ಕೊಪ್ಪಳ:ಹಾವಿನ ದ್ವೇಷ 12 ವರ್ಷ ಎನ್ನುತ್ತಾರೆ. ಆದರೆ ಹಾವಷ್ಟೇ ಅಲ್ಲದೇ ಹಸು, ನಾಯಿ ಸೇರಿದಂತೆ ಕೆಲ ಪ್ರಾಣಿಗಳು ಕೂಡ ದ್ವೇಷ ಸಾಧಿಸಿರುವ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಈಗ ಅಂಥದ್ದೇ ಒಂದು ವಿಚಿತ್ರ ಘಟನೆ ಕೊಪ್ಪಳದಲ್ಲಿ ನಡೆದಿದ್ದು, ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣ ದ್ವೇಷ ಸಾಧಿಸುತ್ತಿದೆ!
ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿದೆ ಈ ಹರಕೆಯ ಕೋಣ, ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರ ಗ್ರಾಮದಲ್ಲಿ ಈ ಘಟನೆ ನಡೆಯುತ್ತಿದೆ. ಜಿಲ್ಲೆಯಲ್ಲಿರುವ ಪ್ರಸಿದ್ಧ ದೇವರಾದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಗೆಂದು ಕೋಣವನ್ನು ಬಿಡಲಾಗಿತ್ತು. ಈ ಕೋಣ ಗ್ರಾಮದಲ್ಲಿ ಮೇವು ತಿನ್ನುತ್ತಿದ್ದ ವೇಳೆ ರೋಷನ್, ದೇವರಾಜು ಹಾಗೂ ಅನಿಲ್ ​​ ಎಂಬುವರು ಬೈದು ಓಡಿಸಿದ್ದಾರೆ.
ಇವರ ವಿರುದ್ಧ ಕೋಣ ತಿರುಗಿಬಿದ್ದಿದೆ. ಈ ಮೂವರು ಎಲ್ಲಿ ಕಂಡರೂ ಬಿಡುತ್ತಿಲ್ಲ. ಅವರನ್ನು ತಿವಿದು ಅಟ್ಟಾಡಿಸಿಕೊಂಡು ಹೋಗುತ್ತಿದೆ. ಮನೆಯೊಳಗೆ ಓಡಿಹೋದರೂ ಬಿಡುತ್ತಿಲ್ಲ. ಇವರ ಮನೆ ಮುಂದೆ ಕಾಯುತ್ತಿದೆ ಕೋಣ! ಇದು ಕಂಟೆಮ್ಮ ದೇವಿಯ ಪಾವಡ ಎನ್ನುತ್ತಿದ್ದಾರೆ ಗ್ರಾಮಸ್ಥರು. ಉಳಿದ ಗ್ರಾಮಸ್ಥರಿಗೆ ಮಾತ್ರ ಏನು ಮಾಡುತ್ತಿಲ್ಲ. ಇದರಿಂದ ಇವರು ಮನೆಯಿಂದ ಹೊರಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.(ದಿಗ್ವಿಜಯ ನ್ಯೂಸ್​)
ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿದೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣ,pic.twitter.com/Xx4aRB9Sap— Vijayavani (@VVani4U)June 27, 2022
ಬೈದು ಹೊಡೆದವರನ್ನು ಬೆಂಬಿಡದೆ ಕಾಡುತ್ತಿದೆ ಕೊಪ್ಪಳ ತಾಲೂಕಿನ ಹಳೇ ಬಂಡಿಹರ್ಲಾಪುರದ ಶ್ರೀಕಂಟೆಮ್ಮ ದುರ್ಗಾ ದೇವಿಯ ಹರಕೆಯ ಕೋಣ,pic.twitter.com/Xx4aRB9Sap
Sign in to your account
Please enter an answer in digits:10 − 10 =
Remember me
