ಬೆಂಗಳೂರು:ಮಾಜಿ ಸಚಿವ ರಮೇಶ್​ ಜಾರಕಿಹೊಳಿಯ ಸಿ.ಡಿ ಕೇಸ್​ ಕ್ಷಣಕ್ಷಣಕ್ಕೂ ಕುತೂಹಲದ ತಿರುವು ಪಡೆದುಕೊಳ್ಳುತ್ತಿದೆ. ಇದಾಗಲೇ ಕೆಲವರನ್ನು ವಿಶೇಷ ತನಿಖಾ ತಂಡದ (ಎಸ್​ಐಟಿ) ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಇನ್ನು ಕೆಲವರಿಗಾಗಿ ಜಾಲ ಬೀಸಿದ್ದಾರೆ.
ಈ ನಡುವೆಯೇ ಸಿ.ಡಿಯಲ್ಲಿ ಇರುವ ಸಂತ್ರಸ್ತೆ ಎಂದು ಹೇಳಿಕೊಂಡಿರುವ ಯುವತಿಗೂ ತನಿಖಾಧಿಕಾರಿಗಳು ನೋಟಿಸ್​ ಜಾರಿ ಮಾಡಿದ್ದಾರೆ. ಘಟನೆಯ ನಂತರದ ಬೆಳವಣಿಗೆಗಳ ಬಳಿಕ ಕಾಣೆಯಾಗಿದ್ದ ಯುವತಿ, ಕೊನೆಗೂ ಸಿಕ್ಕಿದ್ದು, ಆಕೆಯನ್ನು ವಿಚಾರಣೆ ಮಾಡುವ ಸಲುವಾಗಿ ನೋಟಿಸ್​ ಜಾರಿಗೊಳಿಸಲಾಗಿದೆ.
ಈ ನಡುವೆಯೇ ಈ ಯುವತಿಯ ಕುರಿತು ಕೆಲವೊಂದು ಕುತೂಹಲದ ಮಾಹಿತಿಗಳು ಲಭ್ಯವಾಗಿವೆ. ಅದೇನೆಂದರೆ ಈಕೆ ಉತ್ತರ ಕರ್ನಾಟಕದವಳು. ಈಕೆ ಯುವಕನೊಬ್ಬನನ್ನು ಐದು ವರ್ಷಗಳಿಂದ ಪ್ರೀತಿಸುತ್ತಿದ್ದಳು. ಮೂರು ತಿಂಗಳ ಹಿಂದಷ್ಟೇ ಇವರ ಮದುವೆಯ ಮಾತುಕತೆಯೂ ನಡೆದಿತ್ತು. ಆದರೆ ಈ ನಡುವೆಯೇ ಸಿ.ಡಿ ಕೇಸ್​ನಲ್ಲಿ ಯುವತಿ ಸಿಲುಕಿದ್ದಾಳೆ.
ಅಂದ ಹಾಗೆ ಈಕೆ ಬ್ಯಾಚುಲರ್ ಆಫ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದಾಳೆ. ಐದು ವರ್ಷದ ಹಿಂದೆ ಆ ಯುವಕನ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಮದುವೆಯವರೆಗೂ ಮಾತುಕತೆ ನಡೆದಿತ್ತು.
3 ತಿಂಗಳ ಹಿಂದೆ ಇಬ್ರೂ ಮದುವೆ ಆಗೋಣ ಅಂತ ನಿರ್ಧರಿಸಿದ್ದರು. ಈ ಕುರಿತು ಯುವಕ ತನ್ನ ಮನೆಯಲ್ಲೂ ವಿಚಾರ ಹೇಳಿದ್ದ. ಈ ಹಿನ್ನೆಲೆಯಲ್ಲಿ ಯುವಕನ ಮನೆಯವರ ಜತೆಗೂ ಯುವತಿ ಸಂಪರ್ಕದಲ್ಲಿದ್ದಳು. ಈ ಎಲ್ಲಾ ವಿಷಯಗಳು ಇದೀಗ ಎಸ್​ಐಟಿ ತಂಡಕ್ಕೆ ತಿಳಿದುಬಂದಿದ್ದು, ಸಂತ್ರಸ್ತೆಯ ಕೆಲ ಸ್ನೇಹಿತರು ಹಾಗೂ ಕುಟುಂಬಸ್ಥರಿಗೂ ಪೊಲೀಸರು ನೋಟಿಸ್​ ನೀಡಿದ್ದಾರೆ.
ಅಶ್ಲೀಲ ಸಿಡಿ ಪ್ರಕರಣ: ಕೊನೆಗೂ ದೂರು ನೀಡಿದ ರಮೇಶ್ ಜಾರಕಿಹೊಳಿ, ದೂರಿನಲ್ಲಿ ಏನಿದೆ?

ಅಶ್ಲೀಲ ಸಿಡಿ ಪ್ರಕರಣ: ‘ಸಂತ್ರಸ್ತ’ ಯುವತಿಯಿಂದಾಗಿ ಕಣ್ಣೀರಿಡುತ್ತಿರುವ ಪಿಜಿ ಮಾಲೀಕರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one × 3 =
Remember me
