ಉಡುಪಿ:ನ್ಯಾಯಾಲಯದ ಮೆಟ್ಟಿಲು ಹತ್ತಲಾಗದ ವೃದ್ಧೆಯ ಬಳಿ ಖುದ್ದು ನ್ಯಾಯಾಧೀಶರೇ ಹಾಜರಾಗಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯಲ್ಲಿ ಲೋಕ ಅದಾಲತ್ ವಿಚಾರಣೆಯ ವೇಳೆ ಈ ಒಂದು ಭಾವಪೂರ್ಣ ಘಟನೆ ನಡೆದಿದೆ. 2011ರ ಕೇಸ್​ ಒಂದರಲ್ಲಿ 81 ವರ್ಷದ ದೇವಕಿ ಶೆಡ್ತಿ ಕಕ್ಷಿದಾರರಾಗಿದ್ದರು. ಆರೋಗ್ಯ ತೀರಾ ಹದಗೆಟ್ಟು ಎದ್ದು ಓಡಾಡಲಾಗದ ಸ್ಥಿತಿಯಲ್ಲಿದ್ದರು.
ನ್ಯಾಯಾಲಯದಲ್ಲಿ ಕೇಸು ಮುಂದುವರಿಸಲು ಮಗಳಿಗೆ ಜಿಪಿಎ ನೀಡಿದ್ದರು. ಈ ಬಗ್ಗೆ ಖಚಿತ ಪಡಿಸಲು ದೇವಕಿ ಶೆಟ್ಟಿ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತು. ನ್ಯಾಯಾಲಯದ ಆವರಣದವರೆಗೆ ರಿಕ್ಷಾದಲ್ಲೇ ಅವರು ಬಂದಿದ್ದರು. ಆದರೆ ಕೋರ್ಟ್​ ಮೆಟ್ಟಿಲು ಹತ್ತಲಾಗದೆ ಅಸಹಾಯಕರಾಗಿ ಆಟೋದಲ್ಲೇ ಕುಳಿತಿದ್ದರು.
ಈ ವಿಷಯ ತಿಳಿದು ಕೂಡಲೇ ನ್ಯಾಯಾಧೀಶ ಜೀತು ಎಸ್.ಆರ್ ಖುದ್ದು ವೃದ್ದೆಯ ಬಳಿ ಬಂದು ವಿಚಾರಿಸಿದರು. ಜಿಪಿಎ ನೀಡಿದ್ದರ ಬಗ್ಗೆ ದೇವಕಿ ಶೆಟ್ಟಿ ಅವರ ಸಮಕ್ಷಮದಲ್ಲಿ ಪರಿಶೀಲನೆ ನಡೆಸಿದರು. ಅವರ ಪ್ರಕರಣವನ್ನು ಕೂಡಲೇ ಇತ್ಯರ್ಥಪಡಿಸಿದರು. ನ್ಯಾಯಾಧೀಶರ ಈ ಕಾರ್ಯಕ್ಕೆ ಭಾರಿ ಶ್ಲಾಘನೆ ವ್ಯಕ್ತವಾಗಿದೆ.
ಕರ್ನಾಟಕದ ಖಜಾನೆಯಲ್ಲಿ ಕೊಳೀತಿದೆ ಜಯಲಲಿತಾ ಸೀರೆ, ಚಪ್ಪಲಿ, ಶಾಲು! ಹರಾಜಿಗೆ ಕೋರಿ ಸುಪ್ರೀಂಗೆ ಮನವಿ

ಸುಪ್ರೀಂ​ ಅಂಗಳದಲ್ಲಿ ಮಹಾರಾಷ್ಟ್ರ ಬಿಕ್ಕಟ್ಟು: ಬಂಡಾಯ ನಾಯಕ ಶಿಂಧೆ ಅರ್ಜಿ- ಇಂದು ವಿಚಾರಣೆ ಸಾಧ್ಯತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 20 =
Remember me
