ಧಾರವಾಡದ ಕರ್ನಾಟಕ ಸೆಂಟ್ರಲ್​ ಕೋ-ಆಪರೇಟಿವ್​ ಬ್ಯಾಂಕ್​ನಲ್ಲಿ ಖಾಲಿ ಇರುವ ಕ್ಲರ್ಕ್​ (ಸಹಾಯಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರಒಟ್ಟು 87 ಹುದ್ದೆಗಳಿದ್ದು, ಸಾಮಾನ್ಯ-44, ಪರಿಶಿಷ್ಟ ಜಾತಿ-13, ಪರಿಶಿಷ್ಟ ಪಂಗಡ-3, ಪ್ರವರ್ಗ-1-3, ಪ್ರವರ್ಗ-2ಎ-3, ಪ್ರವರ್ಗ-2ಬಿ-3, ಪ್ರವರ್ಗ-3ಎ-4 ಮತ್ತು ಪ್ರವರ್ಗ-3ಬಿ-4 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಹತೆಮಾನ್ಯತೆ ಪಡೆದ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಯಾವುದೇ ಪದವಿಯಲ್ಲಿ ಕನಿಷ್ಠ ಶೇ.60 (ಮೀಸಲಾತಿ ಅಭ್ಯರ್ಥಿಗಳು ಶೇ.55) ಅಂಕದೊಂದಿಗೆ ಉತ್ತೀರ್ಣರಾಗಿರಬೇಕು. ಕನ್ನಡ ಓದುವ ಮತ್ತು ಬರೆಯುವ ಸಾಮರ್ಥ್ಯ ಇರಬೇಕು. ಕಂಪ್ಯೂರ್​ ಆಪರೇಷನ್​ ಮತ್ತು ಅಪ್ಲಿಕೇಶನ್​ನಲ್ಲಿ ಜ್ಞಾನ ಹೊಂದಿರಬೇಕು.
ವಯೋಮಿತಿ, ವೇತನಕನಿಷ್ಠ 18 ವರ್ಷ ನಿಗದಿಪಡಿಸಿದ್ದು, ಗರಿಷ್ಠ ಸಾಮಾನ್ಯ ವರ್ಗಕ್ಕೆ 35 ವರ್ಷ, ಇತರ ಹಿಂದುಳಿದ ವರ್ಗಕ್ಕೆ 38 ವರ್ಷ, ಪ.ಜಾತಿ, ಪ.ಪಂ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 40 ವರ್ಷ, ಮಾಜಿ ಸೈನಿಕರಿಗೆ 45 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. 16,000ದಿಂದ 29,600 ರೂ.ವರೆಗೆ ಮಾಸಿಕ ವೇತನ ಇರಲಿದೆ.
ಅರ್ಜಿ ಸಲ್ಲಿಕೆ ವಿಧಾನಸಾಮಾನ್ಯ ಅಭ್ಯರ್ಥಿಗಳು 1180 ರೂ. ಅರ್ಜಿ ಶುಲ್ಕವನ್ನು ನೆಫ್ಟ್​ ಮೂಲಕ ಜಮಾ ಮಾಡಿ ಯುಟಿಆರ್​ ನಂಬರ್​ ಅನ್ನು ಆನ್​ಲೈನ್​ ಅಪ್ಲಿಕೇಷನ್​ ಫಾಮ್​ರ್ನಲ್ಲಿ ನಮೂದಿಸಿ ಚಲನ್​ ಪ್ರತಿ ಅಪ್​ಲೋಡ್​ ಮಾಡಬೇಕು. ಅರ್ಜಿಯಲ್ಲಿ ತಪ್ಪು ಮಾಹಿತಿ ನಮೂದಿಸಿದರೆ ಯಾವುದೇ ಮುನ್ಸೂಚನೆ ಇಲ್ಲದೆ ತಿರಸ್ಕರಿಸಲಾಗುವುದು. ಮೀಸಲಾತಿ ಕೋರುವವರು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಆಯ್ಕೆಯ ಮಾನದಂಡಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು. ಪದವಿಯಲ್ಲಿ ಪಡೆದ ನಿಗದಿತ ಆಂಕಗಳ ಪ್ರತಿಶತ ಆಧಾರದ ಮೇಲೆ ಅರ್ಹತೆ ಇರುವ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಗೆ ಆಹ್ವಾನಿಸಲಾಗುವುದು. ಅಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿ ತಯಾರಿಸಿ 1:5 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಯಲಾಗುವುದು. ಕನ್ನಡ, ಸಾಮಾನ್ಯ ಇಂಗ್ಲಿಷ್​, ಸಾಮಾನ್ಯ ಜ್ಞಾನ, ಸಹಕಾರಿ ವಿಷಯ, ಭಾರತ ಸಂವಿಧಾನ ಮತ್ತು ವಸ್ತುನಿಷ್ಠ ವಿಷಯ ಹಾಗೂ ಬ್ಯಾಂಕಿಂಗ್​ ಚಟುವಟಿಕೆಗಳಿಗೆ ಸಂಬಂಧಿಸಿದಂತೆ 200 ಅಂಕಗಳ ಲಿಖಿತ ಪರೀಕ್ಷೆ ನಡೆಯಲಿದೆ. ವೆಬ್​ಸೈಟ್​ನಲ್ಲಿ ನೀಡುವ ಹಾಲ್​ಟಿಕೆಟ್​ ಡೌನ್​ಲೋಡ್​ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು.
ಅರ್ಜಿ ಸಲ್ಲಿಸಲು ಕೊನೇ ದಿನ: 30.9.2022ಅಧಿಸೂಚನೆಗೆ:https://bit.ly/3x1G5Hq
ಮಾಹಿತಿಗೆ:https://kccbankdharwad.in/ಅಥವಾ 9036377735
ಎಂಟು ತಿಂಗಳ ಮಗುವಿನ ಪ್ರಾಣ ಕಸಿದ ಮೊಬೈಲ್​ ಚಾರ್ಜಿಂಗ್​: ಬ್ಯಾಟರಿ ಸ್ಫೋಟದಿಂದ ಭಾರಿ ಅನಾಹುತ

ಸಿಡ್ನಿಯಲ್ಲಿ ಸಿಕ್ಕಿತು ಎಲಿಜಬೆತ್​ ಬರೆದ ನಿಗೂಢ ಪತ್ರ: ಇದರ ರಹಸ್ಯ ಅರಿಯಲು ಇನ್ನೂ 63 ವರ್ಷ ಕಾಯಬೇಕು!

ದಸರಾಕ್ಕಿಲ್ಲ 15 ದಿನಗಳ ರಜೆ: ಸರ್ಕಾರದಿಂದ ಹೊರಟಿದೆ ಈ ಆದೇಶ- ಪ್ರವಾಸಕ್ಕೆ ಪ್ಲ್ಯಾನ್​ ಮಾಡಿಕೊಂಡಿದ್ರೆ ಹುಷಾರ್​…

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:seventeen + 5 =
Remember me
