ಬೆಂಗಳೂರು:ಯಶ್ ಅಭಿನಯದ ಕೆಜಿಎಫ್ 2 ಬಾಕ್ಸ್​ ಆಫೀಸ್​ ಕೊಳ್ಳೆಹೊಡೆದಿದೆ. ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲಿಯೂ ಈ ಚಿತ್ರ ಭಾರಿ ಸದ್ದು ಮಾಡುತ್ತಿರುವುದು ಗೊತ್ತಿರುವ ವಿಷಯವೇ.
ಕರ್ನಾಟಕದಲ್ಲಿ 153.8 ಕೋಟಿ ರೂ, ತೆಲುಗು ರಾಜ್ಯದಲ್ಲಿ 125.7 ಕೋಟಿ ರೂ. , ತಮಿಳುನಾಡು 94.24 ಕೋಟಿ ರೂ. , ಕೇರಳದಲ್ಲಿ 53.8 ಕೋಟಿ ರೂ. , ಇತರೆಡೆ 402.9 ಕೋಟಿ ರೂ. ಹೀಗೆ ಒಟ್ಟಾರೆಯಾಗಿ 816.3 ಕೋಟಿ ರೂ. ಗಳಿಗೆ ಹಾಗೂ ವಿದೇಶದಲ್ಲಿ 164.2 ಕೋಟಿ ರೂಗಳಿಗೆ, ಎಲ್ಲವನ್ನೂ ಸೇರಿಸಿ 980.5 ಕೋಟಿ ರೂ. ಕಲೆಕ್ಷನ್ ಮಾಡುವ ಮೂಲಕ ಕನ್ನಡದಲ್ಲಿ ಸಾವಿರ ಕೋಟಿ ರೂ. ಕಲೆಕ್ಷನ್​ ಮಾಡಿದ ಮೊದಲ ಚಿತ್ರ ಎನಿಸಿಕೊಂಡಿದೆ. ರಾಜಮೌಳಿ ನಿರ್ದೇಶನದ ಬಾಹುಬಲಿ ಚಿತ್ರ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ 1000 ಕೋಟಿ ರೂ. ರೂ. ಗಳಿಸಿದ ಮೊದಲ ಚಿತ್ರವಾಗಿದ್ದು, ಎರಡನೇ ಸ್ಥಾನವನ್ನು ಕೆಜಿಎಫ್​ 2 ಅಲಂಕರಿಸಿದೆ.
ಇದಾಗಲೇ ಹಲವಾರು ದಾಖಲೆಗಳನ್ನು ಬರೆದಿರುವ ಕೆಜಿಎಫ್-2 ನೋಡದವರು ಅತಿ ವಿರಳ ಎನ್ನಬಹುದು. ಅಂಥವರಿಗೆ ಹಾಗೂ ಇನ್ನೊಮ್ಮೆ ಈ ಚಿತ್ರವನ್ನು ನೋಡಬೇಕು ಎಂದುಕೊಳ್ಳುತ್ತಿರುವವರಿಗೆ ಇದೀಗ ಖುಷಿಯ ವಿಚಾರವೊಂದು ಹೊರ ಬಂದಿದೆ. ಅದೇನೆಂದರೆ, ಕೆಜಿಎಫ್​-2 ಅನ್ನು ಉಚಿತವಾಗಿ ನೋಡುವ ಅವಕಾಶವನ್ನು ಕಲ್ಪಿಸಲಾಗಿದೆ.
ಅಮೇಜಾನ್​ ಪ್ರೈಮ್​ನಲ್ಲಿ ಕೆಜಿಎಫ್​ 2 ಇದಾಗಲೇ ದಾಖಲೆ ಬರೆದಿದ್ದು, ಅಲ್ಲೀಗ ಅದನ್ನು ಉಚಿತವಾಗಿ ನೋಡಬಹುದಾಗಿದೆ. ಈ ಮೊದಲು ಹಿಂದಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿದಂತೆ 5 ಭಾಷೆಗಳಲ್ಲಿ ಪ್ರೇಕ್ಷಕರು ದುಡ್ಡು ಕೊಟ್ಟು ಅಮೇಜಾನ್​ ಪ್ರೈಮ್​ನಲ್ಲಿ ಚಿತ್ರ ನೋಡಬಹುದಿತ್ತು. ಇದೀಗ ಅಲ್ಲಿ ಉಚಿತವಾಗಿ ನೋಡಬಹುದಾಗಿದೆ.
‘ಕೆಜಿಎಫ್ 2’ ಜೂನ್ 3 ರಿಂದ ಅಮೆಜಾನ್ ಪ್ರೈಂ ವಿಡಿಯೋದಲ್ಲಿ ರಿಲೀಸ್ ಆಗುತ್ತಿದೆ. ಇದನ್ನು ನೋಡಲು ಯಾವುದೇ ರೀತಿಯ ಹೆಚ್ಚುವರಿ ಹಣ ಕಟ್ಟಬೇಕಾಗಿಲ್ಲ. ಅಮೆಜಾನ್ ಮೆಂಬರ್‌ಶಿಪ್ ಇದ್ದರೆ ಸಾಕು. ಎಲ್ಲಾ ಸಿನಿಮಾಗಳ ಹಾಗೆ ಈ ಚಿತ್ರವನ್ನು ಅಮೆಜಾನ್‌ನಲ್ಲಿ ನೋಡಬಹುದು.
7 ಶತಕೋಟಿ ಒಡತಿ ನಟಿ ಐಶ್ವರ್ಯ ರೈ ಪಡೆದ ಮೊದಲ ಸಂಬಳ ಇಷ್ಟೇನಾ… ಮಾಡೆಲಿಂಗ್​ ಅಗ್ರಿಮೆಂಟ್​ ವೈರಲ್​
VIDEO: ಇಬ್ಬರು ನಿರೂಪಕರ ಮಧ್ಯೆ ಸಿಕ್ಕು ವೇದಿಕೆ ಮೇಲೆಯೇ ಬಿಕ್ಕಿಬಿಕ್ಕಿ ಅತ್ತ ನಟಿ ಕೃತಿ- ಅಷ್ಟಕ್ಕೂ ಆಗಿದ್ದೇನು? ವಿಡಿಯೋ ಇಲ್ಲಿದೆ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × four =
Remember me
