ಬೆಂಗಳೂರು:ಪವರ್​ ಸ್ಟಾರ್​ ಪುನೀತ್ ರಾಜ್ ಕುಮಾರ್ ಒಂಬತ್ತು ತಿಂಗಳುಗಳೇ ಕಳೆದುಹೋಗಿವೆ. ಅವರ ನಿಧನದ ನಂತರ ಅವರಿಗೆ ಕರ್ನಾಟಕ ರತ್ನ ಘೋಷಣೆ ಮಾಡಬೇಕು ಎಂಬ ಕೂಗು ಬಹಳವಾಗಿ ಕೇಳಿ ಬಂದಿತ್ತು. ಖುದ್ದು ಅಪ್ಪು ಕುಟುಂಬದ ಆತ್ಮೀಯರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ್ದರು.
ಪ್ರಶಸ್ತಿ ಘೋಷಣೆಯಾಗಿ ಕೆಲ ತಿಂಗಳು ಕಳೆದಿದ್ದರೂ ಪ್ರಶಸ್ತಿ ಪ್ರದಾನವಾಗಿರಲಿಲ್ಲ. ಅದರ ದಿನಾಂಕವೂ ಘೋಷಣೆಯಾಗಿರಲಿಲ್ಲ. ಆದ್ದರಿಂದ ಅಪ್ಪು ಅಭಿಮಾನಿಗಳು ಈ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದರು. ಅವರ ಕಾತರಕ್ಕೆ ಈಗ ತೆರೆ ಬಿದ್ದಿದೆ.
ಈ ಬಾರಿಯ ಕರ್ನಾಟಕ ರಾಜ್ಯೋತ್ಸವದ ದಿನ ಅಂದರೆ ನವೆಂಬರ್​ 1ರಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.ಬೆಂಗಳೂರಿನ ಲಾಲ್​ಬಾಗ್​ನಲ್ಲಿ ನಡೆಯುತ್ತಿರುವ ಫಲ ಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಬೊಮ್ಮಾಯಿ, ‘ಅಪ್ಪುಗೆ ಘೋಷಣೆ ಮಾಡಿರುವ ಕರ್ನಾಟಕ ರತ್ನ ಪ್ರಶಸ್ತಿಯನ್ನು ನವೆಂಬರ್ 1 ರಂದು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಈ ಕಾರ್ಯಕ್ರಮದ ತಯಾರಿಗೆ ಸಮಿತಿಯನ್ನು ರಚನೆ ಮಾಡಿದ್ದೇವೆ. ಡಾ. ರಾಜ್‍ಕುಮಾರ್ ಕುಟುಂಬದ ಸದಸ್ಯರು ಈ ಸಮಿತಿಯಲ್ಲಿ ಇರುತ್ತಾರೆ ಎಂದು‌ ಸಿಎಂ ಹೇಳಿದರು.
ಇಂದು ಉದ್ಘಾಟನೆಗೊಂಡ ಫಲ ಪುಷ್ಪ ಪ್ರದರ್ಶನದಲ್ಲಿ ಡಾ.ರಾಜ್ ಕುಮಾರ್ ಮತ್ತು ಅಪ್ಪು ನೆನಪಿನಲ್ಲಿ ವಿಶೇಷ ಪ್ರದರ್ಶನ ಆಯೋಜನೆಗೊಂಡಿದೆ. ಪುನೀತ್ ಮತ್ತು ಡಾ.ರಾಜ್ ಪುತ್ಥಳಿಗಳನ್ನು ಲಾಲ್​ಬಾಗ್​ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಮೂಲಕ ಪುನೀತ್​ ರಾಜ್​ಕುಮಾರ್​ ಅವರಿಗೆ ಸರ್ಕಾರ ಗೌರವ ಸಲ್ಲಿಸಿದೆ. ಇಂದಿನಿಂದ ಹತ್ತು ದಿನಗಳ ಕಾಲ ನಡೆಯುವ ಈ ಪ್ರದರ್ಶನದಲ್ಲಿ ನೆಚ್ಚಿನ ನಟರ ವಿವಿಧ ಕಲಾಕೃತಿಗಳನ್ನೂ ಅಲ್ಲಿ ನೋಡಬಹುದಾಗಿದೆ.
ದಿವಂಗತ ನಟ ಪುನೀತ್‌ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ನೀಡಲು ನಮಗೆ ಸಂಭ್ರಮವಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.
VIDEO: ‘ಹರ್​ ಘರ್​ ತಿರಂಗಾ’ ಗಾಯನದ ವಿಡಿಯೋ ರಿಲೀಸ್​: ದೇಶಭಕ್ತಿ ಉಕ್ಕಿಸುವ ಹಾಡು ಇಲ್ಲಿದೆ ಕೇಳಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
