ಧಾರವಾಡ:ಕರೊನಾ ಕಾರಣದಿಂದಾಗಿ ಇದಾಗಲೇ ಹಲವಾರು ಪರೀಕ್ಷೆಗಳು ರದ್ದಾಗಿದ್ದರೆ, ಇನ್ನು ಕೆಲವು ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಇದೀಗ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಈ ಕುರಿತು ವಿಶ್ವವಿದ್ಯಾಲಯದಿಂದ ಆದೇಶ ಹೊರಡಿಸಲಾಗಿದೆ. ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ ಎಂದು ಅದರಲ್ಲಿ ಉಲ್ಲೇಖವಾಗಿದೆ.
ಕರೊನಾ ಇದ್ದರು ಕೂಡ ಪರೀಕ್ಷೆಗಳನ್ನು ಮುಂದೂಡದ ವಿಶ್ವವಿದ್ಯಾಲಯದ ಕ್ರಮವನ್ನು ಖಂಡಿಸಿ ವಿದ್ಯಾರ್ಥಿಗಳು, ಕುಲಪತಿ ಕಚೇರಿ ಬಳಿ ದಿಢೀರನೇ ಪ್ರತಿಭಟನೆ ನಡೆಸಿದರು. ನಮಗೆ ಸದ್ಯಕ್ಕೆ ಪರೀಕ್ಷೆ ಬೇಡ ಎಂದು ಒಕ್ಕೋರಲಿನಿಂದ ಕೂಗಿದರು. ಕರೊನಾ ಕಡಿಮೆಯಾದ ಮೇಲೆ ಪರೀಕ್ಷೆ ಮಾಡಿ ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳ ಮನವಿಯನ್ನು ಆಲಿಸಿದ ವಿಶ್ವವಿದ್ಯಾಲಯದ ಆಡಳಿತ ಮಂಡಳಿ, ಅನಿರ್ದಿಷ್ಟಾವಧಿಗೆ ಪರೀಕ್ಷೆ ಮುಂದೂಡಿ ಆದೇಶ ಮಾಡಿದೆ. ಹಾಸ್ಟೆಲ್‍ಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಸ್ಟೆಲ್ ಸ್ಯಾನಿಟೈಸ್ ಮಾಡಿದ ಬಳಿಕವೇ ಒಳಗೆ ಬರುತ್ತೇವೆ. ಪರೀಕ್ಷೆ ನಡೆಸುವ ಒಂದು ವಾರ ಮುಂಚಿತವಾಗಿ ನಮಗೆ ಸೂಚನೆ ನೀಡಬೇಕು. ಹಾಸ್ಟೆಲ್ ಕ್ಲೀನ್ ಮಾಡಿಸಿದರೆ ಹಿಂದಿರುಗುತ್ತೇವೆ. ಸದ್ಯಕ್ಕೆ ಪರೀಕ್ಷೆ ಮುಂದೂಡಿದ್ದಕ್ಕೆ ವಿದ್ಯಾರ್ಥಿಗಳು ಹೇಳಿದ್ದಾರೆ.
ಕರೊನಾ ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದ ಮೇಲೆ ಷಾರ್ಟ್​ ನೋಟಿಸ್​ ನೀಡಿ ಪರೀಕ್ಷೆ ನಡೆಸುವುದಾಗಿ ಆಡಳಿತ ಮಂಡಳಿ ಹೇಳಿದೆ.
‘ಇಂಜೆಕ್ಷನ್​ ತಗೊಂಡ್ರೆ ಕರೊನಾ ಹೋಗಲ್ಲ ಸ್ವಾಮಿ… ಇದನ್ನೊಮ್ಮೆ ಏರಿಸಿ ನೋಡಿ…. ಆಮೇಲೆ ಹೇಳಿ…’

ಸಚಿವ ಸುರೇಶ್​ ಕುಮಾರ್​ ಆಪ್ತ ಸಹಾಯಕ ರಮೇಶ್​ ಕರೊನಾಕ್ಕೆ ಬಲಿ

ಸಾವಿನ ದವಡೆಗೆ ನೂಕುವ ಕ್ರಿಮಿ…. ಮತ್ತೆ ಸುದ್ದಿಯಲ್ಲಿ ಬಿಗ್​ಬಾಸ್​ ಸ್ಪರ್ಧಿ ಚೈತ್ರಾ ಕೋಟೂರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 9 =
Remember me
