ಕೊಳ್ಳೇಗಾಲ: ಅಕ್ರಮ ಸಂಬಂಧ, ಹೆಣ್ಣು ಮಗು ಎಂಬ ನಿರ್ಲಕ್ಷ್ಯ‌ ಧೋರಣೆ, ಸಾಕಲಾಗದ ಪರಿಸ್ಥಿತಿ‌, ಅಂಗವಿಕಲ‌ ಮಗು..ಇತರ ಕಾರಣಗಳಿಂದಾಗಿ ಹೆತ್ತ‌ ತಾಯಿಯೇ ತನ್ನ ಕರುಳ ಬಳ್ಳಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟು ಹೋಗುವ ಪ್ರಕರಣಗಳು ಜಿಲ್ಲೆಯಲ್ಲಿ ಹಿಂದಿನಿಂದಲೂ ಮುಂದುವರೆದಿವೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಮಗುವನ್ನು ಬಸ್ ನಿಲ್ದಾಣದಲ್ಲಿ ಇಟ್ಟು ಹೋಗಿದ್ದ ತಾಯಿ‌ ಮರಳಿ ಸ್ಥಳಕ್ಕೆ ಬಂದಿದ್ದಾಳೆ. ಹಾಗೆಂದು ಇವಳಿಗೆ ಮಗು‌ ಸಾಕುವ ಆಸಕ್ತಿ ಇದೆ ಎಂದು ಭಾವಿಸುವಂತಿಲ್ಲ.
ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಸೋಮವಾರ ಮುಂಜಾನೆ ಹುಟ್ಟಿದ ಎರಡು ದಿನದ ಗಂಡು ಪತ್ತೆಯಾಗಿತ್ತು. ಮಗುವನ್ನು ಬಟ್ಟೆಯಿಂದ ಸುತ್ತಿ ಬಸ್ ನಿಲ್ದಾಣ ಸಮೀಪ ಕಸದ ರಾಶಿ ಬಳಿ ಇಡಲಾಗಿತ್ತು‌.
ಇದನ್ನು ಸ್ಥಳೀಯರು ನೋಡಲಾಗಿ ನವಜಾತ ಶಿಶು ಕಂಡು ಗಾಬರಿಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ಗ್ರಾಮದ ಮಹಿಳೆ‌ ತಾನು ಮಗುವಿನ ತಾಯಿ ಎಂದು ಹೇಳಿ ಸ್ಥಳಕ್ಕೆ ಬಂದಿದ್ದಾಳೆ.
ಪೊಲೀಸರು ಆಕೆಯನ್ನು ವಿಚಾರಿಸಿದಾಗ ತನಗೆ ಮದುವೆ ಆಗಿದೆ. ಗಂಡ ಬಿಟ್ಟು ಹೋಗಿದ್ದಾನೆ.‌ ನನಗೆ ಮಗು ಸಾಕೋ ಆಸಕ್ತಿ‌ ಇಲ್ಲ ಎಂದು ಹೇಳಿದ್ದಾಳೆ. ಈಕೆಯ ಕಥೆ ಕೇಳಿದ ಪೊಲೀಸರು ಮಗುವಿಗೆ ತೊಂದರೆ ಕೊಡಬೇಡ. ಕಾನೂನು ಪ್ರಕಾರ ಬೇರೆಯವರಿಗೆ ದತ್ತು ಕೊಡಿಸಲಾಗುವುದು ಎಂದು ಬುದ್ಧಿವಾದ ಹೇಳಿ ಮಗುವನ್ನು‌ ಮರಳಿ ಆಕೆಯ ಮಡಿಲಿಗೆ ಇಟ್ಟು ಬಂದಿದ್ದಾರೆ. ಮಗು ಹುಟ್ಟಿಗೆ ಕಾರಣಗಳೇನೇ ಇದ್ದರೂ ಅದರ ಪರಿಸ್ಥಿತಿ ನೆನೆದು ಮಕ್ಕಳಿಲ್ಲದವರಿಗೆ ಕರುಳು ಕೊರೆಯುತ್ತಿದೆ. ಮಡಿಲು ಮಿಡಿಯುತ್ತಿದೆ.
ಬಿಜೆಪಿ ಐಟಿ ಸೆಲ್ ಮುಖ್ಯಸ್ಥನ ಭಯಾನಕ ಹಿಸ್ಟರಿ! ಜಮ್ಮುವಿನಲ್ಲಿ ಬಂಧಿಸಿರೋ ಉಗ್ರನ ಹಿನ್ನೆಲೆ ನೋಡಿ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 11 =
Remember me
