ಬೆಂಗಳೂರು:ಕರೊನಾ ಸೋಂಕಿತೆಯೊಬ್ಬಳು ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್​ ಹತ್ತಿ ದೆಹಲಿ ತಲುಪಿರುವ ವಿಚಿತ್ರ ಘಟನೆ ನಡೆದಿದೆ. ಆದರೆ ಈ ಘಟನೆಯ ಹಿಂದಿನ ಸತ್ಯ ಮಾತ್ರ ಬಹಿರಂಗವಾಗಬೇಕಿದೆ!
ಬೆಂಗಳೂರಿನ ಬೊಮ್ಮನಹಳ್ಳಿಯ 28 ವರ್ಷದ ಯುವತಿ ದೆಹಲಿಯಲ್ಲಿ ಪತ್ತೆಯಾಗಿರುವ ಘಟನೆ ಇದಾಗಿದೆ. ಆಸ್ಪತ್ರೆಗೆ ಹೋಗಿದ್ದ ಯುವತಿ, ಆಸ್ಪತ್ರೆಯನ್ನೂ ಸೇರಿದೆ, ಮನೆಗೂ ಬಾರದೇ ಕಂಗಾಲಾಗಿರುವ ಪಾಲಕರು ಪೊಲೀಸರಿಗೆ ದೂರು ನೀಡಿದಾಗ ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಈ ಯುವತಿಗೆ ಇದೇ 3ರಂದು ಕರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಆಕೆಯ ಮನೆಯ ಸಮೀಪ ಇರುವ ಆಸ್ಪತ್ರೆಯ ಅಂಬ್ಯುಲೆನ್ಸ್​ ಒಂದು ಮನೆಯ ಬಾಗಿಲಿಗೆ ಬಂದು ನಿಂತಿತು. ಕರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಯುವತಿಯನ್ನು ದಾಖಲು ಮಾಡಬೇಕು ಎಂದು ಅದರ ಚಾಲಕ ಹೇಳಿದ್ದಾನೆ. ಅಂಬ್ಯುಲೆನ್ಸ್​ ಮೇಲೆ ಕೋವಿಡ್ ಕರ್ತವ್ಯದಲ್ಲಿರುವ ಅಂಬ್ಯುಲೆನ್ಸ್‌ ಎಂದು ಸ್ಟಿಕ್ಕರ್ ಹಾಕಲಾಗಿತ್ತು. ಪಿಪಿಇ ಕಿಟ್​ ಧರಿಸಿ ಬಂದಿರುವ ಇಬ್ಬರು ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ.
ಯುವತಿಯನ್ನು ಮನೆಯವರು ಕಳುಹಿಸಿಕೊಟ್ಟಿದ್ದಾರೆ. ನಂತರ ಆಸ್ಪತ್ರೆಗೆ ಹೋಗಿ ನೋಡಿದಾಗ ಮಗಳಿಗೆ ಪಾಲಕರು ಕಾಣಿಸಲೇ ಇಲ್ಲ. ಆಸ್ಪತ್ರೆಯಲ್ಲಿ ವಿಚಾರಿಸಿದಾಗ ಅಂಥ ಹೆಸರಿನ ಯಾರೂ ದಾಖಲಾಗಿಲ್ಲ ಎಂದು ಹೇಳಲಾಯಿತು.
ಇದನ್ನೂ ಓದಿ:ದೀದೀ ‘ದುರ್ಗಾವತಾರ’: 100 ಬಸ್ಕಿ ಹೊಡೆಯಲು ಸಿದ್ಧ ಎಂದದ್ದೇಕೆ ಮಮತಾ?
ಮನೆಯವರು ಬಿಬಿಎಂಪಿ ಅಧಿಕಾರಿಗಳ ಬಳಿ ವಿಚಾರಿಸಿದಾಗಲೂ ನಾವು ಯಾವುದೇ ಅಂಬ್ಯುಲೆನ್ಸ್​ ಕಳುಹಿಸಲಿಲ್ಲ. ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದಿದ್ದಾರೆ! ಕರೊನಾ ವೈರಸ್​ ಖಚಿತವಾದ ರೋಗಿಗೆ ನಾವು ಮೊದಲು ಮೊಬೈಲ್​ಗೆ ಎಸ್‌ಎಂಎಸ್ ಕಳಿಸುತ್ತೇವೆ. ಅವರನ್ನು ಕರೆದುಕೊಂಡು ಹೋಗಲು ಬರುವ ಆಂಬ್ಯುಲೆನ್ಸ್ ವಿವರಗಳನ್ನು ಒಂದು ಗಂಟೆ ಮುಂಚಿತವಾಗಿಯೇ ಎಸ್​ಎಂಎಸ್​ ಮಾಡುತ್ತೇವೆ. ಅದರಲ್ಲಿ ಆಂಬ್ಯುಲೆನ್ಸ್ ಚಾಲಕನ ಹೆಸರು, ನಂಬರ್ ಕಳಿಸಲಾಗುತ್ತದೆ. ಇದು ನಿಮಗೆ ಬಂದಿತ್ತೆ ಎಂದಾಗ ಪಾಲಕರು ಕಕ್ಕಾಬಿಕ್ಕಿಯಾಗಿದ್ದಾರೆ. ಏಕೆಂದರೆ ಅಂಥ ಯಾವುದೇ ಮೆಸೇಜ್​ ಅವರಿಗೆ ಬಂದಿರಲಿಲ್ಲ.
ನಂತರ ಆತಂಕದಿಂದ ಪೊಲೀಸರಿಗೆ ಯುವತಿಯ ಅಪ್ಪ ದೂರು ದಾಖಲು ಮಾಡಿದರು. ಪೊಲೀಸರು ವಿಚಾರಣೆ ನಡೆಸಿದಾಗ, ತಮಗೆ ಯಾವುದೇ ಎಸ್​ಎಂಎಸ್​ ಬಂದಿರಲಿಲ್ಲ. ಆದರೆ ಹೀಗೀಗೆ ಆಗಿದೆ ಎಂದು ಪಾಲಕರು ಪೊಲೀಸರಿಗೆ ಹೇಳಿದ್ದರು. ಜತೆಗೆ, ಯುವತಿ ಆಸ್ಪತ್ರೆಗೆ ಹೋಗುತ್ತಿರುವುದರಿಂದ ಕೆಲವು ಜತೆ ಬಟ್ಟೆ, 400 ರೂಪಾಯಿ ಒಯ್ದಿರುವುದಾಗಿ ಹೇಳಿದರು.
ಪೊಲೀಸರು ತೀವ್ರವಾಗಿ ತನಿಖೆ ಕೈಗೊಂಡಾಗ ಯುವತಿ ದೆಹಲಿಯಲ್ಲಿ ಪತ್ತೆಯಾಗಿದ್ದಾಳೆ. ಆಕೆಯನ್ನು ವಿಚಾರಿಸಲಾಗುತ್ತಿದೆ. ಆದರೆ ತನ್ನನ್ನು ಯಾರೂ ಬಲವಂತದಿಂದ ತನ್ನನ್ನು ಕರೆದುಕೊಮಡು ಬಂದಿಲ್ಲ, ಸ್ವ ಇಚ್ಛೆಯಿಂದ ಬಂದಿರುವುದಾಗಿ ಯುವತಿ ಹೇಳಿಕೆ ನೀಡಿರುವುದಾಗಿ ತಿಳಿದುಬಂದಿದೆ ಎಂದಿದ್ದಾರೆ ಬೆಂಗಳೂರಿನ ಪೊಲೀಸರು.ಇದರ ಅಸಲಿಯತ್ತು ಇನ್ನಷ್ಟೇ ಹೊರಬರಬೇಕಿದೆ.
ಸೋಂಕಿತೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಅತ್ಯಾಚಾರ ಮಾಡಿದ ಆಂಬ್ಯುಲೆನ್ಸ್ ಚಾಲಕ!

11ರ ಪೋರನಿಂದ 9 ವರ್ಷದ ಬಾಲಕಿಯ ಕೊಲೆ: ಕಾರಣ ಕೇಳಿದರೆ ಅಚ್ಚರಿ ಪಡ್ತೀರಾ!

ಕೇರಳದ ಸ್ಮಗ್ಲಿಂಗ್​ ರಾಣಿಗೂ, ಕರ್ನಾಟಕದ ಡ್ರಗ್ಸ್​ ದಂಧೆಗೂ ಲಿಂಕ್​: ತನಿಖೆಯಿಂದ ಬಯಲು!

2024ರಲ್ಲಿಯೂ ಹಿಂದುತ್ವವೇ ಗೆಲ್ಲಲಿದೆ ಎಂದ ಸುಬ್ರಮಣಿಯನ್​ ಸ್ವಾಮಿ ಕೇಂದ್ರವನ್ನು ಟೀಕಿಸಿದ್ದೇಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − four =
Remember me
