ನೆಲಮಂಗಲ:ಸಿಡಿ ಹಗರಣದಲ್ಲಿ ಸಿಲುಕಿದ್ದ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಅವರ ಪ್ರಕರಣಕ್ಕೆ ಈಗ ಟ್ವಿಸ್ಟ್‌ ಸಿಕ್ಕು ಅದರಲ್ಲಿ ಇರೋದು ತಾನೇ ಅವರು ಒಪ್ಪಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಇದೀಗ ಭಾರಿ ಚರ್ಚೆ ಶುರುವಾಗಿದ್ದು, ಮಾಜಿ ಶಾಸಕ, ರಮೇಶ್ ಜಾರಕಿಹೊಳಿ ಆಪ್ತ ಎಂ.ವಿ ನಾಗರಾಜು ಈ ವಿಷಯದಲ್ಲಿ ತಮಗೇನೂ ಗೊತ್ತಿಲ್ಲ ಎನ್ನುವಂತೆ ನುಣುಚಿಕೊಂಡಿದ್ದಾರೆ.
ನೆಲಮಂಗದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ನಾಗರಾಜು, ಈ ಹಿಂದೆ ಸಿಡಿ ಬಗ್ಗೆ ನನಗೆ ಅಷ್ಟೇನೂ ಮಾಹಿತಿ ಇರಲಿಲ್ಲ, ಜಾರಕಿಹೊಳಿ ಅವರು ಮೊದಲು ಅದರಲ್ಲಿ ಇರುವುದು ತಾವಲ್ಲ ಎಂದಿದ್ದರು. ಆದರೆ ಇದೀಗ ಅದರಲ್ಲಿ ಇರುವುದು ತಾವೇ ಎಂದು ಹೇಳಿದ್ದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ ಎಂದರು.
ಘಟನೆ ಬೆಳಕಿಗೆ ಬಂದಾಗಲೂ ನಾನು ವಿಡಿಯೋದಲ್ಲಿ ಇರುವುದು ಜಾರಕಿಹೊಳಿ ಅಲ್ಲ ಅಂದಿದ್ದೆ. ಈಗಲೂ ಅದನ್ನೇ ಹೇಳುತ್ತಿದ್ದೇನೆ. ಆದರೆ ಅವರ ವೈಯಕ್ತಿಕ ವಿಚಾರ ಏನಾಗಿದೆಯೋ ನನಗೆ ಗೊತ್ತಿಲ್ಲ. ರಾಜಕೀಯವಾಗಿ ಆತ್ಮೀಯತೆ ಯಿಂದ ಇದ್ದೇವೆ, ಆದರೆ ಈ ವಿಷಯದ ಬಗ್ಗೆ ನನಗೆ ಗೊತ್ತಿಲ್ಲ ಎಂದರು.
ಅವರು ಇರೋದು ಬೆಳಗಾವಿಯಲ್ಲಿ, ನಾನಿರೋದು ಬೆಂಗಳೂರಿನಲ್ಲಿ. ಅವರು ಬೆಂಗಳೂರಿಗೆ ಬಂದಾಗ ಭೇಟಿ ಮಾಡುತ್ತಿದ್ದೆವು ಅಷ್ಟೇ. ಅವರನ್ನು ಪಕ್ಷಕ್ಕೆ ಕರೆದುಕೊಂಡು ಬಂದವನು ನಾನೇ, ಸೇರಿಸಿದ್ದು ಕೂಡ ನಾನೇ. ಹಾಗೆಂದು ಅವರ ವೈಯಕ್ತಿಕ ವಿಚಾರಗಳು ನನಗೇನು ಗೊತ್ತಿರುತ್ತದೆ? ಪ್ರಕರಣ ಬೆಳಕಿಗೆ ಬರುವ ನಾಲ್ಕೂವರೆ ತಿಂಗಳ ಮುಂಚೆಯೆ ನನಗೆ ಗೊತ್ತಿತ್ತು, ಯಾವುದೋ ಸಿಡಿ ಇದೆ ಎಂದು ಅವರು ಹೇಳಿದ್ದರು. ನಂತರ ಇದರಲ್ಲಿ ಷಡ್ಯಂತ್ರ ಇದೆ. ಅದರಲ್ಲಿ ಇರುವುದು ನಾನಲ್ಲ, ಅಂಥ ಕೆಲಸ ನಾನು ಮಾಡುವುದಿಲ್ಲ ಎಂದಿದ್ದರು.
ಇದೀಗ ರಾಜಕೀಯವಾಗಿ ಷಡ್ಯಂತ್ರ ರೂಪಿಸಿ ಯಾರೋ ಉದ್ದೇಶಪೂರ್ವಕವಾಗಿ ಇಂಥ ಕೆಲಸ ಮಾಡಿಸಿದ್ದಾರೆ. ಈಗ ಅವರು ಸೇಫ್‌ ಆಗಬೇಕು ಎಂದು ಇವರು ಒಪ್ಪಿಕೊಂಡ ಹಾಗಿದೆ. ತನಿಖೆ ನಡೆದರೆ ಎಲ್ಲಾ ಗೊತ್ತಾಗುತ್ತದೆ. ಅಷ್ಟಕ್ಕೂ ಅದು ಅವರ ವೈಯಕ್ತಿಕ ವಿಚಾರ. ನನಗೇನು ಅದರ ಬಗ್ಗೆ ಅರಿವಿಲ್ಲ ಎಂದರು.
ನಿಮ್ಮ ಸಂಬಂಧ ಪತ್ನಿ ಒಪ್ಪಿಕೊಳ್ಳಬೇಕು, ಆದ್ರೆ ಅವಳ ಸಂಬಂಧ ನಿಮ್ಮಿಂದ ಜೀರ್ಣಿಸಿಕೊಳ್ಳಲು ಆಗ್ತಿಲ್ಲ ಅಲ್ವಾ?

ಬಾಬಾ ರಾಮ್‌ದೇವ್‌ ಕೊರೊನಿಲ್‌ ಔಷಧಕ್ಕೆ ಬೇಡಿಕೆ- ಒಂದು ಲಕ್ಷ ಸೋಂಕಿತರಿಗೆ ಉಚಿತವಾಗಿ ಕಿಟ್ ವಿತರಣೆ

ಹೆಣ್ಣುಮಕ್ಕಳಿಗೆ ತವರಿನಿಂದ ಬಂದಿರುವ ಆಸ್ತಿಯಲ್ಲಿ ಯಾರ‍್ಯಾರಿಗೆ ಪಾಲಿದೆ- ಕಾನೂನು ಹೇಳುವುದೇನು?

ವೀರಪ್ಪನ್ ಹಾರಿಸಿದ್ದ ಗುಂಡುಗಳನ್ನು ತಲೆಯಲ್ಲಿಟ್ಟುಕೊಂಡೇ 29 ವರ್ಷ ಸೇವಾ ನಿರತರಾಗಿದ್ದ ಪಿಎಸ್‌ಐ ನಿಧನ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − eleven =
Remember me
