ಬೆಂಗಳೂರು: ಇಲ್ಲಿ ಕೊಟ್ಟಿರುವ ಚಿತ್ರ ನಿಮ್ಮ ಮೊಬೈಲ್‌ಗೂ ಬಂದಿರಬೇಕಲ್ವಾ? ಅಲ್ಲಿರೋ ಮೆಸೇಜ್‌ ನೋಡಿ ಕರ್ನಾಟಕ ಪೊಲೀಸರಿಗೆ ಹಿಗ್ಗಾಮುಗ್ಗ ಶಾಪ ಹಾಕುತ್ತಾ, ಅದಕ್ಕೆ ನೀವೂ ಒಂದಿಷ್ಟು ಮೆಸೇಜ್‌ ಸೇರಿಸಿ ಫಾರ್ವರ್ಡ್‌ ಮಾಡಿರಬೇಕಲ್ವಾ ಅಥವಾ ಜಾಲತಾಣಗಳಲ್ಲಿ ಶೇರ್‌ ಮಾಡಿರಬೇಕಲ್ವಾ?
ಎಲ್ಲಿಯೋ, ಯಾವುದೋ ವಿಡಿಯೋಗಳನ್ನು ಯಾರೋ ಹರಿಬಿಟ್ಟು ಅದರಲ್ಲಿ ತಮಗೆ ಬೇಕಾದ ಊರು, ಸ್ಥಳದ ಹೆಸರು ಸೇರಿಸಿ ಫಾರ್ವರ್ಡ್‌ ಮಾಡುತ್ತಿರುವವರ ವಿರುದ್ಧ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಮಲ್‌ ಪಂತ್‌ ಎಚ್ಚರಿಕೆ ನೀಡಿದ್ದಾರೆ. ಹೀಗೆ ಸುಳ್ಳು ಸುದ್ದಿ ಹರಿಬಿಡುವವರ ವಿರುದ್ಧ ಕಾನೂನು ರೀತಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.
ಸುದ್ದಿ ಪರಿಶೀಲಿಸಿ ಶೇರ್ ಮಾಡಿ!!ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು.https://t.co/ZNkRZUNGWM(1/2)pic.twitter.com/pTTxlLslTJ— Pratap Reddy, IPS ಪೊಲೀಸ್ ಆಯುಕ್ತರು, ಬೆಂಗಳೂರು ನಗರ (@CPBlr)May 11, 2021
ಸುದ್ದಿ ಪರಿಶೀಲಿಸಿ ಶೇರ್ ಮಾಡಿ!!ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು.https://t.co/ZNkRZUNGWM(1/2)pic.twitter.com/pTTxlLslTJ
ಅಷ್ಟಕ್ಕೂ ಈ ವೈರಲ್‌ ಫೋಟೋದಲ್ಲಿ ಪೊಲೀಸರು ವ್ಯಕ್ತಿಯೊಬ್ಬನನ್ನು ಹಿಗ್ಗಾಮುಗ್ಗ ಥಳಿಸುತ್ತಿರುವ ದೃಶ್ಯ ಕಾಣಬಹುದಾಗಿದೆ. ಮನಸೋ ಇಚ್ಛೆ ಲಾಠಿಯಿಂದ ಥಳಿಸುತ್ತಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ಆದರೆ ಈ ರೀತಿ ನಡೆದಿರುವುದು ನಿಜವೇ. ಆದರೆ ಈ ವಿಡಿಯೋ ಕರ್ನಾಟಕದಲ್ಲಿ ಆಗಿದ್ದು, ಕರ್ನಾಟಕದ ಪೊಲೀಸರು ಇಂಥ ಕೃತ್ಯ ಎಸಗಿದ್ದಾರೆ ಎಂದು ಕ್ಯಾಪ್ಷನ್‌ ನೀಡಿ ವೈರಲ್‌ ಆಗುತ್ತಿದೆ. ಅದನ್ನೇ ಸಹಸ್ರಾರು ಮಂದಿ ತಮ್ಮ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡು ಕರ್ನಾಟಕ ಪೊಲೀಸರನ್ನು ನಿಂದಿಸುತ್ತಿದ್ದಾರೆ.
ಈ ಕುರಿತು ಎಚ್ಚರಿಕೆ ನೀಡಿರುವ ಕಮಲ್ ಪಂತ್, ಅವರು ಟ್ವೀಟ್‌ ಮಾಡಿರುವ ಕಮಲ್‌ ಪಂತ್‌ ಅವರು, ಸುದ್ದಿ ಪರಿಶೀಲಿಸಿ ಶೇರ್ ಮಾಡಿ, ಒಬ್ಬ ವ್ಯಕ್ತಿಯನ್ನು ಸುತ್ತುವರಿದು ಪೊಲೀಸ್ ಹೊಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಬ್ಬ ಮಹಿಳೆ ಅದನ್ನು ಕರ್ನಾಟಕ ಲಾಕ್ಡೌನ್ ಸಮಯದಲ್ಲಿ ನಡೆದಿದ್ದು ಎಂದು ವಿವರಿಸುತ್ತಾ ಇರುವುದು ವಿಡಿಯೋದಲ್ಲಿ ಗಮನಿಸಬಹುದು.
ಈ ಮೂಲಕ ತಿಳಿಸುವುದೇನೆಂದರೆ, ಆ ದೃಶ್ಯದಲ್ಲಿರುವುದು ಕರ್ನಾಟಕ ಪೊಲೀಸ್ ಅಲ್ಲ, ಆ ಘಟನೆ ಏಪ್ರಿಲ್ 3,2020 ಮುಂಬೈಯಲ್ಲಿ ನಡೆದಿದೆ. ಈ ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ರೀತಿ ಪ್ರಚೋದನಾತ್ಮಕ ಸುದ್ದಿಗಳಿಂದ ದಿಕ್ಕು ತಪ್ಪಬಾರದು. ಯಾವುದೇ ಸುದ್ದಿಯ ನೈಜತೆಯನ್ನು ಮೊದಲು ಪರಿಶೀಲಿಸಬೇಕು ಎಂದು ಎಚ್ಚರಿಸಿದ್ದಾರೆ.
ಕಂಗೆಡಿಸಿರುವ ಬ್ಲ್ಯಾಕ್‌ ಫಂಗಸ್‌- ಎರಡು ದಿನಗಳಲ್ಲಿ ವರದಿ, 2480 ವೈದ್ಯರ ನೇಮಕ
ಹೊರಗೆ ಬಂದವರ ಮೇಲೆ ಬಲಪ್ರಯೋಗ ಬೇಡ- ಕಾನೂನುರೀತ್ಯಾ ಕ್ರಮ ಎಂದು ಪೊಲೀಸರಿಗೆ ಸೂಚನೆ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 8 =
Remember me
