ಕಲಬುರಗಿ:ಸೊನ್ನ ಬ್ಯಾರೇಜ್​ನಿಂದ ಭೀಮಾ ನದಿಗೆ ನೀರು ಬಿಟ್ಟ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಘತ್ತರಗಿ ಬಳಿಯ ಸೇತುವೆ ಮುಳುಗಡೆಯಾಗಿದೆ.
ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಅಫಜಲಪುರ- ಜೇವರ್ಗಿ, ಸಿಂಧಗಿ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮೇಲೆ ಎರಡು ಅಡಿಯಷ್ಟು ನೀರು ಹರಿಯುತ್ತಿದೆ. ಅಫಜಲಪುರ ತಾಲೂಕಿನ ದೇವಲ ಗಾಣಗಾಪುರ ಬಳಿಯ ಸೇತುವೆ ಕೂಡ ಜಲಾವೃತಗೊಂಡಿದೆ.
ಈ ಹಿನ್ನೆಲೆಯಲ್ಲಿ, ದೇವಲ ಗಾಣಗಾಪುರ- ಜೇವರ್ಗಿ ಸಂಪರ್ಕ ಕಡಿತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಸೊನ್ನ ಬ್ಯಾರೇಜ್​ನಿಂದ ಒಂದು ಲಕ್ಷ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಲಾಗಿದ್ದು, ಸೇತುವೆ ಮುಳುಗಡೆಯ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರಲ್ಲಿ ನೆರೆ ಭೀತಿ, ಆತಂಕ ಉಂಟಾಗಿದೆ. ನದಿ ತಟದ ಗ್ರಾಮಸ್ಥರು ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಲಾಗಿದೆ. (ದಿಗ್ವಿಜಯ ನ್ಯೂಸ್​)
VIDEO: ಕರ್ತವ್ಯಲೋಪ- ಎಸ್​ಐ, ಎಎಸ್​ಐಯನ್ನೇ ಲಾಕಪ್​ಗೆ ತಳ್ಳಿದ ಪೊಲೀಸ್​ ಅಧಿಕಾರಿ; ವಿಡಿಯೋ ವೈರಲ್

ಗೇಮಿಂಗ್​ ಆ್ಯಪ್​ನಿಂದ ಬಳಕೆದಾರರಿಗೆ ಟೋಪಿ: ಆರು ಕಡೆ ಇ.ಡಿ ದಾಳಿ- 17 ಕೋಟಿ ರೂ. ಜಪ್ತಿ

ಬೆಕ್ಕನ್ನು ಹುಲಿ ಮಾಡಿದ ಭೂಪ: ವಾಟ್ಸ್​ಆ್ಯಪ್​ನಲ್ಲಿ ಮಾರಾಟಕ್ಕಿಟ್ಟು ಪೊಲೀಸರ ಕೈಗೆ ಸಿಕ್ಕಿಬಿದ್ದ

Sign in to your account
Please enter an answer in digits:3 × five =
Remember me
