ಬೆಳಗಾವಿ:ಕನ್ನಡ ಚಲನಚಿತ್ರ ಗೀತ ಸಾಹಿತಿ ಕೆ. ಕಲ್ಯಾಣ್ ಅವರ ಕುಟುಂಬಕ್ಕೆ ಮಂತ್ರವಾದಿ ಶಿವಾನಂದ ವಾಲಿ ಮತ್ತು ಮನೆಗೆಲಸದ ಗೀತಾ ಕುಲಕರ್ಣಿ ಮಾಡಿದ ವಂಚನೆ ಪ್ರಕರಣ ಬಗೆದಷ್ಟೂ ಆಳವಾಗುತ್ತಿದೆ. ಈ ಕುಟುಂಬದವರಿಂದ ಲಪಟಾಯಿಸಿದ ಕೋಟ್ಯಂತರ ರೂ. ಹಣದಲ್ಲೇ ಆತ 10 ಮ್ಯಾಕ್ಸಿಕ್ಯಾಬ್‌ಗಳನ್ನು ಖರೀದಿಸಿ ಬಾಡಿಗೆಗೆ ಬಿಟ್ಟಿದ್ದ ಎಂಬುದೂ ಸೇರಿದಂತೆ ಹಲವು ಕುತೂಹಲಕರ ವಿಷಯಗಳು ಪೊಲೀಸರ ತನಿಖೆಯಿಂದ ಬಯಲಾಗಿವೆ.
ಕಲ್ಯಾಣ್ ಅವರ ಪತ್ನಿ, ಅತ್ತೆ, ಮಾವನ ಬಳಿ ಇದ್ದ ಚಿನ್ನ, ಬೆಳ್ಳಿ ಮಾತ್ರವಲ್ಲದೆ, ಬೆಳಗಾವಿ, ಬೆಂಗಳೂರು, ಹುಬ್ಬಳ್ಳಿ- ಧಾರವಾಡದಲ್ಲಿದ್ದ ಮನೆ, ಖಾಲಿ ನಿವೇಶನಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುವುದು ಮತ್ತು ಅವರ ಹಣದಿಂದಲೇ 10 ಮ್ಯಾಕ್ಸಿಕ್ಯಾಬ್ ಖರೀದಿಸಿರುವುದಾಗಿ ವಾಲಿ ಒಪ್ಪಿಕೊಂಡಿದ್ದಾನೆ ಎಂದು ಡಿಸಿಪಿ ಡಾ. ವಿಕ್ರಮ ಅಮಟೆ ತಿಳಿಸಿದ್ದಾರೆ.
ಇದನ್ನೂ ಓದಿ:ಕೆ.ಕಲ್ಯಾಣ್​ ಕುಟುಂಬಸ್ಥರಿಂದ ಆಸ್ತಿ ಕಬಳಿಕೆ: ವಾಲಿಯ ಆರು ಕೋಟಿ ರೂ ಆಸ್ತಿ ಜಪ್ತಿ
ಬಂಧಿತನಿಂದ 350 ಗ್ರಾಂ ಚಿನ್ನಾಭರಣ, 6 ಕೆ.ಜಿ ಬೆಳ್ಳಿ , 9 ಮ್ಯಾಕ್ಸಿಕ್ಯಾಬ್ ಹಾಗೂ ಆಸ್ತಿ ದಾಖಲೆಗಳು ಸೇರಿ ಒಟ್ಟು 6 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಸೆ. 30ರಂದು ಕಲ್ಯಾಣ್ ಅವರು, ತಮ್ಮ ಪತ್ನಿ, ಅತ್ತೆ, ಮಾವ ಅವರನ್ನು ಶಿವಾನಂದ ವಾಲಿ ಮತ್ತು ಗಂಗಾ ಕುಲಕರ್ಣಿ ಎಂಬುವವರು ಅಪಹರಿಸಿ ಆಸ್ತಿ, ಹಣ ಕಬಳಿಸಿದ್ದಾರೆ ಎಂದು ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬೂದಿಹಾಳ ಎಸ್.ಜಿ. ಗ್ರಾಮದ ಶಿವಾನಂದ ವಾಲಿಯನ್ನು ವಶಕ್ಕೆ ಪಡೆದಿದ್ದರು.
ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಪ್ರತಿಬಂಧ ಮತ್ತು ನಿರ್ಮೂಲನೆ ಅಧಿನಿಯಮ-2017ರ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಇದು ಜಿಲ್ಲೆಯಲ್ಲಿಯೇ ಪ್ರಥಮ ಕೇಸ್ ಆಗಿದೆ ಎಂದು ಅಮಟೆ ಮಾಹಿತಿ ನೀಡಿದರು.
ಕೆ.ಕಲ್ಯಾಣ್​ ಕುಟುಂಬದಲ್ಲಿ ಮರಳಿದ ಸಂತಸ: ವಿಚ್ಛೇದನ ವಾಪಸ್​ ಪಡೆಯಲು ಪತ್ನಿ ನಿರ್ಧಾರ?

ಅಲ್ಲಿ ನಡೀತಿತ್ತು ಕೋಟ್ಯಂತರ ರೂ. ಜೂಜು: ಗೊತ್ತಿದ್ದೂ ಸುಮ್ಮನಿದ್ದ ಇನ್ಸ್‌ಪೆಕ್ಟರ್‌ಗೆ ಈಗೇನಾಯ್ತು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − four =
Remember me
