ಕಲಬುರಗಿ: ಕರೊನಾದಿಂದ ಜನಜೀವನ ತತ್ತರಿಸಿ ಹೋಗಿರುವ ನಡುವೆಯೇ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ‌ ಮುನ್ನಹಳ್ಳಿ ಗ್ರಾಮದಲ್ಲಿ ವಿಚಿತ್ರ ರೋಗ ಕಾಣಿಸಿಕೊಂಡಿದೆ.ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ‌ ಮುನ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಳೆದ ಎರಡು ವಾರಗಳಲ್ಲಿ ಒಂದೇ ಗ್ರಾಮದ 26 ಜನರ ನಿಗೂಢವಾಗಿ ಮೃತಪಟ್ಟಿದ್ದಾರೆ. ಏಕಾಏಕಿ ನರಳಾಡಿ ಜನರ‌ ಸರಣಿ ಸಾವು ಸಂಭವಿಸಿದೆ!ನರಳಿ ಸತ್ತವರಲ್ಲಿ ಬಹುತೇಕ ಮಂದಿ ವೃದ್ಧರಿದ್ದರೆ ಯುವಕರು ಕೂಡ ಮೃತಪಟ್ಟಿದ್ದಾರೆ. ಅಚ್ಚರಿ ಎಂದರೆ, ಈ ಗ್ರಾಮದಲ್ಲಿ ಹಲವರಿಗೆ ಶೀತ, ಕೆಮ್ಮು, ಜ್ವರ ಬಾಧಿಸುತ್ತಿದ್ದು, ಆತಂಕದಲ್ಲಿ ಗ್ರಾಮಸ್ಥರಿದ್ದಾರೆ.ಗ್ರಾಮದಲ್ಲಿ ಹೀಗೆ ಸರಣಿ ಸಾವುಗಳಾದರೂ ಗ್ರಾಮಕ್ಕೆ ಇದುವರೆಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಕೊಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗೆ ನರಳಿ ನರಳಿ ಮೃತಪಟ್ಟಿರುವುದು ಕೋವಿಡ್‌ನಿಂದಲಾ ಅಥವಾ ಇನ್ನೇನು ಸಮಸ್ಯೆ ಎದುರಾಗಿದೆಯೋ ಎಂದು ನೋಡಲು ಕೂಡ ಅಧಿಕಾರಿಗಳು ಇತ್ತ ಸುಳಿದಿಲ್ಲ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಕೋವಿಡ್‌ನಿಂದ ಮೃತ ಕುಟುಂಬಕ್ಕೆ ಮಾಸಿಕ ಹಣ, ಉಚಿತ ಶಿಕ್ಷಣ, ಬಡ್ಡಿರಹಿತ ಸಾಲ, ಪಡಿತರ… ಎಂಪಿ ಘೋಷಣೆ
ನನಗಿದ್ದ ಒಂದೇ ಶ್ವಾಸಕೋಶಕ್ಕೆ ಅಂಟಿದ್ದ ಸೋಂಕನ್ನು ಯೋಗದಿಂದ ಗೆದ್ದೆ ಎಂದ ಕರೊನಾ ವಾರಿಯರ್‌!
ಅಕ್ಷಯ ತೃತೀಯಕ್ಕೆ ರೈತರಿಗೆ ಸಿಹಿ ಸುದ್ದಿ ಕೊಟ್ಟ ಪ್ರಧಾನಿ- 19 ಸಾವಿರ ಕೋಟಿ ರೂ ಖಾತೆಗೆ ವರ್ಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + 12 =
Remember me
