ಭಟ್ಕಳ:ಸದ್ಯ ಎಲ್ಲೆಲ್ಲೂ ಮಾಸ್ಕ್​ಗಳದ್ದೇ ಮಾತು. ಮಾಸ್ಕ್​ ಧರಿಸುವುದರಿಂದ ಕರೊನಾ ಎಷ್ಟರಮಟ್ಟಿಗೆ ತಡೆಗಟ್ಟಬಹುದು ಎಂಬ ಬಗ್ಗೆ ಇದುವರೆಗೆ ಸ್ಪಷ್ಟ ಉಲ್ಲೇಖ ಎಲ್ಲೂ ಇಲ್ಲ. ಮಾಸ್ಕ್​ ಧರಿಸುವುದು ಪ್ರಯೋಜವೇ ಇಲ್ಲ ಎಂದು ಕೆಲವರು ವಾದಿಸುತ್ತಿದ್ದಾರೆ. 24 ಗಂಟೆ ಮಾಸ್ಕ್​ ಹಾಕಿಕೊಂಡವರಿಗೂ ಕರೊನಾ ಸೋಂಕು ಬಂದಿದೆ ಎನ್ನುವುದು ಅವರ ವಾದ.
ಅದೇನೇ ಇದ್ದರೂ ಸದ್ಯ ಸರ್ಕಾರದ ನಿಯಮದ ಅನ್ವಯ ಕರೊನಾವನ್ನು ತಕ್ಕಮಟ್ಟಿಗಾದರೂ ನಿಯಂತ್ರಣ ಮಾಡಲು ಮಾಸ್ಕ್​ ಕಡ್ಡಾಯವಾಗಿ ಧರಿಸಲೇಬೇಕು. ಇಲ್ಲದಿದ್ದರೆ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತದೆ. ಸೀನುವಾಗ, ಕೆಮ್ಮುವಾಗ ಇಲ್ಲವೇ ಮಾತನಾಡುವ ಸಮಯದಲ್ಲಿ ಕರೊನಾ ಸೋಂಕು ಬೇರೆಯವರಿಗೆ ಹರಡದುವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮಾಸ್ಕ್​ ಕಡ್ಡಾಯ ಮಾಡಲಾಗಿದೆ.
ಇದನ್ನೂ ಓದಿ:‘ನಿವಾರ್’​ ಸುಧಾರಿಸಿಕೊಳ್ಳುವ ಮೊದಲೇ ಅಪ್ಪಳಿಸುತಿದೆ ‘ಬುರೆವಿ’- ಎಲ್ಲೆಡೆ ಹೈ ಅಲರ್ಟ್​
ಆದರೆ ಇದೀಗ ತಾವು ಮಾಸ್ಕ್​ ಧರಿಸುವುದಿಲ್ಲ ಎನ್ನುವ ಮೂಲಕ ಬಿಜೆಪಿ ಶಾಸಕ ಸುನೀಲ್ ನಾಯ್ಕ ಚರ್ಚೆಗೆ ಗ್ರಾಸರಾಗಿದ್ದಾರೆ. ನಾನು ಮಾಸ್ಕ್ ಧರಿಸದೇ ಕರೊನಾ ಜಾಗೃತಿ ಮಾಡುತ್ತೇನೆ ಎಂದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಶಾಸಕರಾಗಿರುವ ಸುನೀಲ್​, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನಾನು ಮಾಸ್ಕ್​ ಧರಿಸುವುದಿಲ್ಲ. ಮಾಸ್ಕ್​ ಧರಿಸದೇ ಕರೊನಾ ವಿರುದ್ಧ ಜಾಗೃತಿ ಮಾಡುತ್ತೇನೆ ಎಂದಿದ್ದಾರೆ.
ಅವರು ಈ ವಿಷಯವನ್ನು ಓರ್ವ ಕರೊನಾ ಸೋಂಕಿತರಾಗಿ ಹೇಳಿರುವುದು ಎಲ್ಲರಲ್ಲಿಯೂ ಅಚ್ಚರಿ ಮೂಡಿಸಿದೆ. ಕಳೆದ ಆಗಸ್ಟ್​ನಲ್ಲಿ ಇವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಅವರು ಬಿಡುಗಡೆಗೊಂಡಿದ್ದಾರೆ.
ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + 5 =
Remember me
