ಬೆಂಗಳೂರು:ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಗಲಭೆ ಪ್ರಕರಣವೀಗ ಆಡಳಿತ ಪಕ್ಷ, ವಿರೋಧ ಪಕ್ಷಗಳ ನಡುವೆ ವಾಕ್ಸಮರಕ್ಕೆ ನಾಂದಿ ಹಾಡಿದೆ. ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡುವುದರಲ್ಲಿಯೇ ತಲ್ಲೀನರಾಗಿದ್ದಾರೆ.
ಗಲಭೆಗೆ ಸಂಬಂಧಿಸಿದಂತೆ ಇದಾಗಲೇ ಹಲವಾರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ರೀತಿ ಬಂಧನಕ್ಕೆ ಒಳಗಾಗಿರುವವರ ಪೈಕಿ ಉಗ್ರರ ನಂಟು ಇರುವವರೂ ಸೇರಿದ್ದಾರೆ ಎನ್ನುವ ಆತಂಕದ ವಿಷಯವನ್ನೂ ಪೊಲೀಸರು ಬಹಿರಂಗಪಡಿಸಿದ್ದಾರೆ.
ಈ ಮಧ್ಯೆಯೇ, ಬಂಧಿತರ ಪರವಾಗಿ ನಿಲ್ಲುವಂತೆ ಹೇಳಿಕೆ ನೀಡಿರುವ ಶಾಸಕ ಜಮೀರ್‌ ಅಹಮ್ಮದ್‌ ಖಾನ್‌, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಎಷ್ಟು ಮುಖ್ಯವೋ ಅಮಾಯಕರು ಶಿಕ್ಷೆಗೆ ಒಳಗಾಗದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ಈ ವಿಚಾರದಲ್ಲಿ ಸರ್ಕಾರ ಮಾತೃ ಹೃದಯದಿಂದ ವರ್ತಿಸಿ, ಘಟನೆಗೆ ಸಂಬಂಧಪಡದವರು ಬಂಧಿಸಲ್ಪಟ್ಟಿದ್ದರೆ ಅವರನ್ನು ತಕ್ಷಣ ಬಿಡುಗಡೆಗೊಳಿಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ.|
ಮಾನ್ಯ ಜಮೀರ್ ಅಹ್ಮದ್ ಅವರೇ, ತನಿಖೆಗೆ ಮುಂಚೆಯೇ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಆರೋಪಿಗಳಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ಕೊಟ್ಟವರು ಯಾರು ಎಂಬುದನ್ನು ಆಲೋಚನೆ ಮಾಡಬೇಕಲ್ಲ?
ಮಾತೃ ಹೃದಯದಿಂದ ವರ್ತಿಸಬೇಕು ಎಂದು ಬಯಸುವವರು ಮಾತೆಗೆ ತಕ್ಕ ಮಕ್ಕಳಾಗಿಯೂ ಇರಬೇಕಲ್ಲ?https://t.co/CW89Uoybfr
— C T Ravi 🇮🇳 ಸಿ ಟಿ ರವಿ (@CTRavi_BJP)August 20, 2020

.ಈ ಟ್ವೀಟ‌ಗೆ ಭಾರಿ ಟೀಕೆಗಳು ವ್ಯಕ್ತವಾಗಿರುವ ಬೆನ್ನಲ್ಲೇ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಸಚಿವ ಸಿ.ಟಿ.ರವಿ ಅವರು, ಮಾನ್ಯ ಜಮೀರ್ ಅಹ್ಮದ್ ಅವರೇ, ತನಿಖೆಗೆ ಮುಂಚೆಯೇ ಕೆ ಜಿ ಹಳ್ಳಿ, ಡಿ ಜೆ ಹಳ್ಳಿ ಆರೋಪಿಗಳಿಗೆ ಅಮಾಯಕರು ಎಂದು ಸರ್ಟಿಫಿಕೇಟ್ ಕೊಟ್ಟವರು ಯಾರು ಎಂಬುದನ್ನು ಆಲೋಚನೆ ಮಾಡಬೇಕಲ್ಲವೆ? ಮಾತೃ ಹೃದಯದಿಂದ ವರ್ತಿಸಬೇಕು ಎಂದು ಬಯಸುವವರು ಮಾತೆಗೆ ತಕ್ಕ ಮಕ್ಕಳಾಗಿಯೂ ಇರಬೇಕಲ್ಲವೆ ಎಂದು ಚುಚ್ಚಿದ್ದಾರೆ.
ಈ ಟ್ವೀಟ್‌ಗೆ ಪರ-ವಿರೋಧ ನಿಲುವುಗಳು ವ್ಯಕ್ತವಾಗಿವೆ. ಕೆಲವರು ಜಮೀರ್‌ ಪರವಾಗಿ ನಿಂತಿದ್ದರೆ, ಇನ್ನು ಹಲವರು ರವಿ ಪರವಾಗಿ ಮಾತನಾಡಿದ್ದಾರೆ.
FACT CHECK: ಪ್ರಧಾನಿ ಮೋದಿ ನೆಹರು ಪ್ರತಿಮೆಗೆ ನಮಸ್ಕರಿಸಿದ್ರಾ? ಸತ್ಯಾಂಶ ಏನು?

ಮೊದಲ ಬಾರಿಗೆ ಪಿಸಿಎಂಬಿ ಪುಸ್ತಕ ಕನ್ನಡ ಭಾಷೆಯಲ್ಲಿ: ಸುರೇಶ್‌ ಕುಮಾರ್‌

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:10 + fifteen =
Remember me
