ಬೆಂಗಳೂರು: ರಾಜ್ಯ ಸರ್ಕಾರ ಇನ್‌ಪುಟ್ ಸಬ್ಸಿಡಿ ಮೊತ್ತವನ್ನು ಪರಿಷ್ಕರಿಸಿದ ಆದೇಶಿಸಿದೆ.
2021ರ ಜುಲೈ, ಆಗಷ್ಟ್‌, ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಪ್ರವಾಹ, ಅತೀವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಪಾವತಿಸುವ ಮಾರ್ಗಸೂಚಿ ದರ ಕಡಿಮೆ ಇರುವುದರಿಂದ ಬೆಳೆ ಹಾನಿಯಾದ ರೈತರಿಗೆ ಹೆಚ್ಚಿನ ಆರ್ಥಿಕ ನೆರವು ನೀಡುವ ಹಿನ್ನೆಲೆಯಲ್ಲಿ ಇನ್‌ಪುಟ್ ಸಬ್ಸಿಡಿಯನ್ನು ಪರಿಷ್ಕರಿಸಲಾಗಿದೆ.
ಮಳೆಯಾಶ್ರಿತ ಬೆಳೆ(ಪ್ರತಿ ಹೆಕ್ಟೇರ್)ಗೆ 6,800 ಇದ್ದು ಅದನ್ನು 13,600 ರೂ., ನೀರಾವರಿ ಬೆಳೆ 13,500 ರೂ.ಗಳನ್ನು 25,000 ರೂ.ಗೆ ಹಾಗೂ ಬಹುವಾರ್ಷಿಕ ಬೆಳೆಗೆ 18,000 ರೂ. ಇದ್ದುದನ್ನು 28,000 ರೂ.ಗಳಿ ಹೆಚ್ಚಿಸಲಾಗಿದೆ. ಹೆಚ್ಚುವರಿ ಪರಿಹಾರ ನೀಡುವುದರಿಂದ ರಾಜ್ಯದ ಬೊಕ್ಕಸಕ್ಕೆ 1,200 ಕೋಟಿ ರೂ. ಹೊರೆಯಾಗಲಿದೆ.
1252.89 ಕೋಟಿ ರೂ. ಬಿಡುಗಡೆ:2021ನೇ ಸಾಲಿನ ಜುಲೈ, ಆಗಸ್ಟ್, ಅಕ್ಟೋಬರ್ ಮತ್ತು ನವೆಂಬರ್ ಮಾಹೆಯಲ್ಲಿ ಉಂಟಾದ ಭಾರೀ ಮಳೆಯಿಂದ ಅತಿವೃಷ್ಟಿ/ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿತ್ತು. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ನಿಗದಿಪಡಿಸಿರುವ ದರದಲ್ಲಿ 18.02 ಲಕ್ಷ ರೈತರ ಬ್ಯಾಂಕ್ ಖಾತೆಗೆ ನೇರವಾಗಿ 1252.89 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಹಣ ಜಮೆಯಾಗಿದೆ.
ಎರಡು ದಿನಗಳಲ್ಲಿ ಹೆಚ್ಚುವರಿ ಪರಿಹಾರ:ಈಗಾಗಲೇ ಪರಿಹಾರ ಪಡೆದಿರುವ 18.02 ಲಕ್ಷ ರೈತರಿಗೆ ಪುನಃ ರಾಜ್ಯ ಸರ್ಕಾರದ ಹೆಚ್ಚುವರಿ ಮೊತ್ತ 1,135.49 ಕೋಟಿ ರೂ.ಗಳನ್ನು ಎರಡು ದಿನದಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಈವರೆಗೆ ಒಟ್ಟು 2021-22ನೇ ಸಾಲಿನ ಪ್ರವಾಹದಿಂದ ಉಂಟಾದ ಬೆಳೆ ಹಾನಿಗೆ 2,388.39 ಕೋಟಿ ರೂ. ಇನ್‌ಪುಟ್ ಸಬ್ಸಿಡಿ ಪಾವತಿಸದಂತಾಗುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಹತ್ತೇ ದಿನದಲ್ಲಿ ರೈತರ ಸಾಲ, ವಿದ್ಯುತ್‌ ಬಿಲ್‌ ಮನ್ನಾ, ಪತ್ರಕರ್ತರ ಕೇಸ್‌ ವಾಪಸ್‌!

ಪಾಕಿಗಳ ಬಾಯಲ್ಲೂ ಕರ್ನಾಟಕ: ಉಡುಪಿನ ಬಗ್ಗೆ ಬೋಧಿಸಿದ್ರು ಒಬ್ಬರು, ಮಾನವ ಹಕ್ಕುಗಳ ಕುರಿತು ಮಾತನಾಡಿದ್ರು ಇನ್ನೊಬ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
