ಬೆಂಗಳೂರು:ಎಸಿಬಿಯನ್ನು ಹೈಕೋರ್ಟ್​ ರದ್ದು ಮಾಡಿರುವುದಕ್ಕೆ ಸಂಬಂಧಿಸಿದಂತೆ ಹರ್ಷ ವ್ಯಕ್ತಪಡಿಸಿರುವ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ ಅವರು ಇದೇ ವೇಳೆ ಎಲ್ಲಾ ಪಕ್ಷಗಳನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಹೈಕೋರ್ಟ್​ ತೀರ್ಪಿನ ಕುರಿತು ದಿಗ್ವಿಜಯ ನ್ಯೂಸ್​ ಜತೆ ಮಾತನಾಡಿದ ಸಂತೋಷ್​ ಹೆಗ್ಡೆ, ಹೈಕೋರ್ಟ್​ನ ಈ ಆದೇಶ ಖಂಡಿತ ಉತ್ತಮ ಆದೇಶವಾಗಿದೆ. ಇದು ಕೇವಲ ಆದೇಶವಾಗಿ ಇದ್ದರೆ ಸಾಲದು, ಕಾರ್ಯರೂಪಕ್ಕೆ ಬರಬೇಕು. ಲೋಕಾಯುಕ್ತ ಕಾಯ್ದೆಗೆ ಪೂರಕವಾಗಿರುವ ತಿದ್ದುಪಡಿ ಆಗಬೇಕು. ಲೋಕಾಯುಕ್ತಕ್ಕೆ ಪ್ರಾಮಾಣಿಕ ಮತ್ತು ಉತ್ತಮ ಅಧಿಕಾರಿಗಳನ್ನು ನೇಮಕ ಮಾಡಬೇಕು. ಒಂದು ವೇಳೆ ನೇಮಕಗೊಂಡಿರುವ ಅಧಿಕಾರಿಗಳು ಪ್ರಾಮಾಣಿಕರು ಅಲ್ಲ ಎಂದು ಎನ್ನಿಸಿದರೆ, ಅವರು ಬೇಡ ಎನ್ನುವ ಅಧಿಕಾರವನ್ನೂ ಇದೇ ವೇಳೆ ಲೋಕಾಯುಕ್ತಕ್ಕೆ ನೀಡಬೇಕಾದ ಅವಶ್ಯಕತೆ ಇದೆ ಎಂದರು.
2016ರಲ್ಲಿ ಸಿದ್ದರಾಮಯ್ಯನವರ ಸರ್ಕಾರ ಎಸಿಬಿ ನೇಮಕ ಮಾಡಿದ್ದು ಏಕೆ ಎಂದು ಕೇಳಿರುವ ಪ್ರಶ್ನೆಗೆ ಉತ್ತರಿಸಿದ ನ್ಯಾಯಮೂರ್ತಿ ಸಂತೋಷ್​ ಹೆಗ್ಡೆ, ಯಾವ ಸರ್ಕಾರಕ್ಕೆ ಬಲಿಷ್ಠ ಲೋಕಾಯುಕ್ತ ಬೇಕು ಹೇಳಿ? ಅವರ ಮೇಲೆಯೇ ಬಹ್ಮಾಸ್ತ್ರ ಬಿಡುತ್ತಾರಲ್ಲ, ಅದಕ್ಕೆ ಯಾವ ಸರ್ಕಾರಕ್ಕೂ, ಯಾವ ಅಧಿಕಾರಿಗಳ ವರ್ಗಕ್ಕೂ ಬಲಿಷ್ಠ ಲೋಕಾಯುಕ್ತವೇ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ತಮಾಷೆ ಗೊತ್ತಾ? 2011ರಲ್ಲಿ ಬಿಜೆಪಿ ಸರ್ಕಾರವಿತ್ತು. ಆ ಸಮಯದಲ್ಲಿ ಗಣಿ ವರದಿಯನ್ನು ಲೋಕಾಯುಕ್ತರು ನೀಡಿದ್ದರು. ಅದನ್ನು ಸರ್ಕಾರ ಜಾರಿಗೆ ಮಾಡಿರಲಿಲ್ಲ. ಆಗ ವಿರೋಧ ಪಕ್ಷದಲ್ಲಿದ್ದ ಕಾಂಗ್ರೆಸ್​ನವರು ಲೋಕಾಯುಕ್ತ ಕಾಯ್ದೆ ಜಾರಿಗೊಳಿಸುವಂತೆ ಕೂಗಾಡಿದ್ರು. 2012ರಲ್ಲಿ ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆಯನ್ನೂ ಮಾಡಿದರು. ಆದರೆ ತಮಾಷೆ ಸಂತರಿ ಎಂದರೆ, ಇದೇ ಕಾಂಗ್ರೆಸ್​ ಸರ್ಕಾರ 2016ರಲ್ಲಿ ಅಧಿಕಾರಕ್ಕೆ ಬಂದಾಗ ಇದರ ಉಸಿರೇ ಎತ್ತಲಿಲ್ಲ. ಎಲ್ಲರೂ ಗಪ್​ಚುಪ್​.
ಸಾಲದು ಎಂಬುದಕ್ಕೆ ಸಿದ್ದರಾಮಯ್ಯನವರು ಎಸಿಬಿಯನ್ನು ರಚಿಸಿದರು. ಆಗ ಲೋಕಾಯುಕ್ತಕ್ಕೆ ಇದ್ದದ್ದು ಎರಡೇ ಅಧಿಕಾರ. ಜನರಿಗೆ ಆಡಳಿತದಿಂದ ಜನರಿಗಾಗುವಂಥ ಅನ್ಯಾಯಕ್ಕೆ ಪರಿಹಾರ ಕೊಡಿಸುವುದು ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವುದು. ಆದರೆ ಅದನ್ನೇ ಈ ಸರ್ಕಾರ ಕಿತ್ತುಕೊಂಡು ಬಿಡ್ತಲ್ಲಾ? ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವ ಅಧಿಕಾರ ಕಿತ್ತುಕೊಂಡು ಎಸಿಬಿ ರಚನೆ ಮಾಡಿತು. ಯಾರಿಗೆ ಬೇಕಾಗಿದೆ ಹೇಳಿ ಬಲಿಷ್ಠ ಲೋಕಾಯುಕ್ತ’ ಎಂದರು.
ಎಲ್ಲವೂ ನಾಟಕ. ಮತದಾರರನ್ನು ಸೆಳೆಯಲು ಭರವಸೆ ಕೊಟ್ಟು, ನಂತರ ಅಧಿಕಾರಕ್ಕೆ ಬಂದ ಮೇಲೆ ಚುಪ್​ ಆಗುವುದು ಇದೇ ಆಗಿ ಹೋಗಿದೆ. ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ವೆಂಕಟಾಚಲಯ್ಯನವರು ಭ್ರಷ್ಟಚಾರದ ವಿರುದ್ಧ ಸಾಕಷ್ಟು ಹೋರಾಟ ಮಾಡಿದ್ದಾರೆ, ಭ್ರಷ್ಟರನ್ನು ಗುರುತಿಸಿದರು. ನಾನು ಅಧಿಕಾರಕ್ಕೆ ಬಂದ ಮೇಲೆ ಅದನ್ನು ಮುಂದುವರೆಸಿದೆ, ಆದರೆ ಇದುವರೆಗೂ ಯಾರಿಗೂ ಶಿಕ್ಷೆಯೇ ಆಗಿಲ್ಲವಲ್ಲ, ಅದಕ್ಕೆ ಏನೆನ್ನುವುದು? ಇದಕ್ಕಾಗಿಯೇ ಹೈಕೋರ್ಟ್​ನ ಈ ತೀರ್ಪು ಬಹಳ ಉತ್ತಮವಾಗಿದೆ. ಅದು ಕಾರ್ಯರೂಪಕ್ಕೆ ಬರುವ ಅಗತ್ಯವಿದೆ ಎಂದು ಹೇಳಿದರು.

ಆಮೀರ್​ಗೆ ‘ಅಸಹಿಷ್ಣತೆ’ ಕೊಟ್ಟ ಶಾಕ್​: ಛಡ್ಡಾಗೆ ಬೈಕಾಟ್​ ಬಿಸಿ, ಬೆಂಬಲಿಸಿದ ಅಕ್ಷಯ್​ಗೂ ಸಂಕಟ- ಬಿಡುಗಡೆ ದಿನವೇ ನಿರಾಸೆ

ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿ ವರವರ ರಾವ್​ಗೆ ಜಾಮೀನು: ಸುಪ್ರೀಂಕೋರ್ಟ್​ ಹೇಳಿದ್ದೇನು?

ದೈಹಿಕ ಸಂಪರ್ಕ ಬೆಳೆಸಿ, ಧರ್ಮ ಬೇರೆ-ಮದ್ವೆ ಬೇಡ ಎಂದ ಯುವಕ ಪೀಸ್​ ಪೀಸ್​: ಮೃತದೇಹ ಸೂಟ್​ಕೇಸ್​ನಲ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 16 =
Remember me
