ಬೆಂಗಳೂರು:2016ರಲ್ಲಿ ಬಿಡುಗಡೆಗೊಂಡಿದ್ದ ಪ್ರಸಿದ್ಧ ಚಲನಚಿತ್ರ ಕಿರಿಕ್​ ಪಾರ್ಟಿಗೆ ಇದೀಗ ಕಿರಿಕಿರಿ ಶುರುವಾಗಿದೆ. ಇದಕ್ಕೆ ಕಾರಣ, ಕೋರ್ಟ್​ನಿಂದ ಇಡೀ ಚಿತ್ರತಂಡಕ್ಕೆ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ.
ಕಿರಿಕ್ ಪಾರ್ಟಿ ಚಿತ್ರದಲ್ಲಿ ಲಹರಿ ಹಾಡುಗಳ ಅಕ್ರಮ ಬಳಕೆ ಮಾಡಿದ್ದ ಆರೋಪವನ್ನು ಚಿತ್ರತಂಡ ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡೀಯೋಸ್ ಆರೋಪಿಗಳ ಸ್ಥಾನದಲ್ಲಿ ನಿಂತಿದ್ದು ಎಲ್ಲರಿಗೂ ವಾರೆಂಟ್​ ಜಾರಿ ಮಾಡಿ 9 ನೇ ಎಸಿಎಂಎಂ ಕೋರ್ಟ್ ಆದೇಶಿಸಿದೆ.
ಯಾರದ್ದೇ ಅನುಮತಿ ಇಲ್ಲದೇ ನಿಯಮ ಬಾಹಿರವಾಗಿ ಹಾಡುಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ ಎಂದು ಲಹರಿ ರೆಕಾರ್ಡಿಂಗ್ಸ್ ಚಿತ್ರತಂಡದ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ಹಾಕಿತ್ತು. ಕಾಪಿ ರೈಟ್ಸ್ ಆಕ್ಟ್ ಸೆಕ್ಷನ್​ 63ಎ ಮತ್ತು 63 ಬಿ ಅಡಿಯಲ್ಲಿ ಕೇಸ್ ಹಾಕಲಾಗಿತ್ತು. ಈ ಕೇಸ್​ 2019ರಲ್ಲಿ ದಾಖಲಾಗಿತ್ತು.
ಅರ್ಜಿಯಲ್ಲಿ ಸಿನಿಮಾ ರಿಲೀಸ್ ಮಾಡದಂತೆ ಕೋರಿಕೆ ಮಾಡಲಾಗಿತ್ತು. ಆದರೆ ಚಿತ್ರತಂಡ ಅನುಮತಿ ಪಡೆದು ಸಿನಿಮಾ ಬಿಡುಗಡೆ ಮಾಡಿತ್ತು. ಆದರೆ ಕೇಸ್​ಗಳು ಮಾತ್ರ ಕೋರ್ಟ್​ನಲ್ಲಿ ನಡೆಯುತ್ತಲೇ ಇತ್ತು. ಇದೀಗ ಆದೇಶ ಹೊರಬಂದಿದ್ದು ಎಲ್ಲರಿಗೂ ಜಾಮೀನುರಹಿತ ವಾರೆಂಟ್​ ಜಾರಿ ಮಾಡಲಾಗಿದೆ.
ಇದಾಗಲೇ ಎಂಟು ಬಾರಿ ಕೋರ್ಟ್​ ನೋಟಿಸ್​ ಜಾರಿಗೊಳಿಸಿದ್ದರೂ ಅದಕ್ಕೆ ಉತ್ತರಿಸದ ಹಿನ್ನೆಲೆಯಲ್ಲಿ ಈಗ ಜಾಮೀನುರಹಿತ ವಾರೆಂಟ್​ ಜಾರಿಯಾಗಿದ್ದು, ಆರೋಪಿಗಳನ್ನು ಮೇ 27ರಂದು ಕೋರ್ಟ್​ಗೆ ಹಾಜರುಪಡಿಸುವಂತೆ ಆದೇಶಿಸಲಾಗಿದೆ.
18 ವರ್ಷ ಆದ್ರೆ ಸಾಕು- ಯಾವ ಧರ್ಮವನ್ನಾದ್ರೂ ಆಯ್ಕೆ ಮಾಡಿಕೊಳ್ಳಬಹುದು ಎಂದ ಸುಪ್ರೀಂಕೋರ್ಟ್​

ರಾಹುಲ್​ ದ್ರಾವಿಡ್​ಗೆ ಕೋಪ ಉಕ್ಕೇರಿದಾಗ ಬಂತು ಕನ್ನಡದ ನುಡಿ… ‘ಒಡೆದ್​ಹಾಕ್​​ ​​ಬಿಡ್ತೀನಿ….’

ನಾಳೆಯಿಂದ ನೈಟ್​ ಕರ್ಫ್ಯೂ: ಸರ್ಕಾರದ ಈ ಅಧಿಕೃತ ಆದೇಶದಲ್ಲಿ ಎಲ್ಲ ಸಂದೇಹಗಳಿಗೆ ಪರಿಹಾರ…

ಕಷ್ಟಪಟ್ಟು ಸ್ಮಾರ್ಟ್​​ಫೋನ್​ ಎಗರಿಸಿದ ಕಳ್ಳ ವಾಪಸ್​ ಕೊಟ್ಟುಬಿಟ್ಟ- ಕಾರಣ ಕೇಳಿ ಪತ್ರಕರ್ತ ಸುಸ್ತಾದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 10 =
Remember me
