ಬೆಂಗಳೂರು:ಮಾಹಿತಿ ತಂತ್ರಜ್ಞಾನದ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿಯಲ್ಲಿ ತೆರೆಯಬೇಕು ಎನ್ನುವ ಹಲವರ ಕನಸು ಕೊನೆಗೂ ನನಸಾಗಲಿದೆ. ಇದೇ ಆಗಸ್ಟ್​ 1ರಿಂದ ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಿದೆ. ಈ ಮೂಲಕ ಸಮೀಪದ ಉದ್ಯೋಗಿಗಳು ಇಚ್ಛೆ ಪಟ್ಟಲ್ಲಿ, ಹುಬ್ಬಳ್ಳಿಯ ಕಚೇರಿಯಲ್ಲಿಯೇ ಉದ್ಯೋಗ ಮುಂದುವರಿಸಬಹುದಾಗಿದೆ.
ಉತ್ತರ ಕರ್ನಾಟಕ ಭಾಗದಲ್ಲಿ ಇನ್ಫೋಸಿಸ್​ ಶುರು ಮಾಡಬೇಕು ಎಂದು ದಶಕದಿಂದಲೇ ಕೂಗು ಕೇಳಿಬಂದಿತ್ತು. ಇದಕ್ಕಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯು ವಿಶೇಷ ಆರ್ಥಿಕ ವಲಯ (SEZ) ವರ್ಗದಡಿ 43.05 ಎಕರೆ ಭೂಮಿಯನ್ನು ಮಂಜೂರು ಮಾಡಿತ್ತು. ಇಲ್ಲಿ 1400 ಉದ್ಯೋಗಿಗಳು ಕೆಲಸ ಮಾಡಲು ಸ್ಥಳಾವಕಾಶವಿದೆ.
ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಸುಸಜ್ಜಿತವಾದ, ಬೃಹದಾಕಾರದ ಇನ್ಫೋಸಿಸ್ ಕ್ಯಾಂಪಸ್ ಕಾರ್ಯಾರಂಭ ಮಾಡಿರಲಿಲ್ಲ. ಇದೇ ಕಾರಣಕ್ಕೆ ನೂತನ ರೀತಿಯಲ್ಲಿ ಅಭಿಯಾನವನ್ನು ಕೈಗೊಂಡಿದ್ದ ಕೆಲ ಯುವಕರರು ‘ಸ್ಟಾರ್ಟ್ ಇನ್ಫೋಸಿಸ್’ ಎನ್ನುವ ತಂಡ ಕಟ್ಟಿಕೊಂಡು ಮುಖ್ಯಮಂತ್ರಿಯವರಿಗೆ 10 ಸಾವಿರ ಪತ್ರ ಅಭಿಯಾನಕ್ಕೆ ಚಾಲನೆ ನೀಡಿದ್ದರು.
ಕೆಎಲ್‌ಇ ಸಂಸ್ಥೆಯ ಸಿ.ಐ. ಮುನವಳ್ಳಿ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು. ನಂತರ ವಿದ್ಯಾರ್ಥಿಗಳು ಹಾಗೂ ಬೋಧಕರ ಸಭೆಯಲ್ಲಿ ಇನ್ಫೋಸಿಸ್ ಕ್ಯಾಂಪಸ್ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ವಿದ್ಯಾರ್ಥಿಗಳು ಬರೆದ 500ಕ್ಕೂ ಹೆಚ್ಚು ಮನವಿ ಪತ್ರಗಳನ್ನು ಸಂಗ್ರಹಿಸಲಾಗಿತ್ತು.
ಇವೆಲ್ಲವುಗಳ ಫಲಶ್ರುತಿಯಾಗಿ ಇದೀಗ ಇನ್ಫೋಸಿಸ್​ ಸಂಸ್ಥೆ ಆಗಸ್ಟ್​ 1ರಂದು ಕಾರ್ಯಾರಂಭ ಮಾಡಲು ರೆಡಿಯಾಗಿದ್ದು, ಉತ್ತರ ಕರ್ನಾಟಕದ ಭಾಗದವರಲ್ಲಿ ಭಾರಿ ಸಂತಸ ತಂದಿದೆ.
‘ಉತ್ತರ ಕರ್ನಾಟಕದ ಭಾಗದ ಜನರ ಆಸೆಯಂತೆ ಹುಬ್ಬಳ್ಳಿಯಲ್ಲಿ ಇದೇ ಆಗಸ್ಟ್ ಒಂದರಿಂದ ಕಚೇರಿ ಪ್ರಾರಂಭಿಸುತ್ತಿದ್ದೇವೆ. ಉತ್ತಮ ಗುಣಮಟ್ಟದ ಸೌಲಭ್ಯಗಳನ್ನು ಸಂಸ್ಥೆಯಲ್ಲಿ ನೀಡಲಾಗಿದೆ. ಈಗಾಗಲೇ ಸಂಸ್ಥೆಯ ಇತರ ಕ್ಯಾಂಪಸ್ ಗಳಲ್ಲಿ ಉದ್ಯೋಗದಲ್ಲಿರುವ ಹಲವಾರು ಯುವಕ-ಯುವತಿಯರು, ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಕೆಲಸ ನಿರ್ವಹಿಸಲು ಇಚ್ಛಿಸಿದ್ದಾರೆ. ಅಲ್ಲಿ ಕೆಲವರು ದೀರ್ಘಾವಧಿ ಹಾಗೂ ಇನ್ನು ಕೆಲವರು ಅಲ್ಪಾವಧಿ ಕೆಲಸ ಮಾಡಲು ಬಯಸಿದ್ದಾರೆ. ಬೇರೆ ಇನ್ನು ಯಾರಿಗಾದರೂ ಆ ಕ್ಯಾಂಪಸ್ ಗೆ ಹೋಗಿ ಕೆಲಸ ಮಾಡಲು ಇಚ್ಛೆ ಇದ್ದರೆ ನಮ್ಮನ್ನು ಸಂಪರ್ಕಿಸಿ. ಲಭ್ಯ ಇರುವ ಅನುಕೂಲತೆಗಳ ಆಧಾರದ ಮೇಲೆ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳಲಾಗುವುದು’ ಎಂದು ಇನ್ಫೋಸಿಸ್ ಸಂಸ್ಥೆ ಮಾನವ ಸಂಪನ್ಮೂಲ ವಿಭಾಗ ತನ್ನ ಉದ್ಯೋಗಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.
ನಾಳೆ ಸಿಇಟಿ ಫಲಿತಾಂಶ: ರಿಸಲ್ಟ್​ ನೋಡುವುದು ಹೇಗೆ? ಇಲ್ಲಿದೆ ವಿವರ…

VIDEO: ಪಿಸ್ತೂಲ್​ ಹಿಡಿದು ಬಂದ ಕಳ್ಳನನ್ನು ಕ್ಲೀನ್​ ಮಾಡೋ ಬಟ್ಟೆಯಿಂದ್ಲೇ ಓಡಿಸಿದಳು! ಇಲ್ಲಿದೆ ನೋಡಿ ಅಚ್ಚರಿಯ ವಿಡಿಯೋ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
