ತುಮಕೂರು:ಹಾವೊಂದನ್ನು ಮುಟ್ಟುವ ಮೂಲಕ ತಮ್ಮ ಹಲ ವರ್ಷಗಳ ಬಯಕೆಯನ್ನು ಕೊನೆಗೂ ತೀರಿಸಿಕೊಂಡಿದ್ದಾರೆ ತುಮಕೂರು ಜಿಲ್ಲೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್.
ಕುಣಿಗಲ್ ಪಟ್ಟಣದ ಸರ್ಕಾರಿ ಕಾಲೇಜಿನಲ್ಲಿ ಕಾಣಿಸಿಕೊಂಡ ಕೆರೆ ಹಾವನ್ನು ಮುಟ್ಟಿ ಶಾಸಕರು ಸಂಭ್ರಮಿಸಿದ ಘಟನೆ ನಡೆಯಿತು.
ಇಲ್ಲಿಗೆ ಬಂದಿದ್ದ ಹಾವನ್ನು ಉರುಗ ರಕ್ಷಕ ಸ್ನೇಕ್ ಮಹಂತೇಶ್ ಹಿಡಿದಿದ್ದರು. ಇದೇ ಸಮಯದಲ್ಲಿ ಸ್ಥಳದಲ್ಲಿ ಶಾಸಕ ಡಾ.ರಂಗನಾಥ್ ಹಾಜರು ಇದ್ದರು. ಹಾವು ಹಿಡಿಯುವುದನ್ನು ಕಣ್ಣಾರೆ ನೋಡಿದ ತಕ್ಷಣ ಅದನ್ನು ಮುಟ್ಟುವ ಬಯಕೆ ವ್ಯಕ್ತಪಡಿಸಿದರು.
ಮಹಂತೇಶ್‌ ಅವರು ಹಾವನ್ನು ಅವರ ಬಳಿ ಹಿಡಿದಾಗ ಡಾ.ರಂಗನಾಥ್‌ ಅವರು ಅಂಜಿಕೆಯಿಂದಲೇ ಹಾವು ಹಿಡಿದು ನಂತರ ಸಂತಸ ವ್ಯಕ್ತಪಡಿಸಿದರು.(ದಿಗ್ವಿಜಯ ನ್ಯೂಸ್‌)
ವಿಡಿಯೋ ಇಲ್ಲಿದೆ ನೋಡಿ:
ಹಾವನ್ನು ಮುಟ್ಟುವ ಮೂಲಕ ತಮ್ಮ ಬಯಕೆಯನ್ನು ಕೊನೆಗೂ ತೀರಿಸಿಕೊಂಡಿದ್ದಾರೆ ತುಮಕೂರು ಜಿಲ್ಲೆ ಕುಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್pic.twitter.com/oJTqNV22fH
— Vijayavani (@VVani4U)January 30, 2022

ಚಳಿಯ ನಡುವೆಯೇ ಮತ್ತೆ ಕೆಲ ದಿನ ಮಳೆಯ ಕಣ್ಣುಮುಚ್ಚಾಲೆ: ಆರೋಗ್ಯದಲ್ಲಿ ಏರುಪೇರು- ತಜ್ಞರ ಎಚ್ಚರಿಕೆ

ತುಮಕೂರಿನ ಅಪ್ರಾಪ್ತೆಗಾಗಿ ನಡೆದೇ ಹೋಯ್ತು ಭೀಕರ ಕೊಲೆ! ಒಬ್ಬಳನ್ನೇ ಸ್ನೇಹಿತರಿಬ್ಬರು ಪ್ರೀತಿಸಿ ದುರಂತ ಅಂತ್ಯ…

Sign in to your account
Please enter an answer in digits:13 + nineteen =
Remember me
