ಬೆಂಗಳೂರು:ಈ ಬಾರಿಯ ನಾಡಹಬ್ಬ ದಸರಾ ಮೇಲೂ ಕರೊನಾ ಕರಿನೆರಳು ಬಿದ್ದಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ಈ ಬಾರಿ ಸರಳವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಸಭೆಯಲ್ಲಿ ತೀರ್ಮಾನಿಸಿದಂತೆ ಜಂಬೂ ಸವಾರಿ ಅರಮನೆ ಆವರಣದಲ್ಲಿ ಒಳಗೆ ಮಾತ್ರ ಇರಲಿದೆ. ಅರಮನೆಯ ಹೊರಭಾಗದಲ್ಲಿ ಸವಾರಿ ಎಂದಿನಂತೆ ಸವಾರಿ ಇರುವುದಿಲ್ಲ. ಅಂದರೆ, ಈ ಬಾರಿಯ ದಸರಾ, ಚಾಮುಂಡಿ ಬೆಟ್ಟ ಹಾಗೂ ಮೈಸೂರು ಅರಮನೆಗೆ ಮಾತ್ರ ಸೀಮಿತವಾಗಿರಲಿದೆ.
ಇದನ್ನೂ ಓದಿ:ಸರಸವಾಡೋಣ ಬಾರೋ ಎಂದು ಈತ ಆತನನ್ನು ಕರೆದ- ಆಮೇಲೇನಾಯ್ತು?
ಈ ಬಾರಿಯ ನಾಡಹಬ್ಬ ದಸರಾವನ್ನು ವಿಶೇಷವಾಗಿ ಕರೊನಾ ವಾರಿಯರ್ಸ್​​​​​​ ಉದ್ಘಾಟನೆ ಮಾಡಲಿದ್ದಾರೆ. ಆದರೆ, ಪ್ರತಿ ಬಾರಿಯಂತೆ ಮಕ್ಕಳ ದಸರಾ, ಮಹಿಳಾ ದಸರಾ, ಯುವದಸರಾ, ಕುಸ್ತಿ ಪಂದ್ಯಾವಳಿ, ಆಹಾರ ಮೇಳ, ಪಂಜಿನ ಕವಾಯತು ಕೂಡ ಈ ಬಾರಿ ನಡೆಯುವುದಿಲ್ಲ.
ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯುವುದಿಲ್ಲ. ಅಷ್ಟೇ ಅಲ್ಲದೇ ಈ ಬಾರಿಯ ದಸರಾ ಮಹೋತ್ಸವದಲ್ಲಿ ಚೀನಿ ವಸ್ತುಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಸರ್ಕಾರ ನಿರ್ಧರಿಸಿದೆ.
ಲಡಾಖ್​ ಗಡಿಯಲ್ಲಿ ಗುಂಡಿನ ಸದ್ದು- 45 ವರ್ಷಗಳ ನಂತರ ಫೈರಿಂಗ್​! ಕದನದ ಮುನ್ಸೂಚನೆ?

ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ

ಬಿರುಗಾಳಿಗೆ ಸಿಲುಕಿ 30 ಗಂಟೆ ಹೋರಾಡಿ ಸಾವನ್ನು ಜಯಿಸಿದ ಉಳ್ಳಾಲದ ಮೀನುಗಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:12 − five =
Remember me
