ಬೆಂಗಳೂರು:ವಿಶ್ವದಲ್ಲಿ ಏನೇ ಅನಾಹುತ, ಅಲ್ಲೋಲ ಕಲ್ಲೋಲ ಸೃಷ್ಟಿಯಾದರೂ ಕಾಲಜ್ಞಾನಿಗಳು ನುಡಿದ ಭವಿಷ್ಯದ ಮಾತುಗಳು ಮುನ್ನೆಲೆಗೆ ಬರುತ್ತವೆ. ಇದಾಗಲೇ ವಿಶ್ವದ ಹಲವಾರು ಆಗುಹೋಗುಗಳ ಬಗ್ಗೆ ಮುನ್ಸೂಚನೆ ನೀಡಿದ್ದ ಕೋಡಿಮಠದ ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ಅವರ ಮಾತುಗಳು ಇದೀಗ ಮತ್ತೆ ಸುದ್ದಿಯಾಗುತ್ತಿದೆ. ಯೂಕ್ರೇನ್‌-ರಷ್ಯಾ ಯುದ್ಧದ ಪರಿಯನ್ನು ನೋಡಿದರೆ ಸ್ವಾಮೀಜಿ ಹೇಳಿರುವ ಮಾತು ಸಾಬೀತಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
ಅದೇನೆಂದರೆ ಎರಡು ವರ್ಷದ ಹಿಂದೆ ಕೋಡಿಮಠದ ಸ್ವಾಮೀಜಿ ಭವಿಷ್ಯ ನುಡಿದಿದ್ದರು. ಅದರಲ್ಲಿ ಅವರು, ಮುಂದಿನ ಎರಡು ವರ್ಷಗಳಲ್ಲಿ ಜಗತ್ತಿನ ಒಂದು ದೇಶ ಭೂಪಟದಿಂದ ಅಳಿಸಿ ಹೋಗಲಿದೆ ಎಂದು ಹೇಳಿದ್ದರು. ಅದರೊಂದಿಗೆ ಈ ವರ್ಷದ ಆರಂಭದಲ್ಲಿ ಚಿಕ್ಕಬಳ್ಳಾಪುರದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಬಂದಿದ್ದ ಕೋಡಿಮಠದ ಶ್ರೀಗಳು, ಈ ವರ್ಷ ಜಗತ್ತಿಗೆ ಗಾಳಿ ಗಂಡಾಂತರ ಕಾದಿದೆ ಎಂದು ಹೇಳಿದ್ದರು.
ಆಗ ಈ ಭವಿಷ್ಯ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ವಿಚಾರ ಎಂದು ಉಲ್ಲೇಖಿಸಲಾಗಿತ್ತು. ಆದರೆ, ಅಪ್ಘಾನಿಸ್ತಾನ ತಾಲಿಬಾನಿಗಳ ವಶವಾಗಿದೆಯೇ ವಿನಾ ಅದು ಅಳಸಿಹೋಗಲಿಲ್ಲ. ಆದರೆ ಸ್ವಾಮೀಜಿ ನುಡಿದಿರುವುದು ಯೂಕ್ರೇನ್‌ ದೇಶದ ಬಗ್ಗೆ ಎಂದು ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಅವರು ಹೇಳಿದ್ದ ಎರಡು ವರ್ಷಗಳ ಅವಧಿಗೂ, ಇದೇ ವೇಳೆ ಅದೇ ಎರಡು ವರ್ಷದಲ್ಲಿ ಯೂಕ್ರೇನ್‌ ಮೇಲಿನ ರಷ್ಯಾ ದಾಳಿಗೂ ತಾಳೆ ಹಾಕಿದಾಗ ಇದು ನಿಜ ಎನ್ನುವುದು ಸಾಬೀತಾಗುತ್ತಿದೆ.
ಇದಕ್ಕೆ ಕಾರಣ ಏನೆಂದರೆ, ಯೂಕ್ರೇನ್‌ ಮೇಲೆ ಸಮರ ಘೋಷಣೆ ಮಾಡಿರುವ ರಷ್ಯಾ, ಅದನ್ನು ಸಂಪೂರ್ಣವಾಗಿ ವಶಕ್ಕೆ ಪಡೆದು ಅದರ ಹುಟ್ಟಡಗಿಸುವ ಪ್ರಯತ್ನದಲ್ಲಿ ತೊಡಗಿದೆ. ಇದಾಗಲೇ ಯೂಕ್ರೇನ್‌ನ 137 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ವಿಶೇಷ ಮಿಲಿಟರಿ ಕಾರ್ಯಾಚರಣೆ ಎಂದು ರಷ್ಯಾ ಹೇಳುತ್ತಿರುವ ರಷ್ಯಾ, ನಾಗರಿಕರ ಮೇಲೂ ದಾಳಿ ಮಾಡುತ್ತಿದೆ. ಯೂಕ್ರೇನ್‌ನನ್ನು ಎಲ್ಲಾ ದಿಕ್ಕುಗಳಿಂದಲೂ ದಾಳಿ ಮಾಡುತ್ತಿದೆ. ಸಂಪೂರ್ಣ ದೇಶವನ್ನು ತನ್ನ ತೆಕ್ಕೆಗೆ ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದೆ.
ಒಂಟಿಯಾದ ಯೂಕ್ರೇನ್‌ ಏಕಾಂಗಿ ಹೋರಾಟ: ಸೇನೆಯಷ್ಟೇ ಅಲ್ಲದೇ ಜನರ ಮೇಲೂ ರಷ್ಯಾ ದಾಳಿ! 137 ಮಂದಿ ಬಲಿ

ಮೂಗು ತೂರಿಸಲು ಬಂದ್ರೆ ಇತಿಹಾಸದಲ್ಲಿ ಕಂಡರಿಯದ ಪರಿಣಾಮ ಎದುರಿಸಬೇಕಾಗತ್ತೆ: ಪುತಿನ್ ಎಚ್ಚರಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + six =
Remember me
