ಅಫಜಲಪುರ (ಕಲಬುರಗಿ):ಪಿಎಸ್​ಐ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಆಳಕ್ಕೆ ಹೋದಷ್ಟೂ ಹಲವು ಗಣ್ಯರ ಹೆಸರು ಹೊರಕ್ಕೆ ಬರುತ್ತಿದೆ. ಕೆಲ ದಿನಗಳ ಹಿಂದಷ್ಟೇ ಎಡಿಜಿಪಿ ಅಮೃತ್ ಪೌಲ್ ಅವರು ಈ ಕೇಸ್​ನಲ್ಲಿ ಸಿಲುಕಿಕೊಂಡಿದ್ದರು. ಇದೀಗ ಕಾಂಗ್ರೆಸ್​ ಶಾಸಕರೊಬ್ಬರ ಮಗ ಹಾಗೂ ಅವರ ಸಹೋದರ ಕೂಡ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಅಫಜಲಪುರದ ಕಾಂಗ್ರೆಸ್​ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಶಾಸಕರ ಸಹೋದರ ಎಸ್.ವೈ.ಪಾಟೀಲ್​ಗೆ ಸಂಕಷ್ಟ ಎದುರಾಗಿದೆ. ಶಾಸಕ ಎಂ.ವೈ.ಪಾಟೀಲ್ ಅವರ ಗನ್​ಮ್ಯಾನ್​ ಹಯ್ಯಾಳಿ ದೇಸಾಯಿ ಅವರನ್ನು ಪಿಎಸ್​ಐ ಮಾಡುವ ಉದ್ದೇಶದಿಂದ ಅಕ್ರಮ ನಡೆದಿರುವ ಶಂಕೆ ಉಂಟಾಗಿದೆ. ದೇಸಾಯಿ ಅವರನ್ನು ಅಕ್ರಮವಾಗಿ ಪಿಎಸ್​ಐ ಮಾಡಲು ಹೊರಟಿದ್ದರು ಎಂಬ ಆರೋಪ ಕೇಳಿಬಂದಿದೆ.
ಈ ಮಾಹಿತಿ ನೀಡಿರುವುದು ಪಿಎಸ್ಐ ಅಕ್ರಮ ನೇಮಕಾತಿಯ ಕಿಂಗ್​ಪಿನ್​ ಆರ್.ಡಿ.ಪಾಟೀಲ್! ಸಿಐಡಿ ಮುಂದೆ ಈ ಮಾಹಿತಿಯನ್ನು ಈತ ಹೇಳಿದ್ದಾನೆ ಎನ್ನಲಾಗಿದೆ.
ಗನ್​ಮ್ಯಾನ್​ಗೆ ಪಿಎಸ್​ಐ ಪಟ್ಟ!ಹಯ್ಯಾಳಿ ದೇಸಾಯಿ ಅವರನ್ನು ಪಿಎಸ್ಐ ಮಾಡಬೇಕು ಎಂದು ಅರುಣ್​ ಅವರು, ಮಂಜುನಾಥ್‌ ಮೇಳಕುಂದಿಗೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಸಂಬಂಧ ಮಾತನಾಡಲು ಮಂಜುನಾಥ್‌ ಮೇಳಕುಂದಿಗೆ ಕರೆಮಾಡಿದ್ದ ಆರ್​.ಡಿ.ಪಾಟೀಲ್​ ಅವರು, ಅರುಣ್ ಜತೆ ಮಾತನಾಡುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಈ ಸೂಚನೆ ಮೇರೆಗೆ ಮಂಜುನಾಥ್‌ ಮೇಳಕುಂದಿ ಶಾಸಕರ ಪುತ್ರ ಅರುಣ್ ಕುಮಾರ್​ಗೆ ಕರೆ ಮಾಡಿ30 ಲಕ್ಷಕ್ಕೆ ಡೀಲ್ ಕುದರಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಅರುಣ್ ಕುಮಾರ್ ಪಾಟೀಲ್ ಚಿಕ್ಕಪ್ಪ ಹಣ ಕೊಡುವುದ್ದಾಗಿ ಹೇಳಿರುವುದಾಗಿ ಆರ್​.ಡಿ. ಪಾಟೀಲ್​ ಸಿಐಡಿ ಮುಂದೆ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ.
ಆರ್.ಡಿ.ಪಾಟೀಲ್ ಸ್ವ ಹೇಳಿಕೆಯನ್ನ ಚಾರ್ಜ್​ಶೀಟ್​ನಲ್ಲಿ ಸಿಐಡಿ ಅಧಿಕಾರಿಗಳು ಉಲ್ಲೇಖಿಸಿದ್ದಾರೆ. ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಪಾಟೀಲ್ ಹಾಗೂ ಎಂ ವೈ ಪಾಟೀಲ್ ಸಹೋದರ ಎಸ್.ವೈ.ಪಾಟೀಲ್ ಹೆಸರು ಉಲ್ಲೇಖವಾಗಿದೆ. ಆರ್.ಡಿ.ಪಾಟೀಲ್ ಹೇಳಿಕೆ ಆಧರಿಸಿ ಸಿಐಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಜುಲೈ 16ರ ಬಳಿಕ ಕೈ ಶಾಸಕ ಎಂ.ವೈ.ಪಾಟೀಲ್ ಹಾಗೂ ಸಹೋದರನ ವಿಚಾರಣೆ ಸಾಧ್ಯತೆ ಇದೆ. ಸಿಐಡಿ ಮೂಲಕ ರಾಜಕೀಯ ದಾಳ ಉರುಳಿಸಿದ್ನಾ ಕಿಂಗ್​ಪಿನ್ ಆರ್.ಡಿ.ಪಾಟೀಲ್ ಅಥವಾ ನಿಜಕ್ಕೂ ಅಕ್ರಮದಲ್ಲಿ ಅವರು ಭಾಗಿಯಾಗಿದ್ದಾರಾ ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.(ದಿಗ್ವಿಜಯ ನ್ಯೂಸ್​)
ಗೋವಾದಲ್ಲಿ ಶುರುವಾಯ್ತು ರಾಜಕೀಯ ಕೋಲಾಹಲ: ಕಾಂಗ್ರೆಸ್​ನ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಬಿತ್ತು ಕೊಕ್​!

ಕಳ್ಳನೆಂದು ಭಾವಿಸಿ ಹೊಡೆದೇ ಬಿಟ್ಟ ಸೆಕ್ಯುರಿಟಿ! ಕರ್ತವ್ಯ ಪ್ರಜ್ಞೆ ಮೆರೆಯಲು ಹೋಗಿ ಬ್ಯಾಂಕ್​ ಉದ್ಯೋಗಿ ಮರ್ಡರ್​

ಮದುವೆಯಾದ 11 ವರ್ಷಗಳ ಬಳಿಕ ಕುಮಟಾದ ಮಹಿಳೆಯ ಮಡಿಲಲ್ಲಿ ಒಟ್ಟಿಗೇ ಮೂರು ಕಂದಮ್ಮಗಳು

b
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eighteen − 7 =
Remember me
