ತುಮಕೂರು:ಮರ ಚಿಳಿನಿ, ದೇಶ ಉಳಿನಿ…. ತೈಲ ಉಳಿನಿ… ಬಾಲ ಕಾರ್ಮಿಕರನ್ನು ನಿಷೇದಿಸಿ, ವಿದ್ಯಾಬ್ಯಾಸ ನೀಡಿ… ಮದ್ಯಪಾನ ಮೊಡಿ, ಜವ ಕಾಪಾಡಿ…
– ಇಷ್ಟೊಂದು ಲೋಪ ಇರುವ ಕನ್ನಡದ ಅಕ್ಷರ ಬೇರೆ ರಾಜ್ಯದಲ್ಲಿ ಬರೆದಿರುವುದಲ್ಲ. ಬದಲಿಗೆ ನಮ್ಮದೇ ಕರ್ನಾಟಕದ ತುಮಕೂರಿನಲ್ಲಿ ಬರೆದಿರುವ ಗೋಡೆ ಬರಹಗಳಿವು. ಅದೂ ಈ ಬರಹಗಳನ್ನು ಬರೆಸಿರುವುದು ಸ್ಮಾರ್ಟ್​ ಸಿಟಿ ಎಂದು ಕರೆಸಿಕೊಳ್ಳುವ ತುಮಕೂರು ಮಹಾನಗರ ಪಾಲಿಕೆ!
ಹಲವಾರು ಇಂಥ ಗೋಡೆ ಬರಹಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಕನ್ನಡ ಅಕ್ಷರಗಳ ಕಗ್ಗೊಲೆ ಮಾಡಲಾಗಿದೆ ಎಂದು ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತುಮಕೂರು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿಯಿಂದ ಆಗಿರುವ ಈ ಮಹಾ ಎಡವಟ್ಟು ಜಾಲತಾಣದಲ್ಲಿ ಥಹರೇವಾರು ಕಮೆಂಟ್​ಗಳಿಗೆ ಆಹಾರವಾಗಿದೆ.
ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಗೋಡೆ ಬರಹಗಳಲ್ಲಿ ಇಂಥ ಹಲವಾರು ಲೋಪಗಳು ಕಂಡುಬಂದಿವೆ. ಅಲ್ಪಪ್ರಾಣ, ಮಹಾಪ್ರಾಣದ ಸಮಸ್ಯೆ ಅಷ್ಟೇ ಅಲ್ಲದೇ ಅಕ್ಷರಗಳು ಕೂಡ ತಪ್ಪಾಗಿ ಬರೆದಿರುವುದು ಬಹಳ ಟೀಕೆಗೆ ಗುರಿಯಾಗಿದೆ.
ತುಮಕೂರಿನ ರೈಲ್ವೆ ಸ್ಟೇಷನ್ ಬಳಿ ರಸ್ತೆಯ ಎಡ ಮತ್ತು ಬಲ ಭಾಗದ ಗೋಡೆಗಳ ಮೇಲೆ ಇವುಗಳನ್ನು ಬರೆಯಲಾಗಿದೆ. ಸಾರ್ವಜನಿಕರಿಗೆ ಉಪಯುಕ್ತ ಮಾಹಿತಿ ನೀಡುವ ಸಾಂದರ್ಭಿಕ ಗೋಡೆ ಬರಹಗಳು ಇವಾಗಿವೆ. ಪರಿಸರ ಜಾಗೃತಿ, ಸಂಚಾರಿ ನಿಯಮ ಹಾಗೂ ಸಾರ್ವಜನಿಕರಿಗೆ ಇತರ ಮಾಹಿತಿ ನೀಡುವಂಥ ಬರಹಗಳಲ್ಲಿ ಈ ಎಡವಟ್ಟು ನಡೆದಿದೆ.
ಅಪಾರ್ಥ ಬರುವಂತೆ ಬರೆದಿರುವ ಕನ್ನಡ ಪದಗಳನ್ನು ಸರಿಪಡಿಸುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ. ಇಂಥ ಬರಹಗಳನ್ನು ಬರೆಯಲು ಸ್ಥಳೀಯರಿಗೆ ಆದ್ಯತೆ ನೀಡುವ ಬದಲು ಹೊರ ರಾಜ್ಯದವರಿಗೆ ನೀಡಿರುವ ಕಾರಣದಿಂದ ಇಂಥ ಲೋಪಗಳು ಆಗುತ್ತಿವೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕುತ್ತಿದ್ದಾರೆ. ತಪ್ಪಾಗಿರುವ ಅಕ್ಷರಗಳನ್ನು ಸರಿ ಪಡಿಸದಿದ್ದರೆ ಉಗ್ರಹೋರಾಟದ ಎಚ್ಚರಿಕೆ ನೀಡಲಾಗಿದೆ.(ದಿಗ್ವಿಜಯ ನ್ಯೂಸ್​)
ತಂದೆಯ ಆಸ್ತಿಯನ್ನು ಮಕ್ಕಳ ಸಹಿ ಇಲ್ಲದೇ ಮಾರಾಟ ಮಾಡಿದರೆ ಕಾನೂನಿನಡಿ ಇರುವ ಅವಕಾಶಗಳೇನು?

ಪಿಎಫ್​ಐ ಪ್ರತಿಭಟನೆಗೆ ಹೈಕೋರ್ಟ್​ ಕೆಂಡಾಮಂಡಲ: ಸ್ವಯಂ ಪ್ರೇರಿತ ದೂರು ದಾಖಲು- ನ್ಯಾಯಾಂಗ ನಿಂದನೆ ಎಚ್ಚರಿಕೆ

ರಂಗೇರಿದ ಅಧ್ಯಕ್ಷ ಖುರ್ಚಿ ಫೈಟ್​: ಎರಡೂ ಹುದ್ದೆ ಇರಲಿ ಎಂದ ಸಿಎಂ ಗೆಹ್ಲೋಟ್​ಗೆ ಶಾಕ್​ ಕೊಟ್ಟ ರಾಹುಲ್​ಗಾಂಧಿ!

Sign in to your account
Please enter an answer in digits:fourteen + eighteen =
Remember me
