ಚಿಕ್ಕಮಗಳೂರು ಜಿಲ್ಲೆಯ ಜಲ ಜೀವನ್​ ಮಿಷನ್​ ಯೋಜನೆಯಡಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಹಾಗೂ ಉಪವಿಭಾಗಗಳಲ್ಲಿ ಖಾಲಿ ಇರುವ ಸಹಾಯಕ ಇಂಜಿನಿಯರ್​ ಹಾಗೂ ಕಿರಿಯ ಇಂಜಿನಿಯರ್​ ಹುದ್ದೆಗಳನ್ನು ಭರ್ತಿ ಮಾಡಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎರಡು ಹುದ್ದೆಗೂ ಕನ್ನಡ ಭಾಷಾ ಜ್ಞಾನವನ್ನು ಕಡ್ಡಾಯವಾಗಿ ಕೇಳಲಾಗಿದೆ.
ಹುದ್ದೆ ವಿವರ* ಕಿರಿಯ ಸಮಾಲೋಚಕ (ಸಹಾಯಕ ಇಂಜಿನಿಯರ್​)-12ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್​ ಇಂಜಿನಿಯರಿಂಗ್​ ವಿಷಯದಲ್ಲಿ ಕನಿಷ್ಠ ಪ್ರಥಮ ಶ್ರೇಣಿಯನ್ನು ಪಡೆದಿರಬೇಕು. 30 ವರ್ಷ ಮೀರಿರಬಾರದರು ಹಾಗೂ ಕನಿಷ್ಠ 2 ವರ್ಷದ ಅನುಭವ ಹೊಂದಿರಬೇಕು.ವೇತನ: ಮಾಸಿಕ 40 ಸಾವಿರ ರೂ. ಇದೆ.
* ಕಿರಿಯ ಸಮಾಲೋಚಕ (ಕಿರಿಯ ಇಂಜಿನಿಯರ್​) – 6ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಸಿವಿಲ್​ ಇಂಜಿನಿಯರಿಂಗ್​ನಲ್ಲಿ ಡಿಪ್ಲೊಮಾ ಮಾಡಿದ್ದು, ಕನಿಷ್ಠ ಪ್ರಥಮ ಶ್ರೇಣಿ ಪಡೆದಿರಬೇಕು. ಪದವಿಯನ್ನು ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. 28 ವರ್ಷ ಮೀರಿರಬಾರದು ಹಾಗೂ ಕನಿಷ್ಠ 2ವರ್ಷದ ವೃತ್ತಿ ಅನುಭವ ಹೊಂದಿರಬೇಕು.ವೇತನ: ಮಾಸಿಕ 30 ಸಾವಿರ ರೂ. ನೀಡಲಾಗುವುದು.
ನೇಮಕಾತಿ1. ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ 11 ತಿಂಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು. ಕಾರ್ಯಮತೆ ಪರಿಶೀಲಿಸಿ ಕಾರ್ಯಾವಧಿ ಮುಂದುವರಿಸಬಹುದಾಗಿದೆ.
2. ನಿಗದಿಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.
3. ಅಭ್ಯರ್ಥಿಗಳ ಪದವಿ ಅಂಕ, ವೃತ್ತಿ ಅನುಭವದ ಅಧಾರದ ಮೇಲೆ ಮೆರಿಟ್​ ಪಟ್ಟಿ ತಯಾರಿಸಿ ಆಯ್ಕೆ ಮಾಡಲಾಗುವುದು.
4. ಅರ್ಹ ಅಭ್ಯರ್ಥಿಗಳು ಕನ್ನಡ ಪರೀಕ್ಷೆಗೆ ಹಾಜರಾಗಬೇಕು.
ಅರ್ಜಿ ಸಲ್ಲಿಸುವ ವಿಧಾನಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕಿದ್ದು, ಬೆಳಗ್ಗೆ 10 ರಿಂದ ಸಂಜೆ 5.30ರ ಒಳಗಾಗಿ ಸಲ್ಲಿಸಬೇಕಿದ್ದು, ಸರ್ಕಾರಿ ರಜಾ ದಿನಗಳಲ್ಲಿ ಆನ್​ಲೈನ್​ ಅರ್ಜಿಗಳು ಸ್ವೀಕೃತಿ ಆಗುವುದಿಲ್ಲ. ಎಲ್ಲ ದಾಖಲೆಗಳನ್ನು ಪಿಡಿಎಫ್​ ಸ್ವರೂಪದಲ್ಲಿ ಅಪ್​ಲೋಡ್​ ಮಾಡಬೇಕು. ಫೋಟೋ ಮತ್ತು ಸಹಿ ಜೆಪಿಜಿ/ಜೆಪಿಇಜಿ ಫಾಮ್ಯಾರ್ಟ್​ನಲ್ಲಿ ಇರಬೇಕು ಎಂದು ತಿಳಿಸಲಾಗಿದೆ. ಆಸಕ್ತ ಅಭ್ಯರ್ಥಿಗಳುhttps://bit.ly/3b04ll3ನಲ್ಲಿ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ : ಕಾರ್ಯಪಾಲಕ ಇಂಜಿನಿಯರ್​. ಗ್ರಾಮೀಣ ಕುಡಿಯುವ ನೀರು ವಿಭಾಗ . ಚಿಕ್ಕಮಗಳೂರು. ದೂ.08062-295795, ಇ-ಮೇಲ್​[email protected]ಸಂಪರ್ಕಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 24.06.2022ಅಧಿಸೂಚನೆಗೆ:https://bit.ly/3xPzO24
ಮಾಹಿತಿಗೆ:https://chikkamagaluru.nic.in/
ಎಸ್​ಬಿಐನಲ್ಲಿ ಖಾಲಿ ಇವೆ 14 ಹುದ್ದೆಗಳು: ಅರ್ಜಿ ಆಹ್ವಾನ- 80 ಸಾವಿರ ರೂ.ವರೆಗೆ ಸಂಬಳ

ಪತ್ನಿಗೆ ಮಕ್ಕಳಾಗದಿದ್ದರೆ ಮತ್ತೊಂದು ಮದುವೆಯಾಗಬಹುದಾ? ಪತಿಯ ಪ್ರಶ್ನೆಗೆ ವಕೀಲೆ ನೀಡಿರುವ ಉತ್ತರ ಇಲ್ಲಿದೆ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 + twenty =
Remember me
