ಚನ್ನಪಟ್ಟಣ: ಗ್ರಾಮೀಣಾಭಿವೃದ್ಧಿಗೆ ರಾಜ್ಯ ಸರ್ಕಾರ 50 ಕೋಟಿ ರೂಪಾಯಿ ವಿಶೇಷ ಅನುದಾನ ಬಿಡುಗಡೆ ಮಾಡಿರುವುದು ಇಬ್ಬರು ನಾಯಕರ ನಡುವೆ ಭಾರಿ ಜಟಾಪಟಿ ಉಂಟಾಗಿರುವ ಘಟನೆ ಚನ್ನಪಟ್ಟಣದ ಭೈರಾಪಟ್ಟಣ ಗ್ರಾಮದಲ್ಲಿ ನಡೆದಿದೆ. ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್​ ಅವರ ನಡುವೆ ನಡೆಯುತ್ತಿರುವ ಜಟಾಪಟಿಯಿಂದ ಭೈರಾಪಟ್ಟಣ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿದೆ.
ಆಗಿದ್ದೇನೆಂದರೆ, ರಾಮನಗರಕ್ಕೆ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಈ ಇಬ್ಬರು ನಾಯಕರು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಬಿಡುಗಡೆ ಮಾಡಿತ್ತು. ಆದರೆ ಇಂದು ಚನ್ನಪಟ್ಟಣ ತಾಲೂಕಿನಲ್ಲಿ ಕುಮಾರಸ್ವಾಮಿಯವರನ್ನ ಆಹ್ವಾನಿಸದೆ ವಿವಿಧ ಕಾಮಗಾರಿಗಳಿಗೆ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.
ಆಹ್ವಾನಪತ್ರಿಕೆಯಲ್ಲಿ ಹೆಸರೂ ಹಾಕದೆ ರಸ್ತೆ ಅಭಿವೃದ್ಧಿ ಕಾಮಗಾರಿ ಭೂಮಿ ಪೂಜೆ ನೆರೆವೇರಿಸಿದ್ದರಿಂದ ಜೆಡಿಎಸ್​ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಆಹ್ವಾನ ಪತ್ರಿಕೆಯಲ್ಲಿ ‘ಸಿ.ಪಿ ಯೋಗೇಶ್ವರ್ ಕೋರಿಕೆ ಮೇರೆಗೆ’ ಬಿಡುಗಡೆಯಾಗಿರುವ ವಿಶೇಷ ಅನುದಾನ ಎಂದು ಮುದ್ರಣವಾಗಿರುವುದು ಜೆಡಿಎಸ್​ ಕಡೆಯವರನ್ನು ಅಸಮಾಧಾನಕ್ಕೆ ತಳ್ಳಿದೆ. ಇದೇ ಕಾರಣದಿಂದ ಜೆಡಿಎಸ್ ಕಾರ್ಯಕರ್ತರು ಸಿಪಿ ಯೋಗೇಶ್ವರ ವಿರುದ್ಧ ಕೂಗಿ ಪ್ರತಿಭಟನೆ ನಡೆಸಿದರು. ಇಷ್ಟಾಗುತ್ತಿದ್ದಂತೆಯೇ ಮತ್ತೊಂದು ಕಡೆ ಕುಮಾರಸ್ವಾಮಿಯವರು ಕಾಮಗಾರಿಗಳಿಗೆ ಚಾಲನೆ ನೀಡಿದರು!
ಈ ನಡುವೆ, ರೊಚ್ಚಿಗೆದ್ದ ಜೆಡಿಎಸ್​ ಕಾರ್ಯಕರ್ತರು, ಯೋಗೇಶ್ವರ್ ಅವರ ಕಾರಿನ ಮೇಲೆ ಕಲ್ಲು ತೂರಾಟ ಮಾಡಿದರು, ಮೊಟ್ಟೆ ಎಸೆದು ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಘಟನೆಗೆ ಸಂಬಂಧಿಸಿ ಪ್ರತಿಭಟನಾಕಾರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿ ಜೆಡಿಎಸ್‌ಗೆ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಕೊನೆಗೂ ಪೋಲಿಸ್ ಭದ್ರತೆಯಲ್ಲಿ ಯೋಗೇಶ್ವರ್ ಗುದ್ದಲಿ ಪೂಜೆಯನ್ನು ನೆರವೇರಿಸಿದರು.
ಚನ್ನಪಟ್ಟಣದಲ್ಲಿ ಸಿ.ಪಿ.ಯೋಗೇಶ್ವರ್ ವಾಗ್ದಾಳಿ:ಘಟನೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಸಿ.ಪಿ.ಯೋಗೇಶ್ವರ್ ವಾಗ್ದಾಳಿ ನಡೆಸಿದ್ದಾರೆ. ‘ದುಡ್ಡು ಹೊಡೆಯುವುದರಲ್ಲಿ ಕುಮಾರಸ್ವಾಮಿ ನಿಸ್ಸೀಮರು. ನಾನು ಕಳೆದ 4 ವರ್ಷದಿಂದ ಈ ತಾಲೂಕಿನ ಯಾವುದೇ ವಿಚಾರದಲ್ಲಿ ಭಾಗಿಯಾಗಿಲ್ಲ. ಕುಮಾರಸ್ವಾಮಿ ಅಭಿವೃದ್ಧಿ ವಿಚಾರದಲ್ಲಿ ವಿಫಲರಾಗಿದ್ದಾರೆ. ನಾನು ಹಳ್ಳಿಗಳಲ್ಲಿ ಪ್ರವಾಸ ಮಾಡಿದೆ. ಆಗ ಜನರು ನನಗೆ ಸಾಕಷ್ಟು ದೂರು ಹೇಳಿದ್ದರು.
ಆಗ ನಾನು ಸಿಎಂ ಗೆ ಮನವಿ ಮಾಡಿದ್ದೆ 50 ಕೋಟಿ ಅನುದಾನಕ್ಕಾಗಿ. ಇದೇ ಕಾರಣಕ್ಕೆ ಸಿಎಂ ಅನುದಾನ ನೀಡಿದ್ದಾರೆ. ಅಶ್ವಥ್ ನಾರಾಯಣ ಅವರು ಇವತ್ತು ಸಮಯ ನೀಡಿದ್ದರು, ಆದರೆ ಬರಲಿಲ್ಲ, ಹಾಗಾಗಿ ನಾನೇ ಚಾಲನೆ ನೀಡಿದ್ದೇನೆ. ನಾವು ಪ್ರೋಟೋಕಾಲ್ ತಪ್ಪಲಿಲ್ಲ. ನೆರೆ ಬಂದಾಗ ಸಿಎಂ ಜತೆ ಕುಮಾರಸ್ವಾಮಿ ಬಂದಿದ್ದರು, ನಾನು ಇದ್ದೆ. ಇವತ್ತು ಬರಬಹುದಿತ್ತು, ಆದರೆ ಬರಲಿಲ್ಲವೇಕೆ’ ಎಂದು ಪ್ರಶ್ನಿಸಿದರು.
ಈ ಗಲಾಟೆಗೆ ಕಾರಣವನ್ನೂ ಬಿಚ್ಚಿಟ್ಟ ಯೋಗೇಶ್ವರ್​, ‘ಈಗ ಇಡೀ ತಾಲೂಕಿನ ಜೆಡಿಎಸ್​ನವರು ಪಕ್ಷ ಬಿಡುತ್ತಿದ್ದಾರೆ. ಬೇರೆ ಪಕ್ಷದ ಕಡೆ ಹೋಗ್ತಿದ್ದಾರೆ. ಅದಕ್ಕೇ ಈ ಆಕ್ರೋಶ ಅಷ್ಟೇ ಎಂದು ತಿರುಗೇಟು ನೀಡಿದರು. ಕುಮಾರಸ್ವಾಮಿ ಅವರ ಲೈಫ್​ನಲ್ಲೇ ಆಹ್ವಾನ ಪತ್ರಿಕೆ ಮಾಡಿಸಿಲ್ಲ, ಎಸ್ಪಿ,‌ ಡಿಸಿಗೆ ಬ್ಲ್ಯಾಕ್ ಮೇಲ್ ಮಾಡ್ತಾರೆ, ಅವರೊಬ್ಬ ಬ್ಲ್ಯಾಕ್​ಮೇಲರ್​. ಇಂದು ಗೂಂಡಾಗಳನ್ನು ಕರೆಸಿರುವುದು ಅವರ ಹತಾಶ ಮನೋಭಾವ ತೋರಿಸುತ್ತದೆ’ ಎಂದು ವಾಗ್ದಾಳಿ ನಡೆಸಿದರು.(ದಿಗ್ವಿಜಯ ನ್ಯೂಸ್​)
ವರ್ಕೌಟ್​ಗೆ ಇನ್ನೊಂದು ಬಲಿ: ಚಿತ್ರರಂಗಕ್ಕೆ ಶಾಕ್​- ಜ್ಯೂನಿಯರ್​ ಸಲ್ಮಾನ್​ ಖಾನ್​ ಖ್ಯಾತಿಯ ನಟ ಇನ್ನಿಲ್ಲ
ಅವರಿಗೆ ಜೀವಾವಧಿ ಶಿಕ್ಷೆ ಆಗುವವರೆಗೂ ನನ್ನ ಅಂತಿಮ ವಿಧಿವಿಧಾನ ಮಾಡ್ಬೇಡಿ: ಗ್ರಾಪಂ ಸದಸ್ಯನ ಪತ್ನಿ ಸಾವಿಗೆ ಪೊಲೀಸರು ಕಾರಣವೆ?
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:2 × five =
Remember me
