ಕೋಲಾರ:ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪಾದಯಾತ್ರೆಗೆ ತೆರಳಿದ್ದ ಕಾಂಗ್ರೆಸ್​ ಕಾರ್ಯಕರ್ತ ನಾಪತ್ತೆಯಾಗಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ.
ಆ.15 ರಂದು ಕೋಲಾರ ತಾಲ್ಲೂಕಿನ ಹೊನ್ನೇನಹಳ್ಳಿ ಗ್ರಾಮದ ಗೋವಿಂದಪ್ಪ (47) ಬೆಂಗಳೂರಿಗೆ ಪಾದಯಾತ್ರೆಯಾಗಿ ಹೊರಟವರು ಇದುವರೆಗೆ ಮನೆಗೆ ವಾಪಸಾಗಲಿಲ್ಲ. ಇವರನ್ನು ಸ್ಥಳೀಯ ಕಾಂಗ್ರೆಸ್​ ಮುಖಂಡರು ಪಾದಯಾತ್ರೆಗೆ ಕರೆದುಕೊಂಡು ಹೋಗಿರುವುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಪಕ್ಕದ ಊರಿನ ನಡುಪಳ್ಳಿ ಗ್ರಾಮದ ಕಾಂಗ್ರೆಸ್ ಮುಖಂಡ ಸಂತೋಷ್ ಎನ್ನುವವರು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದರು. ಆದರೆ ಇದುವರೆಗೂ ಗೋವಿಂದಪ್ಪ ಅವರು ವಾಪಸಾಗಲಿಲ್ಲ. ಇದರಿಂದ ಕುಟುಂಬಸ್ಥರು ಆತಂಕದಲ್ಲಿದ್ದಾರೆ.
ಗೋವಿಂದಪ್ಪನವರ ಬರುವಿಕೆಗೆ ತಾಯಿ, ಹೆಂಡತಿ ಮತ್ತು 3 ಜನ ಹೆಣ್ಣು ಮಕ್ಕಳು ಕಾಯುತ್ತಿದ್ದಾರೆ. ಸದ್ಯ ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೂರು ದಾಖಲು ಮಾಡಲಾಗಿದೆ(ದಿಗ್ವಿಜಯ ನ್ಯೂಸ್​)
VIDEO: ಛಾನ್ಸ್​ ಕೊಡ್ತಿನಿ, ಒಂದು ಲಕ್ಷ ರೂ.ನೂ ಕೊಡ್ತಿನಿ…ಅವರ ಜತೆ ನೀವು… ಬಿಗ್​ಬಾಸ್ ಸ್ಪರ್ಧಿ ಕಿರಣ್​ ಬಿಚ್ಚಿಟ್ಟ ಕರಾಳ ಕಥೆ…
ರೇಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಮಾಜಿ ಸಚಿವನಿಗೆ ರಕ್ಷಣೆ? ಹೈಕೋರ್ಟ್​ ಗರಂ- ಎಫ್​ಐಆರ್​ ದಾಖಲಿಸಲು ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − ten =
Remember me
