ಕೊಪ್ಪಳ:ವಿಶ್ವದ ಅತಿ ದೊಡ್ದ ಸ್ವಯಂಸೇವಾ ಸಂಘಟನೆ ಎನಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಶುರುವಾಗಿದ್ದು 1925ರಲ್ಲಿ. ಯಾವುದೇ ಪ್ರಚಾರ ಬಯಸದೇ ಉಚಿತ ಶಿಕ್ಷಣ ಸೇರಿದಂತೆ ಹಲವಾರು ಜನೋಪಕಾರಿ ಕಾರ್ಯಗಳನ್ನು ಅಂದಿನಿಂದಲೂ ಮಾಡುತ್ತಾ ಬಂದಿರುವ ಈ ಸಂಘ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪಕ್ಷಗಳ ಗಲಾಟೆಯಿಂದಾಗಿ ಮುನ್ನೆಲೆಗೆ ಬಂದಿದೆ. ಬಿಜೆಪಿ ಜತೆಗೆ ಸಂಘ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ, ಆರ್​ಎಸ್​ಎಸ್​ ಜಪವನ್ನು ಪ್ರತಿನಿತ್ಯವೂ ವಿರೋಧ ಪಕ್ಷಗಳು ಮಾಡುವಂತಾಗಿದೆ.
ಆರ್​ಎಸ್​ಎಸ್​ನ ಸಂಘಟಾತ್ಮಕ ಕಾರ್ಯವು ನಡೆಯುವುದು ಶಾಖೆಗಳ ಮೂಲಕ. ಶಾಖೆಗಳು ಪ್ರತಿನಿತ್ಯ ಒಂದು ಗಂಟೆ ಸಾರ್ವಜನಿಕ ಬಯಲು ಸ್ಥಳಗಳಲ್ಲಿ ನಡೆಯುತ್ತವೆ. ಇದರಲ್ಲಿ ಸ್ವಯಂ ಸೇವಕರ ವ್ಯಕ್ತಿತ್ವ ನಿರ್ಮಾಣ ಹಾಗೂ ವಿಕಸನ ದೃಷ್ಟಿಯಿಂದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಪ್ರಥಮ ಚಿಕಿತ್ಸೆ, ಅಪಾಯಕರ ಸನ್ನಿವೇಶಗಳಿಂದ ಜನರನ್ನು ರಕ್ಷಿಸುವುದು ಮತ್ತು ಪುನರ್ವಸತಿಯಂತಹ ಚಟುವಟಿಕೆಗಳ ತರಬೇತಿಗಳನ್ನು ಸ್ವಯಂಸೇವಕರಿಗೆ ನೀಡಲಾಗುತ್ತದೆ.
ಇಂಥ ಶಾಖೆಯಲ್ಲಿ ಪ್ರತಿನಿತ್ಯವೂ ಕೊನೆಯಲ್ಲಿ ಹೇಳುವ ಗೀತೆಯೆಂದರೆ ಅದು, ನಮಸ್ತೆ ಸದಾ ವತ್ಸಲೆ. ಈ ಪ್ರಾರ್ಥನೆ ಇದೀಗ ದೇಶ ಮಾತ್ರವಲ್ಲದೇ ವಿದೇಶದಲ್ಲಿಯೂ ಸುದ್ದಿಯಾಗಲು ಕಾರಣ ಕೊಪ್ಪಳದ ಈ ಪುಟ್ಟ ಬಾಲಕ. 2020ರಲ್ಲಿ ಮಾಡಿದ್ದ ಈ ವಿಡಿಯೋ ಇದೀಗ ದಿಢೀರ್​ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಬಾಲಕ ವಿಶ್ವಖ್ಯಾತಿ ಹೊಂದಿದ್ದಾನೆ!
ಇದಕ್ಕೆ ಕಾರಣ, ಜಾತಿ, ಧರ್ಮದ ಹೆಸರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ವಿದ್ಯಮಾನಗಳು. ಇಷ್ಟೇ ಅಲ್ಲದೇ ಆರ್​ಎಸ್​ಎಸ್​ ಕುರಿತು ಪ್ರತಿಪಕ್ಷಗಳು ನಿತ್ಯವೂ ಟೀಕೆಗಳು ಮಾಡುತ್ತಿರುವುದು! ಈ ಹಿನ್ನೆಲೆಯಲ್ಲಿ ಆರ್​ಎಸ್​ಎಸ್​ ಹೇಗೆ ಮಕ್ಕಳಲ್ಲಿಯೂ ರಾಷ್ಟ್ರಭಕ್ತಿಯನ್ನು ಬೀರುತ್ತಿದೆ ಎಂಬ ಬಗ್ಗೆ ಈ ಬಾಲಕನ ಪ್ರಾರ್ಥನೆ ತೋರಿಸುತ್ತದೆ ಎಂಬ ಕ್ಯಾಪ್ಷನ್​ನೊಂದು ಹರಿಬಿಟ್ಟ ವಿಡಿಯೋ, ಭಾರಿ ಸದ್ದು ಮಾಡುತ್ತಿದೆ. ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗಿದ್ದು, ಲಕ್ಷಾಂತರ ಮಂದಿ ಶೇರ್​ ಮಾಡಿಕೊಂಡಿದ್ದಾರೆ.
ಈ ಬಾಲಕನ ಹೆಸರು ಲೋಹಿತ್. ಕೊಪ್ಪಳ‌ ಜಿಲ್ಲೆ ಕಾರಟಗಿಯ ಪ್ಲಂಬರ್ ಲಿಂಗರಾಜ್ ಅವರ ಮಗ ಲೋಹಿತ್​ನ ಆರ್​ಎಸ್ಎಸ್​ ಪ್ರಾರ್ಥನೆಗೆ ಜನರು ತಲೆದೂಗಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು, ರಾಜ್ಯ ನಾಯಕರು ಸೇರಿ ಸಂಘದ ಮುಖಂಡರು ವಿಡಿಯೋ ಶೇರ್ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದೀಗ ಮಿಲಿಯನಗಟ್ಟಲೇ ವಿವ್ಸ್ ಪಡೆದುಕೊಂಡಿದೆ.(ದಿಗ್ವಿಜಯ ನ್ಯೂಸ್​)
ವಿಡಿಯೋ ಇಲ್ಲಿದೆ ನೋಡಿ…
ಆರ್​ಎಸ್​ಎಸ್​ ಪ್ರಾರ್ಥನಾ ಗೀತೆ ನಮಸ್ತೆ ಸದಾ ವಸ್ತಲೇ. ಹೇಳುವ ಮೂಲಕ ವಿಶ್ವಖ್ಯಾತಿ ಗಳಿಸಿದ ಕೊಪ್ಪಳ‌ ಜಿಲ್ಲೆ ಕಾರಟಗಿಯ ಬಾಲಕ ಲೋಹಿತ್pic.twitter.com/bMP1FE9cww— Vijayavani (@VVani4U)June 12, 2022
ಆರ್​ಎಸ್​ಎಸ್​ ಪ್ರಾರ್ಥನಾ ಗೀತೆ ನಮಸ್ತೆ ಸದಾ ವಸ್ತಲೇ. ಹೇಳುವ ಮೂಲಕ ವಿಶ್ವಖ್ಯಾತಿ ಗಳಿಸಿದ ಕೊಪ್ಪಳ‌ ಜಿಲ್ಲೆ ಕಾರಟಗಿಯ ಬಾಲಕ ಲೋಹಿತ್pic.twitter.com/bMP1FE9cww
Sign in to your account
Please enter an answer in digits:4 + seventeen =
Remember me
