೇಕಾದರೂ, ಯಾವ ಜಾತಿಯವರಿಗೆ ಬೇಕಾದರೂ ವಿಲ್‌ ಮಾಡುವ ಅಧಿಕಾರ ಇರುತ್ತದೆ.
ಆದರೆ, ಯರೇ ಆಗಲೀ ಮೋಸದಿಂದ ವಿಲ್‌ ಮಾಡಿಸಿಕೊಂಡಿದ್ದರೆ, ಆ ಮರಣಶಾಸನದ ಕ್ರಮವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು. ವೃದ್ಧ ಮಹಿಳೆಗೆ ವಾರಸುದಾರರು ಇದ್ದಾಗಲೂ ಸಹ, ಯಾರೂ ಇಲ್ಲ ಎಂದು ಸುಳ್ಳು ಹೇಳಿ ವಿಲ್‌ ಮಾಡಿಸಿಕೊಂಡಿದ್ದರೆ, ಆಕೆಯ ವಾರಸುದಾರರು, ಆ ವಿಲ್‌ ಸಿಂಧುತ್ವವನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು.
ಆದರೆ ವಿಲ್‌ ಯಾರ ಪರವಾಗಿ ಆಗಿದೆಯೋ ಅವರು ಬೇರೆಯ ಜಾತಿಯವರು ಎನ್ನುವ ಕಾರಣದಿಂದ ವಿಲ್‌ ಅನೂರ್ಜಿತ ಆಗುವುದಿಲ್ಲ.
ಗುಟ್ಟಾಗಿ ಪತಿ ಮತ್ತೊಂದು ಮದುವೆಯಾದರೆ ಪತ್ನಿ ಏನು ಮಾಡಬಹುದು? ಕಾನೂನಿನ ಅಡಿ ಇರುವ ಅವಕಾಶಗಳು ಹೀಗಿವೆ…

ವಿಲ್ ಬರೆದಾಗ ಸಾಕ್ಷಿ ಹಾಕದಿದ್ದರೆ ಏನಾಗುತ್ತದೆ? ಕಾನೂನು ಹೀಗೆ ಹೇಳಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
