ರಕ್ಷಣಾ ಸ್ಚಿವಾಲಯದ ಅಧೀನದಲ್ಲಿ ಕಾರ್ಯ ನಿರ್ವಹಿಸುವ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಭಾರತ್​ ಇಲೆಕ್ಟ್ರಾನಿಕ್ಸ್​ ಲಿಮಿಟೆಡ್​ನ​ (ಬಿಇಎಲ್​) ಪಂಜಾಬ್​ ಘಟಕದಲ್ಲಿ ಪ್ರಾಜೆಕ್ಟ್​ ಇಂಜಿನಿಯರ್​-1ಗಳನ್ನು ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಮೂರು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಅವಧಿ ವಿಸ್ತರಿಸಲಾಗುವುದು.
ಹುದ್ದೆಗಳ ವಿವರಪಂಜಾಬ್​ನಲ್ಲಿ ಕರ್ತವ್ಯ ನಿರ್ವಹಿಸಲು ಗುತ್ತಿಗೆ ಆಧಾರದ ಮೇಲೆ ಪ್ರಾಜೆಕ್ಟ್​ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. 26 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಸಾಮಾನ್ಯ-9, ಇತರ-5, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿ-3, ಎಸ್ಸಿ-4 ಮತ್ತು ಎಸ್ಟಿ-5 ಹುದ್ದೆಗಳನ್ನು ಮೀಸಲಿರಿಸಲಾಗಿದೆ. ಕಂಪನಿ ನಿಯಮದ ಪ್ರಕಾರ ಹುದ್ದೆಗಳ ಸಂಖ್ಯೆ ಏರಿಕೆಯಾಗಲೂಬಹುದು. ಇಳಿಕೆಯಾಗಲೂಬಹುದು.
ಶೈಣಿಕ ಅರ್ಹತೆಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಕನಿಷ್ಠ ಶೇ.55 ಅಂಕದೊಂದಿಗೆ ಇಲೆಕ್ಟ್ರಾನಿಕ್ಸ್​/ಇಲೆಕ್ಟ್ರಾನಿಕ್ಸ್​ ಆ್ಯಂಡ್​ ಕಮ್ಯುನಿಕೇಷನ್ಸ್​/ಟೆಲಿಕಮ್ಯುನಿಕೇಷನ್ಸ್​/ಕಂಪ್ಯೂಟರ್​ ಸೈನ್ಸ್​/ಇನ್​ಮೇರ್ಷನ್​ ಟೆಕ್ನಾಲಜಿ ವಿಷಯದಲ್ಲಿ ಬಿಇ, ಬಿಟೆಕ್​ ಅಥವಾ ಬಿಎಸ್ಸಿ ಪದವಿ ಪಡೆದಿರಬೇಕು.
ವಯೋಮಿತಿ1.6.2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಯ ವಯಸ್ಸು 32 ವರ್ಷ ನಿಗದಿಪಡಿಸಲಾಗಿದೆ. ಕನಿಷ್ಠ 2 ವರ್ಷ ಆಯಾ ಕ್ಷೇತ್ರದಲ್ಲಿ ವೃತ್ತಿ ಅನುಭವ ಕೇಳಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ 3ರಿಂದ 5 ವರ್ಷ ವಯೋಸಡಿಲಿಕೆ ಇರಲಿದೆ.
ವೇತನಪ್ರಥಮ ವರ್ಷ 45,000, ದ್ವಿತೀಯ ವರ್ಷ 50,000 ರೂ ಹಾಗೂ ಮೂರನೇ ವರ್ಷ 55,000 ರೂ. ಮಾಸಿಕ ವೇತನ ನಿಗದಿಪಡಿಸಲಾಗಿದೆ. ಮೂರು ವರ್ಷ ಕಂಪನಿಯಲ್ಲಿ ಟ್ರೇನಿ ಇಂಜಿನಿಯರ್​ ಆಗಿ ಸೇವೆ ಸಲ್ಲಿಸಿದವರು ನೇರವಾಗಿ ಪ್ರಾಜೆಕ್ಟ್​-ಈಈ ಇಂಜಿನಿಯರ್​ ಹುದ್ದೆಗೆ ಆಯ್ಕೆಯಾಗುತ್ತಾರೆ.
ಅರ್ಜಿ ಸಲ್ಲಿಸುವ ವಿಧಾನಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ಆರ್ಡಿನರಿ ಅಥವಾ ಸ್ಪೀಡ್​ ಪೋಸ್ಟ್​ ಮೂಲಕ ಅರ್ಜಿಗಳನ್ನು ಸಲ್ಲಿಸತಕ್ಕದ್ದು. 400 ರೂ. ಅರ್ಜಿ ಶುಲ್ಕ ಇರಲಿದೆ. (18 % ಜಿಎಸ್​ಟಿ) ಮೀಸಲಾತಿ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇದೆ. ಅಪೂರ್ಣ ಮತ್ತು ದಾಖಲೆಗಳಿಲ್ಲದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ.
ಆಯ್ಕೆ ವಿಧಾನಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಮೂರು ವರ್ಷದ ಅವಧಿಗೆ ಕಾರ್ಯಕ್ಷಮತೆ ಆಧರಿಸಿ ಇನ್ನೊಂದು ವರ್ಷ ಅವಧಿ ವಿಸ್ತರಿಸುವ ಸಾಧ್ಯತೆ ಇದೆ. ಲಿಖಿತ ಪರೀಕ್ಷೆ , ಸಂದರ್ಶನ ನಡೆಯುವ ದಿನಾಂಕವನ್ನು ಇ-ಮೇಲ್​ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 6.7.2022ಅಜ್ಜಿ ಸಲ್ಲಿಸಬೇಕಾದ ವಿಳಾಸ: Manager HR (SC-US/HLS-SCB), Bharat Electronics Ltd, Jalahalli post, Bengaluru – 560013
ಅಧಿಸೂಚನೆಗೆ:https://bit.ly/39ZjSS4
ಮಾಹಿತಿಗೆ:http://bel-india.in
ದಕ್ಷಿಣ ಕನ್ನಡ, ಚಿತ್ರದುರ್ಗ ಅಂಗನವಾಡಿಗಳಲ್ಲಿ ಮಹಿಳೆಯರಿಗೆ ಭರಪೂರ ಅವಕಾಶ: ಅರ್ಜಿ ಆಹ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
