ಕಾರ್ಮಿಕರ ರಾಜ್ಯ ವಿಮಾ ನಿಗಮದ ಬೆಂಗಳೂರಿನ ರಾಜಾಜಿನಗರದಲ್ಲಿರುವ ಪಿಜಿಐಎಂಎಸ್​ಆರ್​ ವೈದ್ಯಕಿಯ ಕಾಲೇಜಿನಲ್ಲಿ ಪ್ರೊಫೆಸರ್​, ಅಸೋಸಿಯೇಟ್​ ಪ್ರೊಫೆಸರ್​ ಮತ್ತು ಅಸಿಸ್ಟೆಂಟ್​ ಪ್ರೊಫೆಸರ್​ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದ್ದು, ನೇರ ಸಂದರ್ಶನದ ಮೂಲಕ ಅರ್ಹರನ್ನು ಆಯ್ಕೆ ಮಾಡಲಾಗುವುದು.
ಹುದ್ದೆಗಳ ವಿವರಚೆಸ್ಟ್​ ಆ್ಯಂಡ್​ ಟಿಬಿ ವಿಭಾಗದಲ್ಲಿ ಪ್ರೊಫೆಸರ್‌ ​-1 (ಸಾಮಾನ್ಯ), ಎಮರ್ಜೆನ್ಸಿ ಮೆಡಿಸಿನ್​, ಜನರಲ್​ ಮೆಡಿಸಿನ್​ ಮತ್ತು ಸೈಕಿಯಾಟ್ರಿ ವಿಭಾಗದಲ್ಲಿ ಅಸೋಸಿಯೇಟ್​ ಪ್ರೊಫೆಸರ್‌ ​-5 (ಸಾಮಾನ್ಯ-2, ಆರ್ಥಿಕವಾಗಿ ಹಿಂದುಳಿದ-1, ಇತರ-1, ಎಸ್ಸಿ-1) ಹಾಗೂ ಎಮೆರ್ಜನ್ಸಿ ಮೆಡಿಸಿನ್​, ಪ್ಯಾಥಾಲಜಿಮ ಚೆಸ್ಟ್​ ಆ್ಯಂಡ್​ ಟಿಬಿ, ಜನರಲ್​ ಮೆಡಿಸಿನ್​, ಾರೆನ್​ಸಿಕ್​ ಮೆಡಿಸಿನ್​ ಮತ್ತು ಕಮ್ಯುನಿಟಿ ಮೆಡಿಸಿನ್​ ವಿಭಾಗದಲ್ಲಿ ಅಸ್ಟಿಸ್ಟೆಂಟ್​ ಪ್ರೊಫೆಸರ್‌ ​-7 ಹುದ್ದೆ (ಸಾಮಾನ್ಯ-3, ಆಥಿರ್ಕವಾಗಿ ಹಿಂದುಳಿದ-1, ಇತರ-2 ಮತ್ತು ಎಸ್ಸಿ-1) ಹುದ್ದೆ ಮೀಸಲಿರಿಸಲಾಗಿದೆ. ಹುದ್ದೆಗಳ ಸಂಖ್ಯೆಯಲ್ಲಿ ಏರಿಕೆಯೂ ಆಗಬಹುದು ಇಳಿಕೆಯೂ ಆಗಬಹುದು. ಮೀಸಲಾತಿ ಅಭ್ಯಥಿರ್ಗಳು ಇಲ್ಲದಿದ್ದರೆ ಸಾಮಾನ್ಯವರ್ಗದ ಅಭ್ಯಥಿರ್ಗಳನ್ನೇ ಮೀಸಲಾತಿ ಹುದ್ದೆಗೆ ನೇಮಿಸಲಾಗುವುದು.
ವಯೋಮಿತಿ: ಸಂದರ್ಶನಕ್ಕೆ ಹಾಜರಾಗುವ ದಿನಾಂಕಕ್ಕೆ ಅನ್ವಯವಾಗುವಂತೆ ಎಲ್ಲ ಹುದ್ದೆಗಳ ಅಭ್ಯಥಿರ್ಗಳಿಗೂ ಗರಿಷ್ಠ 67 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ವೈದ್ಯಕಿಯ ಪದವಿ ಪಡೆದಿರಬೇಕು. ಎಲ್ಲ ಹುದ್ದೆಗಳಿಗೂ 3ರಿಂದ 9 ವರ್ಷ ವೃತ್ತಿ ಅನುಭವ ಕೇಳಲಾಗಿದೆ.
ವೇತನ: ಅಸಿಸ್ಟೆಂಟ್​ ಪ್ರೊಫೆಸರ್‌ ​ಗೆ 1,30,797 ರೂ. ಅಸೋಸಿಯೇಟ್​ ಪ್ರೊಫೆಸರ್​ಗೆ 1,52,241 ಹಾಗೂ ಪ್ರೊಫೆಸರ್​ಗೆ 2,28,942 ಲಕ್ಷ ರೂ. ವರೆಗೆ ಮಾಸಿಕ ವೇತನ ಇರಲಿದೆ. ವೃತ್ತಿ ಅನುಭವದ ಆಧಾರದ ಮೇಲೆ ವೇತನ ನಿಗದಿಯಾಗಲಿದೆ. ಇದರೊಂದಿಗೆ ಕಂಪನಿ ನಿಯಮದಂತೆ ಇತರ ಭತ್ಯೆ ಕೂಡ ಇರಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಸಂಸ್ಥೆಯ ವೆಬ್​ಸೈಟ್​ನಲ್ಲಿ ಅರ್ಜಿಡೌನ್​ಲೋಡ್​ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸತಕ್ಕದ್ದು. ದಾಖಲೆ ಸರಿ ಇಲ್ಲದ, ಅಪೂರ್ಣ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
ಆಯ್ಕೆ ಪ್ರಕ್ರಿಯೆ: ಶೈಕ್ಷಣಿಕ ಮತ್ತು ವೃತ್ತಿ ಅನುಭವದ ಆಧಾರದ ಮೇಲೆ ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಯಾವುದೇ ಅವಧಿಯಲ್ಲಿ ಕೆಲಸದಿಂದ ತೆಗೆಯುವ ಅಧಿಕಾರ ಸಂಸ್ಥೆಗಿರುತ್ತದೆ. ಆಯ್ಕೆಯಾಗುವ ಅಭ್ಯಥಿರ್ಗಳು 85,000 ರೂ. ಸೆಕ್ಯುರಿಟಿ ಡೆಪಾಸಿಟ್​ ಇಡಬೇಕು. ಒಂದು ವರ್ಷದೊಳಗೆ ಕೆಲಸದಿಂದ ಬಿಟ್ಟರೆ ಆ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ.
ಅರ್ಜಿಸಲ್ಲಿಸಲು ಕೊನೇ ದಿನ: 12.5.2022ಅಧಿಸೂಚನೆಗೆ:https://bit.ly/3vAOSzx
ಮಾಹಿತಿಗೆ:https://www.esic.nic.in/
ನಾನೇ ಬೇರೆ, ನನ್ನ ಆಡಳಿತದ ಸ್ಟೈಲೇ ಬೇರೆ: ಅಧಿಕಾರಿಗಳಿಗೆ ಚಾಟಿ ಬೀಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
