ಕೊಪ್ಪಳ:ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28- ಚಿಕ್ಕಜಂತಕಲ್ ( ಆನೆಗುಂದಿ ) ಎಂದು ಮರುನಾಮಕರಣ ಮಾಡಿರುವುದನ್ನು ಖಂಡಿಸಿ ನಡೆಯತ್ತಿದ್ದ ಸಭೆಯಲ್ಲಿಯೇ ತಾಪಂ ಮಾಜಿ ಸದಸ್ಯರೊಬ್ಬರು ಮೃಪಟ್ಟಿರುವ ಘಟನೆ ನಡೆದಿದೆ.
ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗುಂದಿಯ ಶ್ರೀರಂಗನಾಥ ದೇವಸ್ಥಾನದ ಆವರಣದಲ್ಲಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಹೆಸರನ್ನು ಬದಲಾಯಿಸಿರುವ ಸರ್ಕಾರದ ಕ್ರಮ ಖಂಡಿಸಿ ಸಭೆ ಕರೆಯಲಾಗಿತ್ತು . ಸರ್ಕಾರ ಮತ್ತು ಸ್ಥಳೀಯ ಶಾಸಕರ ನಿರ್ಲಕ್ಷ್ಯದ ನಡೆ ವಿರುದ್ಧ ಪಕ್ಷಾತೀತವಾಗಿ ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದರು.
ಜಿಲ್ಲಾ ಪಂಚಾಯಿತಿ ಕ್ಷೇತ್ರ ಮರುವಿಂಗಣೆಯಲ್ಲಿ ಆನೆಗುಂದಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಎನ್ನುವುದನ್ನು ಕೈಬಿಟ್ಟು 28- ಚಿಕ್ಕಜಂತಕಲ್ ( ಆನೆಗುಂದಿ ) ಎಂದು ಮರುನಾಮಕರಣ ಮಾಡಿರುವುದನ್ನು ಖಂಡಿಸಿ ನಡೆಯತ್ತಿದ್ದ ಸಭೆಯಲ್ಲಿಯೇ ತಾಪಂ ಮಾಜಿ ಸದಸ್ಯ ಪ್ರವೀಣ ಕುಮಾರ್ ಮೃಪಟ್ಟಿರುವ ಘಟನೆ ನಡೆದಿದೆ.pic.twitter.com/3qa8alA7eI
— Vijayavani (@VVani4U)April 2, 2021

ಈ ಸಂದರ್ಭದಲ್ಲಿ ಕಾರ್ಯಕ್ರಮದ ಆಯೋಜಕ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪ್ರವೀಣ ಕುಮಾರ್ ಎಂಬುವವರು ತಮ್ಮ ಅಭಿಪ್ರಾಯ ಹೇಳಿ, ಇದು ಪಕ್ಷಾತೀತ ಸಭೆಯಾಗಲಿ ಎಂದು ಹೇಳಿ ತಮ್ಮ ಆಸನದತ್ತ ಹೋಗುತ್ತಿದ್ದಂತೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದರು.
ಅವರನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ. ಇನ್ನೂ ಆನೆಗುಂದಿ ಹೋರಾಟಕ್ಕಾಗಿ ಪ್ರಾಣ ಬಿಟ್ಟ ಮುಖಂಡನ ಸಾವಿಗೆ ಕ್ಷೇತ್ರದ ಜನ ಕಂಬನಿ ಮಿಡಿದಿದ್ದಾರೆ.
ಸಿಡಿ ಪ್ರಕರಣ: ಪ್ರಕರಣ ಮುಕ್ತಾಯವಾದ ಮೇಲೆ ಬಂಧನದ ಪ್ರಶ್ನೆ ಮಾಡ್ರಪ್ಪ ಎಂದ ಪೊಲೀಸ್​ ಮಹಾನಿರ್ದೇಶಕ

ಸುಷ್ಮಾ, ಜೇಟ್ಲಿ ಸಾವಿಗೆ ಪ್ರಧಾನಿಯತ್ತ ಬೊಟ್ಟು ಮಾಡಿದ ಡಿಎಂಕೆ- ಬೆಳ್ಳಂಬೆಳಗ್ಗೆ ಐಟಿ ಇಲಾಖೆ ನೀಡಿತು ಬಿಗ್​ ಶಾಕ್​!

ಮೂರು ಲಕ್ಷ ಕೊಟ್ಟರೆ ನೀವು ಬಚಾವ್​… ಇಲ್ಲಾಂದ್ರೆ ಅಷ್ಟೇ ಎಂದು ಚಾಕು ತೋರಿಸಿದ ‘ಸಿಸಿಬಿ ಅಧಿಕಾರಿಗಳು’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − one =
Remember me
