ದೇಶದಅಭಿವೃದ್ಧಿಯ ದಿಶಾನಿದೇರ್ಶನಗಳನ್ನು ರೂಪಿಸುವ ಸಂವಿಧಾನಬದ್ಧ ಸಂಸ್ಥೆ ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆ್​ ಟ್ರಾನ್ಸ್​ಫಾರ್ಮಿಂಗ್​ ಇಂಡಿಯಾ ಆಯೋಗ್​ (ನೀತಿ ಆಯೋಗ) ನಲ್ಲಿ ಯಂಗ್​ ಪ್ರೊಫೆಷನಲ್ಸ್​ ಹಾಗೂ ಕನ್ಸಲ್ಟೆಂಟ್​ ಹುದ್ದೆಗೆ ನೇಮಕ ಮಾಡಿಕೊಳ್ಳುತ್ತಿರುವುದಾಗಿ ಅಧಿಸೂಚನೆ ಹೊರಡಿಸಲಾಗಿದೆ. ಗುತ್ತಿಗೆ ಆಧಾರದಲ್ಲಿ ಗರಿಷ್ಠ 5 ವರ್ಷ, ಕನಿಷ್ಠ 2 ವರ್ಷದ ಅವಧಿಗೆ ಈ ನೇಮಕಾತಿ ನಡೆಯುತ್ತಿದೆ.
ಹುದ್ದೆಗಳ ವಿವರ* ಯಂಗ್​ ಪ್ರೊಫೆಷನಲ್​- 22ವಿಜ್ಞಾನ/ ಅರ್ಥಶಾಸ್ತ್ರ/ ಸ್ಟ್ಯಾಟಿಸ್ಟಿಕ್ಸ್​/ ಆಪರೇಷನ್​ ರಿಸರ್ಚ್​/ ಪಬ್ಲಿಕ್​ ಪಾಲಿಸಿ/ ಡೆವಲಪ್​ಮೆಂಟ್​ ಸ್ಟಡಿಸ್​/ ಬಿಜಿನೆಸ್​ ಅಡ್ಮಿನಿಸ್ಟ್ರೆಷನ್​/ ಮ್ಯಾನೇಜ್​ಮೆಂಟ್​ನಲ್ಲಿ ಪದವಿ ಅಥವಾ ಬಿಇ/ ಬಿಟೆಕ್​/ ಎಂಬಿಬಿಎಸ್​/ ಸಿಎ/ ಐಸಿಡಬ್ಲುಎ ಅಥವಾ ದ್ವಿತೀಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್​ ಕೋರ್ಸ್​ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಎಂಫಿಲ್​/ ಎಂಟೆಕ್​/ ಎಂಎಸ್​/ ಎಲ್​ಎಲ್​ಎಂ/ ಪಿಎಚ್​ಡಿ/ ಸಂಶೋಧನಾ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು. ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮಾಸಿಕ ಎಲ್ಲ ಭತ್ಯೆ ಸೇರಿ 70,000 ರೂ. ವೇತನ ನಿಗದಿಪಡಿಸಲಾಗಿದೆ.
ಒಂದು ವರ್ಷದ ವೃತ್ತಿ ಅನುಭವ ಇರುವವರಿಗೆ ಆದ್ಯತೆ ಎಂದು ತಿಳಿಸಲಾಗಿದೆ. ಡಿಎಂಇಒ ಕೈಗೊಂಡಿರುವ ಕೇಂದ್ರ ಸರ್ಕಾರದ ಸಚಿವಾಲಯ/ ಇಲಾಖೆಗಳ ವಿವಿಧ ವಲಯಗಳ ಯೋಜನೆಗಳ ಮಾನಿಟರಿಂಗ್​, ಮೌಲ್ಯಮಾಪನಗಳನ್ನು ನೋಡಿಕೊಳ್ಳುವ ಜತೆ ಇತರ ಜವಾಬ್ದಾರಿ ನೀಡಲಾಗುವುದು.
* ಕನ್ಸ್​ಲ್ಟೆಂಟ್​ ಗ್ರೇಡ್​ 1 – 6ಮಾನ್ಯತೆ ಪಡೆದ ಶೈಕ್ಷಣಿಕ ಸಂಸ್ಥೆಗಳಿಂದ ವಿಜ್ಞಾನ/ ಅರ್ಥಶಾಸ್ತ್ರ/ ಸ್ಟಾ$ಟಿಸ್ಟಿಕ್ಸ್​/ ಆಪರೇಷನ್​ ರಿಸರ್ಚ್​/ ಪಬ್ಲಿಕ್​ ಪಾಲಿಸಿ/ ಡೆವಲಪ್​ಮೆಂಟ್​ ಸ್ಟಡಿಸ್​/ ಬಿಜಿನೆಸ್​ ಅಡ್ಮಿನಿಸ್ಟ್ರೆಷನ್​/ ಮ್ಯಾನೇಜ್​ಮೆಂಟ್​ನಲ್ಲಿ ಸ್ನಾತಕೋತ್ತರ ಪದವಿ ಅಥವಾ ಬಿಇ/ ಬಿಟೆಕ್​/ ಎಂಬಿಬಿಎಸ್​/ ಎಲ್​ಎಲ್​ಬಿ/ ಸಿಎ/ ಐಸಿಡಬ್ಲುಎ ಅಥವಾ ದ್ವೀತಿಯ ಪಿಯುಸಿ ನಂತರ ಅಧ್ಯಯನ ಮಾಡಿದ ಯಾವುದೇ ಪ್ರೊಫೆಷನ್​ ಕೋರ್ಸ್​ ಮಾಡಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಪಿಎಚ್​ಡಿ ಮಾಡಿರುವ ಅಭ್ಯರ್ಥಿಗಳಿಗೆ ಆದ್ಯತೆ ಇರುತ್ತದೆ. 3-8 ವರ್ಷದ ವೃತ್ತಿ ಅನುಭವ ಕೇಳಲಾಗಿದೆ. ಗರಿಷ್ಠ 45 ವರ್ಷ ವಯೋಮಿತಿ ಇದ್ದು, ಎಲ್ಲ ಭತ್ಯೆ ಸೇರಿ ಮಾಸಿ 80,000 – 1,45,000 ರೂ. ವೇತನ ಇರಲಿದೆ.
ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಅಭ್ಯರ್ಥಿಗಳು ನೀತಿ ಆಯೋಗದ ವೆಬ್​ಸೈಟ್​http://niti.gov.inವೆಬ್​ಸೈಟ್​ನಲ್ಲಿ ಕರಿಯರ್​ ವಿಭಾಗವನ್ನು ಕ್ಲಿಕ್​ ಮಾಡಿದಾಗ ನೇಮಕಾತಿ ಪುಟ ತೆರೆದುಕೊಳ್ಳುತ್ತದೆ. ಅರ್ಜಿ ಸಲ್ಲಿಸುವ ಮುನ್ನ ಸೂಚನೆಗಳನ್ನು ಓದಿಕೊಂಡು ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕಡೇ ದಿನ: 12.10.2022ಅರ್ಜಿ ಸಲ್ಲಿಕೆ ಹಾಗೂ ಅಧಿಸೂಚನೆಗೆ:http://niti.gov.in/node/3430ಮಾಹಿತಿಗೆ:http://www.niti.gov.in
ಗುಂಡಿ ತಂದ ಆಪತ್ತು: ಗಣೇಶನನ್ನೂ ಬಿಡದ ಮಹಾನಗರ ಪಾಲಿಕೆ- ಬಿತ್ತು 3.66 ಲಕ್ಷ ರೂ. ದಂಡ!
ಆಸ್ಕರ್​ ಅಂಗಳದಲ್ಲಿ ಗುಜರಾತಿ ಸಿನಿಮಾ ‘ಚೆಲ್ಲೋ ಷೋ’: ಚಿತ್ರದಲ್ಲಿ ಕನ್ನಡಿಗನ ಸಾಧನೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × 3 =
Remember me
