ಬಾಗಲಕೋಟೆ:ಬಾಗಲಕೋಟೆ ಜಿಲ್ಲೆಯ ಹುನಗಂದ ತಾಲೂಕಿನ ಕೂಡಲಸಂಗಮದಲ್ಲಿ ಮೂಲ ಸೌಕರ್ಯದ ಕೊರತೆ ಇದ್ದು, ಇದರತ್ತ ಗಮನ ಹರಿಸದ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ.
ಇನ್ನು, ಪ್ರಾಧಿಕಾರದಿಂದ ಕೆಲಸವಾಗುವುದನ್ನು ನಿರೀಕ್ಷಿಸುವ ಬದಲು ಖುದ್ದು ಸ್ವಚ್ಛತೆಗೆ ಗ್ರಾಮಸ್ಥರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೂಡಲಸಂಗಮ ರಕ್ಷಿಸಿ ಅಭಿಯಾನ ಶುರುವಾಗಿದೆ.
ಕೂಡಲಸಂಗಮ ಅಭಿವೃದ್ದಿ ಪ್ರಾಧಿಕಾರದ ನಿದ್ದೆಯಲ್ಲಿದೆ, ಪ್ರಾಧಿಕಾರದ ನಿರ್ಲಕ್ಷ್ಯದಿಂದ ಕೂಡಲಸಂಗಮ ವಾತಾವರಣ ಹದಗೆಡುತ್ತಿದೆ ಎಂದು ಆರೋಪಿಸಿರುವ ಗ್ರಾಮಸ್ಥರು ಇಂದಿನಿಂದ ಪ್ರತಿ ಭಾನುವಾರ ಬೆಳಗ್ಗೆ ಸ್ವಚ್ಛತಾ ಅಭಿಯಾನಕ್ಕೆ ನಾಂದಿ ಹಾಡಿದ್ದಾರೆ.
ಇದರ ಮೊದಲ ದಿನವಾದ ಇಂದು, ಅಣ್ಣ ಬಸವಣ್ಣನ ಐಕ್ಯ ಮಂಟಪ, ಸಂಗಮೇಶ್ವರ ದೇವಸ್ಥಾನ ಆವರಣ, ಉದ್ಯಾನವನ ಸ್ವಚ್ಚಗೊಳಿಸಲಾಗಿದೆ. ಇದರ ಜತೆಗೆ, ಪೊರಕೆ ಹಿಡಿದು ಸ್ವಚ್ಛತಾ ಕಾರ್ಯಕ್ಕೆ ಇಳಿದಿದ್ದಾರೆ ಗ್ರಾಮದ ಯುವಜನರು.
ಇದನ್ನೂ ಓದಿ:ಮೂಡುಬಿದಿರೆಯಲ್ಲಿ ಅಕ್ರಮ ಗೋ ಸಾಗಾಟ: ಪೊಲೀಸರಿಂದ ಗಾಳಿಯಲ್ಲಿ ಗುಂಡು
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸರಿಯಾಗಿ ಕುಡಿವ ನೀರು, ಶೌಚಾಲಯ ವ್ಯವಸ್ಥೆಯನ್ನು ಪ್ರಾಧಿಕಾರ ಮಾಡುತ್ತಿಲ್ಲ. ಪ್ರಾಧಿಕಾರದಲ್ಲಿ 6 ಅಧಿಕಾರಿ, ಸಿಬ್ಬಂದಿ ಹಾಗೂ 90 ಕಾರ್ಮಿಕರು ಇದ್ದರೂ ಏನೂ ಪ್ರಯೋಜನ ಆಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಇನ್ನು ಇವರಿಗೆ ಹೇಳೋದು ಬೇಡ, ನಾವೇ ನಮ್ಮ ಸುಕ್ಷೇತ್ರ ಉಳಿಸೋಣ ಎಂಬ ತೀರ್ಮಾನಕ್ಕೆ ತಾವು ಬಂದಿರುವ ಹಿನ್ನೆಲೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಮುಂದಾಗಿದ್ದೇವೆ. ಪ್ರಾಧಿಕಾರದಿಂದ ಪ್ರತಿತಿಂಗಳು 18 ರಿಂದ 20 ಲಕ್ಷ ರೂ. ವೇತನ, ಕೂಲಿ ಪಾವತಿಯಾಗುತ್ತಿದ್ದರೂ ಸೌಕರ್ಯಗಳು ಮಾತ್ರ ಏನೂ ಇಲ್ಲ ಎಂದು ಆರೋಪಿಸಲಾಗಿದೆ.ಈ ಮಧ್ಯೆ, ಸ್ವಚ್ಛತಾ ಕಾರ್ಯಕ್ಕೆ ಮುಂದಾದ ಗ್ರಾಮಸ್ಥರನ್ನು ಕೋವಿಡ್​ ಹಿನ್ನೆಲೆಯಲ್ಲಿ ಪ್ರಾಧಿಕಾರದ ಸಿಬ್ಬಂದಿ ತಡೆಯಲು ಯತ್ನ ಮಾಡಿದರು.
ಇದಕ್ಕೆ ಜಗ್ಗದ ಗ್ರಾಮಸ್ಥರು, ನಮ್ಮದು ಅಭಿಯಾನ. 30 ಜನರು ಮಾತ್ರ ಇದ್ದೇವೆ, ಸಾಮಾಜಿಕ ಅಂತರ ಕಾಯ್ದುಕೊಂಡು ಸ್ವಚ್ಛತಾ ಕಾರ್ಯ ಮಾಡುತ್ತೇವೆ, ಈ ಕುರಿತು ಅಭಿಯಾನದ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ ಎಂದು ಶುಚಿಕಾರ್ಯದಲ್ಲಿ ತೊಡಗಿದರು.
ಹುಟ್ಟುಹಬ್ಬಕ್ಕೆ ಹೋದವಳ ಮೇಲೆ ಗ್ಯಾಂಗ್​ರೇಪ್​! ಮನೆಗೆ ಸೇರಿಸದ ಕುಟುಂಬಸ್ಥರು!

ಮಹೀಂದ್ರಾ ತದ್ರೂಪಿ ಪುಟಾಣಿ ವಾಹನ​ ಉಚಿತವಾಗಿ ಪಡೆಯಲು ಇಲ್ಲಿದೆ ಆಫರ್​, ಕೆಲವೇ ಗಂಟೆ ಬಾಕಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three + thirteen =
Remember me
