ಮೇಡಂ ನನಗೆ ಮದುವೆ ಆಗಿ ಮೂರು ವರ್ಷದ ಹೆಣ್ಣು ಮಗು ಇದೆ. ನನ್ನ ಹೆಂಡತಿಗೆ ಅವರ ಊರಿನಲ್ಲಿ ಒಬ್ಬ ಅನ್ಯ ಧರ್ಮದ ಯುವಕನ ಜತೆ ಅಕ್ರಮ ಸಂಬಂಧ ಇದೆ. ಆ ವಿಷಯ ನನಗೆ ಗೊತ್ತಾಗಿ ಅವರ ಮನೆಯವರನ್ನು ವಿಚಾರಿಸಿದಾಗ ಏನೋ ಚಿಕ್ಕ ಹುಡುಗಿ ಅಂತ ಹೇಳಿದ್ದಾರೆ.
ಸರಿ ಅಂತ ನಾನು ಸಂಸಾರ ನಿಭಾಯಿಸಿಕೊಂಡು ಹೋಗುತ್ತಿದ್ದೆ. ಆದರೆ ಅವರ ಮನೆಯವರು ಪದೇ ಪದೇ ಬಂದು ಅವಳನ್ನು ಊರಿಗೆ ಕರೆದು ಕೊಂಡು ಹೋಗುತ್ತಿದ್ದರು. ನಾವು ಹೋಗಿ ನ್ಯಾಯ ಮಾಡಿ ಕರೆದುಕೊಂಡು ಬರುತ್ತಿದ್ದೆವು. ಆದರೆ ಮತ್ತೆ ಕರೆದು ಕೊಂಡುಹೋಗಿ ಆರು ತಿಂಗಳಾಗಿದೆ. ಫೋನ್ ಮಾಡಿದರೆ ನೀನು ಬಂದರೆ ನಿನ್ನನ್ನು ಸಾಯಿಸುತ್ತೀನಿ ಅಂತಿದ್ದಾರೆ. ಏನು ಮಾಡುವುದು ಗೊತ್ತಾಗುತ್ತಿಲ್ಲ. ನನಗೆ ಮಗು ಬೇಕು ಏನು ಮಾಡಬೇಕು?
ಉತ್ತರ:ನನ್ನ ಪತ್ನಿ ಯಾವುದೇ ಸಕಾರಣವಿಲ್ಲದೇ ನನ್ನನ್ನು ತೊರೆದು ಹೋಗಿದ್ದಾಳೆ. ಅವಳು ಬಂದು ನನ್ನ ಜೊತೆ ದಾಂಪತ್ಯ ಜೀವನ ನಡೆಸಬೇಕುʼ ಎಂದು ನೀವು ಪ್ರಕರಣ ದಾಖಲಿಸಬಹುದು.
ನಿಮ್ಮ ಮಗುವಿನ ಕಸ್ಟಡಿ ನಿಮಗೇ ಕೊಡಬೇಕೆಂದೂ ಕೇಳಿಕೊಂಡು ಅದಕ್ಕೇ ಬೇರೆ ಪ್ರಕರಣವನ್ನೂ ದಾಖಲಿಸಬಹುದು. ನಿಮ್ಮ ಪತ್ನಿಯಿಂದ ಅಥವಾ ಅವಳ ಕಡೆಯವರಿಂದ ನಿಮಗೆ ಪ್ರಾಣ ಬೆದರಿಕೆ ಇದ್ದರೆ ನೀವು ಪೋಲೀಸರಲ್ಲಿ ಕಂಪ್ಲೇಂಟ್‌ ಕೊಡಬಹುದು.
ಆದರೆ, ಕೇಸು ಹಾಕುವ ಮೊದಲು, ನಿಮ್ಮ ಪತ್ನಿ ಇರುವ ತಾಲ್ಲೂಕಿನ ನ್ಯಾಯಾಲಯದಲ್ಲಿ ಇರುವ ಮಧ್ಯಸ್ಥಿಕೆ ಕೇಂದ್ರಕ್ಕೆ ಒಂದು ಅರ್ಜಿ ಕೊಡಿ. ನಿಮ್ಮಿಬ್ಬರ ಮಧ್ಯೆ ಇರುವ ಸಮಸ್ಯೆಯನ್ನು, ʼವ್ಯಾಜ್ಯ ಪೂರ್ವ ಮಧ್ಯಸ್ಥಿಕೆಯ ಮೂಲಕ ʼ ಬಗೆಹರಿಸಿಕೊಡಿ ಎಂದು ಕೇಳಿಕೊಳ್ಳಿ. ಅವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆ ನಡೆಸುತ್ತಾರೆ. ನಿಮ್ಮ ಸಮಸ್ಯೆ ಪರಿಹಾರ ಆಗದಿದ್ದರೆ, ಆಗ ಕೇಸು ದಾಖಲಿಸಿ.
https://www.vijayavani.net/s-nyayadevate-nanna-sahi-illade/
ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − two =
Remember me
