ಕೊಪ್ಪಳ:ಕೊಪ್ಪಳ ನಗರಾಭಿವೃದ್ಧಿ ಕೋಶ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಗುರುಬಸವರಾಜ್‌ ಎರಡು ತಿಂಗಳ ಹಿಂದೆ ಕುಷ್ಟಗಿ ತಹಶೀಲ್ದಾರರಾಗಿದ್ದ ವೇಳೆ ಕಚೇರಿಯಲ್ಲಿ ನಡೆಸಿದ್ದ ರಾಸಲೀಲೆ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ತಮ್ಮ ಕಚೇರಿಯ ಮಹಿಳಾ ಸಿಬ್ಬಂದಿಗೆ ಕಚೇರಿಯ ಒಳಗೇ ಮುತ್ತುಕೊಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದೀಗ ವೈರಲ್‌ ಆಗಿದೆ.
ಘಟನೆ ನಡೆದು ಎರಡು ತಿಂಗಳ ನಂತರ ಈ ವಿಷಯ ಬೆಳಕಿಗೆ ಬಂದಿದೆ. ಗುರುಬಸವರಾಜ್ ಕುಷ್ಟಗಿ ತಹಶೀಲ್ದಾರ್ ಆಗಿದ್ದ ಅವಧಿಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿಂದ ವರ್ಗಾವಣೆಯಾಗಿ ಈಗ ಅವರು ಕೊಪ್ಪಳ ನಗರಾಭಿವೃದ್ಧಿ ಕೋಶದಲ್ಲಿ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ:ಪ್ರಿಯತಮನ ಕಣ್ಣುತಪ್ಪಿಸಿ ಚಾಟಿಂಗ್‌: ಪಾಸ್‌ವರ್ಡ್‌ಗಾಗಿ ಕೊಲೆಯಾದಳು ಮಹಿಳೆ!
ಇವರ ವಿರುದ್ಧ ಇದೀಗ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಉನ್ನತ ಸ್ಥಾನದಲ್ಲಿರುವ ಅಧಿಕಾರಿಯೇ ತಮ್ಮ ಕಚೇರಿಯಲ್ಲಿ ಈ ರೀತಿ ಮಾಡಿ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿರುವ ಸಾರ್ವಜನಿಕರು, ಇವರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸೆಪ್ಟೆಂಬರ್‌ನಲ್ಲಿ ಶಾಲೆ ಶುರುವಾಗತ್ತಾ? ಸಚಿವ ಸುರೇಶ್‌ಕುಮಾರ್‌ ಏನು ಹೇಳಿದ್ದಾರೆ ಕೇಳಿ…

ಮಚ್ಚು ಹಿಡಿದು ಚಿನ್ನದಂಗಡಿಗೆ ನುಗ್ಗಿದವನ ಚಚ್ಚಿದಳು ಚಿಕ್ಕಮಗಳೂರು ಮಹಿಳೆ!

ನಾಯಿಗಳು ಕಚ್ಚಿ ತಿಂದ ಕರೊನಾ ಸೋಂಕಿತನ ಶವ!

ಪಾಕ್‌ಗೆ ಬಿಗ್‌ ಷಾಕ್‌: ಸಾಲವೂ ಬಂದ್‌, ತೈಲವೂ ಬಂದ್‌ ಎಂದ ಸೌದಿ ಅರೇಬಿಯಾ!

ಫ್ರಿಜ್‌ ಟ್ರೇ ಬಳಸಿ ಆನ್‌ಲೈನ್‌ ಕ್ಲಾಸ್‌: ಶಿಕ್ಷಕಿಯ ಪ್ಲ್ಯಾನ್‌ಗೆ ಅಪಾರ ಮೆಚ್ಚುಗೆ

ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

35 ವರ್ಷಗಳ ಹಿಂದೆ ಬರೆದ ಲವ್‌ಲೆಟರ್‌ ನದಿಯಲ್ಲಿ ತೇಲುತ್ತ ಪ್ರೇಮಿಯ ಕೈಸೇರಿತು!

Sign in to your account
Please enter an answer in digits:2 × one =
Remember me
