ಭಾರತದ ಸರ್ಕಾರದ ಅಧೀನದಲ್ಲಿರುವ ಭಾರತೀಯ ಅಂಚೆ ಸೇವೆಯು ವಿಶ್ವದ ಅತಿ ದೊಡ್ಡ ಸಂಪರ್ಕ ಜಾಲವನ್ನು ಹೊಂದಿದೆ. ಇಲ್ಲಿನ ಬೆಂಗಳೂರು ಮತ್ತು ದೆಹಲಿ ಘಟಕಗಳಲ್ಲಿ ಸ್ಟಾಫ್​ ಡ್ರೈವರ್​ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅಧಿಸೂಚನೆ ಹೊರಡಲಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಗಳ ವಿವರಬೆಂಗಳೂರಿನಲ್ಲಿ 19 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುತ್ತಿದ್ದು, ಸಾಮಾನ್ಯ ಅಭ್ಯರ್ಥಿಗೆ 7, ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗೆ 2, ಎಸ್ಸಿ 2, ಎಸ್ಟಿ 1 ಮತ್ತು ಇತರ ವರ್ಗದ ಅಭ್ಯರ್ಥಿಗಳಿಗೆ 5 ಹುದ್ದೆ ಮೀಸಲಿಡಲಾಗಿದೆ. ದೆಹಲಿಯಲ್ಲಿ ಒಂದು ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.
ವಿದ್ಯಾರ್ಹತೆಎಸ್​ಎಸ್​ಎಲ್​ಸಿ ಉತ್ತೀರ್ಣರಾಗಿರಬೇಕು. ಲಘು ಮತ್ತು ಭಾರಿ ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ಕನಿಷ್ಠ ಮೂರು ವರ್ಷ ಈ ಮೇಲಿನ ಎರಡೂ ವಾಹನಗಳನ್ನು ಚಲಾಯಿಸಿದ ಅನುಭವ ಪಡೆದಿರಬೇಕು.
ವೇತನ, ವಯೋಮಿತಿ7ನೇ ವೇತನ ಶ್ರೇಣಿ ಅನ್ವಯ 2ನೇ ಹಂತದ ಅಂದರೆ ಮಾಸಿಕವ 19,900 ರೂ. ನಿಗದಿಪಡಿಸಲಾಗಿದೆ. 18ರಿಂದ 27 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರು. ಇತರ ಅಭ್ಯರ್ಥಿಗಳಿಗೆ 3 ವರ್ಷ, ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ ವಯೋಸಡಿಲಿಕೆ ಇರಲಿದೆ.
ಆಯ್ಕೆಯ ವಿಧಾನಸಲ್ಲಿಕೆಯಾಗ ಅರ್ಜಿಗಳಲ್ಲಿ ಶಾರ್ಟ್​ಲಿಸ್ಟ್​ ಮಾಡಲಾದ ಅಭ್ಯರ್ಥಿಗಳಿಗೆ ಚಾಲನಾ ಪರೀಕ್ಷೆ ಇರಲಿದೆ. ಈ ಸಂದರ್ಭದಲ್ಲಿ ಭಾರಿ ಹಾಗೂ ಲು ವಾಹನಗಳನ್ನು ಚಲಾಯಿಸಬೇಕು. ಇದರೊಂದಿಗೆ ಮೆಕ್ಯಾನಿಸಂ ಮತ್ತು ವಾಹನಗಳಲ್ಲಿನ ಸಣ್ಣ-ಪುಟ್ಟ ದೋಷಗಳನ್ನು ಪರಿಹರಿಸುವ ಜ್ಞಾನ ಅವಶ್ಯ. ಪರೀಕ್ಷೆ ನಡೆಯುವ ದಿನಾಂಕವನ್ನು ಇ-ಮೇಲ್​ ಮೂಲಕ ತಿಳಿಸಲಾಗುವುದು.
ಅರ್ಜಿ ಸಲ್ಲಿಕೆ ಪ್ರಕ್ರಿಯೆಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ನಿಗದಿತ ದಿನಾಂಕಗೊಳಗೆ ಅಗತ್ಯ ದಾಖಲೆಗಳೊಂದಿಗೆ ಅಧಿಸೂಚನೆಯಲ್ಲಿ ತಿಳಿಸಿದ ವಿಳಾಸಕ್ಕೆ ಸ್ಪೀಡ್​ ಪೋಸ್ಟ್​ ಮೂಲಕ ಸಲ್ಲಿಸತಕ್ಕದ್ದು. ಉಳಿದ ಯಾವ ವಿಧದ ಅರ್ಜಿಗಳನ್ನು ಪುರಸ್ಕರಿಸುವುದಿಲ್ಲ. ಅಭ್ಯರ್ಥಿಯ ಆಯ್ಕೆ ವಿಚಾರದಲ್ಲಿ ಸಂಸ್ಥೆಯ ನಿರ್ಧಾರವೇ ಅಂತಿಮ. ಪರೀಕ್ಷೆಗೆ ಹಾಜರಾಗಲು ಯಾವುದೇ ಭತ್ಯೆ ನೀಡುವುದಿಲ್ಲ.
ಅರ್ಜಿ ಸಲ್ಲಿಸಬೇಕಾದ ವಿಳಾಸ: The Manager, Mail Motor Service, Bengaluru-560001
ಅರ್ಜಿ ಸಲ್ಲಿಸಲು ಕೊನೇ ದಿನ: 26.9.2022ಅಧಿಸೂಚನೆಗೆ:https://bit.ly/3RrzfCC, https://bit.ly/3R8p71X
ಮಾಹಿತಿಗೆ:http://www.indiapost.gov.in
ಮೊದಲ ರಾತ್ರಿ ಕನ್ಯತ್ವ ಪರೀಕ್ಷೆ: ಫೇಲ್​ ಆದ ವಧುವಿಗೆ 10 ಲಕ್ಷ ರೂ ದಂಡ- ಹೀಗೊಂದು ಆಘಾತಕಾರಿ ಘಟನೆ

VIDEO: ವಿವಾದಿತ ‘ಜೊತೆಜೊತೆಯಲಿ’ ಧಾರಾವಾಹಿಯ ಆರ್ಯವರ್ಧನ್​ಗೆ ಭೀಕರ ಅಪಘಾತ! ಮುಂದೇನು?

ಬೆಂಗಳೂರು ಮುಳುಗಲು ಶಾಸಕ, ಸಂಸದರ ರಿಯಲ್​ ಎಸ್ಟೇಟ್​ ಉದ್ಯಮ ಕಾರಣ: ರಮ್ಯಾ ಗರಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 2 =
Remember me
