ಮೈಸೂರು:ಕನ್ನಡವನ್ನು ಕಗ್ಗೊಲೆ ಮಾಡಿ ಜನರನ್ನು ಮತಾಂತರ ಮಾಡಿದ ಮತಾಂಧ ಟಿಪ್ಪುವನ್ನು ಮತಕ್ಕಾಗಿ ಯಾಕೆ ಇಷ್ಟು ಓಲೈಕೆ ಮಾಡಲಾಗುತ್ತಿದೆ ಎಂದು ಖ್ಯಾತ ಸಾಹಿತಿ ಡಾ.ಎಸ್.ಎಲ್.ಭೈರಪ್ಪ ಕಿಡಿಕಾರಿದರು. ರಂಗಾಯಣ, ಬೆಂಗಳೂರಿನ ಅಯೋಧ್ಯಾ ಪ್ರಕಾಶನ ವತಿಯಿಂದ ಭೂಮಿಗೀತದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಂಗಾಯಣದ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿಸಿರುವ ‘ಟಿಪ್ಪು ನಿಜ ಕನಸುಗಳು’ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಮೈಸೂರು ಅರಸರು ಕನ್ನಡ ನಾಡು, ನುಡಿಗಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅಂತಹವರನ್ನು ಕೆಳಗಿಳಿಸಿ ಅಧಿಕಾರ ಕೈಗೆ ತೆಗೆದುಕೊಂಡ ಹೈದರ್ ಅಲಿ, ಟಿಪ್ಪು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಅಳಿಸಿ ಹಾಕುವ ಯತ್ನ ನಡೆಸಿದ್ದರು. ಅಲ್ಲದೆ, ಕೊಡಗು, ಕೇರಳ ಸೇರಿ ರಾಜ್ಯ ವಿಸ್ತರಿಸಿದ ಕಡೆಗಳಲ್ಲಿ ಮತಾಂತರ ಮಾಡಿ, ದೇವಸ್ಥಾನ ಕೆಡವಿ ಮಸೀದಿ ನಿರ್ವಿುಸಿದ್ದ. ಆಡಳಿತ ಭಾಷೆಯಾಗಿದ್ದ ಕನ್ನಡ ಜಾಗದಲ್ಲಿ ಪರ್ಷಿಯನ್ ಭಾಷೆ ಜಾರಿಗೆ ತಂದ. ಕಂದಾಯ ಇಲಾಖೆಗೆ ಸಂಬಂಧಪಟ್ಟ ಪದಗಳನ್ನು ಖಾತೆ, ರ್ಕಿದಿ, ತರಿ, ಖುಷ್ಕಿ, ತಹಸೀಲ್ದಾರ್, ಶಿರಸ್ತೇದಾರ್ ಎಂದು ಬದಲಿಸಿದ. ಮೈಸೂರನ್ನು ನಜರ್​ಬಾದ್, ಬ್ರಹ್ಮಪುರಿಯನ್ನು ಸುಲ್ತಾನ್ ಪೇಟ್, ಕಾಳಿಕೋಟೆ(ಕಲ್ಲಿಕೋಟೆ)- ಫೂರಕಬಾದ್, ದೇವನಹಳ್ಳಿ- ಯೂಸುಫಾಖಾನ್, ಸಂಕ್ರೀದುರ್ಗವನ್ನು ಮುಜರಾಬಾದ್, ಸಕಲೇಶಪುರ- ಮಂಜರಾಬಾದ್ ಎಂದು ಬದಲಿಸುವ ಮೂಲಕ ನಮ್ಮ ನಾಡಿನ ಇತಿಹಾಸವನ್ನೇ ಅಳಿಸಿ ಹಾಕಲು ಯತ್ನಿಸಿದ ಎಂದು ಟೀಕಿಸಿದರು.
ಟಿಪ್ಪುವಿನ ನಿಜ ಬಣ್ಣ ಬಯಲು ಮಾಡಿದ ಅಂದಿನ ಶಿಕ್ಷಣ ಸಚಿವರಾಗಿದ್ದ ಡಿ.ಎಚ್.ಶಂಕರಮೂರ್ತಿ ಕಾರ್ಯಕ್ರಮವೊಂದರಲ್ಲಿ ಟಿಪ್ಪು ಕನ್ನಡ ವಿರೋಧಿ ಅಗಿದ್ದ ಎಂದು ನೀಡಿದ ಹೇಳಿಕೆ ವಿರುದ್ಧ ಎಡಪಂಥಿಯರು ದೊಡ್ಡ ಹೋರಾಟ, ಟೀಕೆ ಮಾಡಿದ್ದರು. ಈಗ ರೈಲಿಗೆ ಟಿಪ್ಪು ಹೆಸರು ಬದಲಿಸಿ ಒಡೆಯರ್ ಹೆಸರು ಇಟ್ಟಿರುವುದಕ್ಕೆ ಟೀಕೆಗಳು ಬರುತ್ತಿವೆ. ಬೆಂಗಳೂರು ಕಟ್ಟಿದ ಕೆಂಪೇಗೌಡರ ಪ್ರತಿಮೆ ನಿರ್ವಿುಸಿದಂತೆ ಟಿಪ್ಪು ಪ್ರತಿಮೆ ನಿರ್ವಿುಸುವುದಾಗಿ ಕೆಲವರು ಹೇಳುತ್ತಿದ್ದಾರೆ. ಕೆಂಪೇಗೌಡರಂತೆ ನಾಡಿಗೆ ಟಿಪ್ಪು ಕೊಡುಗೆ ಏನು ಎಂದು ಪ್ರಶ್ನಿಸಿದರು.
ಸಂವಿಧಾನ ಬರೆಯುವಾಗ ಅಂಬೇಡ್ಕರ್ ಅವರು ಮುಸ್ಲಿಮರನ್ನು ಪಾಕಿಸ್ತಾನಕ್ಕೆ ಬಿಟ್ಟುಬಿಡಿ ಎಂದಿದ್ದರು. ಆದರೆ ಗಾಂಧಿ ನೇತೃತ್ವದ ಸಭೆಯಲ್ಲಿ ನಮ್ಮ ನಂಬಿಕೆಗೆ ಬದ್ಧರಾಗಿರುತ್ತೇವೆ ಎಂದಾದರೆ ಇರಿ ಎಂದಿದ್ದರು. ಆದರೆ ಈಗ ಆ ಮಾತನ್ನು ಅನುಸರಿಸುತ್ತಿದ್ದಾರೆಯೇ? ಟಿಪ್ಪು ಹೆಸರನ್ನು ರೈಲಿಗೆ ಇಡುವ ಜನ, ಕಲಾಂ ಹೆಸರನ್ನಿಡಲು ಸಿದ್ಧರಿಲ್ಲ. ಟಿಪ್ಪುವನ್ನು ಹೀರೋ ಮಾಡಿಕೊಂಡು ಬರುತ್ತಿದ್ದಾರೆ. ಇದು ನಿಲ್ಲಬೇಕು ಎಂದು ಅಭಿಪ್ರಾಯಪಟ್ಟರು.
ಶಿವಮೊಗ್ಗದಲ್ಲಿ ಮತ್ತೆ ಕೋಮುಸಂಘರ್ಷ; 2 ಗುಂಪುಗಳ ಮಧ್ಯೆ ಗಲಾಟೆ, ಕಲ್ಲು ತೂರಾಟ, ಚಾಕು ಇರಿತ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
