ಬೆಂಗಳೂರು:ನಾಡು-ನುಡಿಯ ಶ್ರೇಷ್ಠತೆ, ಸಂಸ್ಕೃತಿ, ಪರಂಪರೆ ಸಂರಕ್ಷಣೆ, ಅಭಿಮಾನ ಬೆಳೆಸುವ ಜತೆಗೆ ನವಪೀಳಿಗೆಯಲ್ಲಿ ಜಾಗೃತಿ ಮೂಡಿಸಲೆಂದು ರಾಜ್ಯದ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಬಳಿಕ ನಾಡಗೀತೆ ಕಡ್ಡಾಯಗೊಳಿಸಲು ಕನ್ನಡಪರ ಸಂಘಟನೆಗಳು ಮನವಿ ಮಾಡಿವೆ.
ಆರ್ ಟಿ ನಗರದ ಸಿಎಂ ಖಾಸಗಿ ನಿವಾಸದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರಿಗೆ ‘ಬನಾರಸ್’ ಬಹುಭಾಷಾ ಸಿನಿಮಾದ ನವ ನಾಯಕ ನಟ ಹಾಗೂ ಶಾಸಕ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಿಯೋಗ ಭೇಟಿ ಮಾಡಿ ಮನವಿ ಸಲ್ಲಿಸಿದೆ.
ಇದೇ ಸಂದರ್ಭದಲ್ಲಿ ತಾವು ನಟಿಸಿದ ಮೊದಲ ಚಲನಚಿತ್ರ ‘ಬನಾರಸ್’ ಕನ್ನಡ ಸೇರಿ ಬಹುಭಾಷೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ನ.4ರಂದು ಬಿಡುಗಡೆಯಾಗಲಿದ್ದು, ವೀಕ್ಷಿಸಲು ಆಗಮಿಸಬೇಕು ಎಂದು ಬೊಮ್ಮಾಯಿ‌ಗೆ ವಿನಂತಿಸಿದ್ದಾರೆ.
ಸಂಬಂಧವಿಲ್ಲಸಿಎಂ ಬೊಮ್ಮಾಯಿ‌ ಭೇಟಿ ನಂತರ ಜೈದ್ ಖಾನ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ರಾಷ್ಟ್ರಕವಿ ಕುವೆಂಪು ರಚಿಸಿದ ಗೀತೆಯನ್ನು ರಾಜ್ಯ ಸರ್ಕಾರ ಅಧಿಕೃತವಾಗಿ‌ ನಾಡಗೀತೆ ಎಂದು ಆದೇಶಿಸಿದ್ದು, ದೇಶಪ್ರೇಮದ ಜತೆಗೆ ನಾಡಿನ ಅಭಿಮಾನ ಹೆಚ್ಚಿಸಲು ಮಲ್ಟಿಪ್ಲೆಕ್ಸ್ ಸೇರಿ ಎಲ್ಲ ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಬಳಿಕ ‌ನಾಡಗೀತೆ ಹಾಡು ಕಡ್ಡಾಯಗೊಳಿಸಲು ಮುಖ್ಯಮಂತ್ರಿಗೆ ಮನವಿ ಮಾಡಲಾಗಿದೆ ಎಂದರು.
ಬನಾರಸ್ ಸಿನಿಮಾವನ್ನು ಹಿಂದೂಪರ ಸಂಘಟನೆಗಳ ವಿರೋಧವೇಕೆ ಎನ್ನುವುದು ಗೊತ್ತಿಲ್ಲ. ನನ್ನ ತಂದೆಯವರ ಕಾರಣಕ್ಕೆ ವಿರೋಧಿಸುತ್ತಿದ್ದರೆ ನನಗೂ, ಅದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾನಾಯಿತು, ನನ್ನ ಸಿನಿಮಾ ಇಂಡಸ್ಟ್ರಿ ಆಯಿತು ಎಂದು ಇದ್ದೇನೆ. ಏನೇ ವಿರೋಧ ಬಂದರೂ ಎದುರಿಸುವೆ. ಇಂತಹ ವಿರೋಧಗಳಿಂದ ಸಿನಿಮಾ ಸೋಲಬಹುದು ಅಥವಾ ಗೆಲ್ಲಬಹುದು ಇವೆರಡೇ ಪರಿಣಾಮಗಳಾಗುತ್ತವೆ. ಆದರೆ ಅನಗತ್ಯ ವಿರೋಧ ಸರಿಯಲ್ಲ ಎಂದು ಜೈದ್ ಖಾನ್ ಹೇಳಿದರು.
‘ಹರ್ ಘರ್ ಭಗವಾ’ದಲ್ಲಿ ಭಾಗವಹಿಸಿ; ‘ಹಿಂದೂ ರಾಷ್ಟ್ರ ವೀರ’ ಪ್ರಮಾಣಪತ್ರ ಪಡೆಯಿರಿ… ಇಲ್ಲಿದೆ ವಿವರ
VIDEO: ಉರಗ ತಜ್ಞ ಹಾವು ಹಿಡೀತಿದ್ದಂತೆಯೇ ಶಿವಮೊಗ್ಗದ ಮಹಿಳೆಯರ ಮೈಮೇಲೆ ಹೀಗೆ ಬಂದ ನಾಗದೇವ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:sixteen + nine =
Remember me
