ಬೆಂಗಳೂರು:ಕಳೆದ ಕೆಲವು ದಿನಗಳಿಂದ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದ ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದಾಂಪತ್ಯ ಕಲಹ ಕೊನೆಗೂ ಮುಗಿಯುವ ಸೂಚನೆ ಕಾಣಿಸುತ್ತಿದೆ.
ತಮ್ಮ ಪತಿಯ ವಿರುದ್ಧ ಕೆ.ಕಲ್ಯಾಣ್ ಪತ್ನಿ ಅಶ್ವಿನಿ ಅಲಿಯಾಸ್ ಐಶ್ವರ್ಯಾ ಕಳೆದ ಜೂನ್ 16ರಂದು ಬೆಳಗಾವಿಯ ಕೌಟುಂಬಿಕ ಕೋರ್ಟ್​ಗೆ ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ವಾಪಸ್​ ಪಡೆಯಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಇಂದು ಬೆಳಗಾವಿ ಕೌಟುಂಬಿಕ ಕೋರ್ಟ್​ಗೆ ತೆರಳಿ ಅರ್ಜಿ ವಾಪಸ್ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮಾಟ, ಮಂತ್ರದಿಂದಾಗಿ ತಮ್ಮ ದಾಂಪತ್ಯದಲ್ಲಿ ಬಿರುಕು ಉಂಟಾಗಿರುವುದಾಗಿ ಕಲ್ಯಾಣ್​ ಹೇಳಿದ್ದರು. ಶಿವಾನಂದ ವಾಲಿ ಎಂಬಾತನ ಕುಕೃತ್ಯವಿದು. ಮಾಟ-ಮಂತ್ರದಿಂದಾಗಿ ನನ್ನ ಪತ್ನಿಗೆ ಮಂಕುಬೂದಿ ಎರಚಲಾಗಿದೆ. ಪತ್ನಿಯ ಖಾತೆಯಿಂದ ಹಣ ತೆಗೆಯಲಾಗಿದೆ ಎಂದು ಕಲ್ಯಾಣ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಶಿವಾನಂದ ವಾಲಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಸೊಸೆ ವಿರುದ್ಧ ಗುಡುಗಿದ ಗೌರಮ್ಮ ಕುರಿತು ಡಿ.ಕೆ.ರವಿ ಪತ್ನಿಯಿಂದ ಸ್ಫೋಟಕ ಹೇಳಿಕೆ
ಇದೇ ಸಂದರ್ಭದಲ್ಲಿ ಕಲ್ಯಾಣ್​ ಕೂಡ, ನನ್ನ ಪತ್ನಿ ನಡುವೆ ಕಮ್ಯುನಿಕೇಷನ್ ಗ್ಯಾಪ್ ಆಗಿದೆ ಅಷ್ಟೇ. ನಮ್ಮ ಖಾಸಗಿ ಜೀವನ ಈಗ ಸಾರ್ವಜನಿಕವಾಗಿರುವ ಕಾರಣ ಎಲ್ಲಾ ಮಾಹಿತಿಯನ್ನು ನೀಡುತ್ತಿದ್ದೇನೆ. ನಾನು ನನ್ನ ಪತ್ನಿಯನ್ನು ತುಂಬಾ ಪ್ರೀತಿಸುತ್ತೇನೆ. ಮುಂದೇ ನಮ್ಮ ಸರಿಯಾಗುತ್ತದೆ ಎಂದು ಸ್ಪಷ್ಟಪಡಿಸಿದ್ದರು. ಜತೆಗೆ, ಅಶ್ವಿನಿ ಅವರಿಗೆ ಕೌನ್ಸೆಲಿಂಗ್ ಸಹ ಮಾಡಲಾಗಿತ್ತು. ಈ ವಿಷಯವನ್ನು ಖುದ್ದು ಅವರೇ ತಿಳಿಸಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ ವಿಚ್ಛೇದನದ ಅರ್ಜಿ ವಾಪಸ್​ ಪಡೆಯಲು ನಿರ್ಧರಿಸಿರುವುದಾಗಿ ತಿಳಿದುಬಂದಿದೆ.
ಹಾಥರಸ್​ ಪ್ರಕರಣ- ಯುವತಿಯ ಕೊಲೆ ಮಾಡಿದ್ದು ಯಾರು ಎಂದು ತಿಳಿಸಿ ಪತ್ರ ಬರೆದ ಆರೋಪಿಗಳು!

ಸೇಡಿನ ಕೊಲೆ: ಬೆಂಗಳೂರು ನಂ.1- ರಾಜಧಾನಿಯಲ್ಲಿ ನಡೆದಿರುವ ದ್ವೇಷದ ಹತ್ಯೆ ಎಷ್ಟು ಗೊತ್ತಾ?

24 ವಿಶ್ವವಿದ್ಯಾಲಯಗಳು ನಕಲಿ ಎಂದು ಘೋಷಣೆ- ಪ್ರವೇಶ​ ಪಡೆಯುವಾಗ ಎಚ್ಚರ: ಇಲ್ಲಿದೆ ವಿವರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
