ಬೆಂಗಳೂರು:ವಿದ್ಯಾರ್ಥಿಗಳು ಮತ್ತು ಮಕ್ಕಳು ಕೋವಿಡ್ ಸೋಂಕಿನಿಂದ ಬಾಧಿತರಾಗದಂತೆ ಖಾತ್ರಿಪಡಿಸಿಕೊಳ್ಳುವ ಸಲುವಾಗಿ ಅವರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಕ್ರಿಯಾ ಯೋಜನೆ ರೂಪಿಸುವಂತೆ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಶಾಲೆ ಮತ್ತು ಕಾಲೇಜುಗಳನ್ನು ತೆರೆಯುವ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾದುದಾಗಿದೆ. ಆದರೆ, ಮಕ್ಕಳಲ್ಲಿ ಕೋವಿಡ್ ಸಾಂಕ್ರಾಮಿಕವನ್ನು ನಿಗ್ರಹಿಸುವ ರೋಗನಿರೋಧಕ ಶಕ್ತಿ ಇದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದೂ ಅಷ್ಟೇ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಈ ಕ್ರಿಯಾ ಯೋಜನೆ ನಿಖರವಾಗಿರಬೇಕು ಮತ್ತು ಸಮಗ್ರವಾಗಿರಬೇಕು ಇದರಿಂದ ಸಂಪೂರ್ಣ ವಿದ್ಯಾರ್ಥಿ- ಸಮೂಹ ಆದಷ್ಟು ಶೀಘ್ರ ಈ ವ್ಯಾಪ್ತಿಗೆ ಒಳಪಡಬೇಕು. ಸೋಂಕಿಗೆ ನಾವು ಯಾವುದೇ ಅವಕಾಶವನ್ನೂ ನೀಡುವಂತಿರಬಾರದು. ರೋಗನಿರೋಧಕ ಶಕ್ತಿಯನ್ನು ಬೆಳೆಸಲು ಈ ಅಭಿಯಾನದಲ್ಲಿ ಲೋಪದೋಷಗಳಿಗೂ ಯಾವುದೇ ಅವಕಾಶವಿರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಾಲೆಗಳಲ್ಲಿ ಕೋವಿಡ್ ಸಂಬಂಧಿತ ಗುಣಮಟ್ಟದ ಕಾರ್ಯಾಚರಣೆ ವಿಧಾನಗಳು –ಎಸ್.ಓ.ಪಿ. ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಹಠಾತ್ ಭೇಟಿ ನೀಡುವ ಸಲುವಾಗಿ ಸರ್ಕಾರ ಒಂದು ತಂಡವನ್ನು ನಿಯೋಜಿಸಬೇಕು ಎಂದೂ ಕಾಗೇರಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ. ಮಕ್ಕಳಲ್ಲಿ ರೋಗನಿರೋಧಕ ಶಕ್ತಿಯನ್ನು ವರ್ಧಿಸುವ ಅಗತ್ಯದ ಕುರಿತಂತೆ ಶಿಕ್ಷಕರು, ಶಿಕ್ಷಣ ಇಲಾಖೆಯ ಸಿಬ್ಬಂದಿ ಮಿಗಿಲಾಗಿ ಪಾಲಕರಲ್ಲಿ ಜಾಗೃತಿ ಮೂಡಿಸುವುದು ಮಹತ್ವದ್ದಾಗಿದೆ ಎಂದು ಸ್ಪೀಕರ್ ಪ್ರತಿಪಾದಿಸಿದ್ದಾರೆ.
ತಾಲಿಬಾನಿಗಳಿಗೆ ಹೆದರಿ ಅಫ್ಘಾನ್‌ನಿಂದ ಯಾವ್ಯಾವ ದೇಶಗಳಿಗೆ ಹೋದವರೆಷ್ಟು? ಇಲ್ಲಿದೆ ಅಂಕಿ ಅಂಶ

ಅಂಕಲ್‌ಗಳೇ ಈಕೆಯ ಟಾರ್ಗೆಟ್‌: ಪಾರ್ಕ್‌ಗೆ ಕರೆದು ಮಾಡಬಾರದ್ದು ಮಾಡಿ ವಿಡಿಯೋ- ಚಾಲಾಕಿ ಆಂಟಿ ಅರೆಸ್ಟ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
