ನೆಲಮಂಗಲ:ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಹಲವಾರು ಕುತೂಹಲಗಳು ನಡೆದಿವೆ. ಇಂದು ನಡೆಯುತ್ತಿರುವ ಮತ ಎಣಿಕೆ ವೇಳೆ ಕೆಲವು ಸ್ಥಳಗಳಲ್ಲಿ ಅಚ್ಚರಿ ಎನಿಸುವಂಥ ವಿಷಯಗಳು ನಡೆದಿವೆ. ಕೆಲವು ಕಡೆಗಳಲ್ಲಿ ಅತ್ಯಂತ ಹಾಸ್ಯದ ಸನ್ನಿವೇಶಗಳೂ ನಡೆದಿದ್ದರೆ, ಕೆಲವು ವಾರ್ಡ್​ಗಳಲ್ಲಿ ದುರ್ಘಟನೆಗಳೂ ನಡೆದಿವೆ.
ಆದರೆ ತೀರಾ ಅಪರೂಪ ಎನ್ನುವಂಥ ಘಟನೆಗೆ ಸಾಕ್ಷಿಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಅರೆಬೊಮ್ಮನಹಳ್ಳಿಯ ಗೋವಿಂದಪುರ ಕ್ಷೇತ್ರ.
ಮತಗಟ್ಟೆ 153ರಲ್ಲಿ ನಾಲ್ಕು ಮಂದಿ ಅಭ್ಯರ್ಥಿಗಳು ನಿಂತಿದ್ದರು. ಈ ಪೈಕಿ ಜಬಿಉಲ್ಲಾ ಬಾಗ್​ 129 ಮತಗಳನ್ನು ಪಡೆದು ಗೆಲುವು ಸಾಧಿಸಿದರೆ, ಸೈಯದ್​ ಅಬ್ದುಲ್ಲಾ ಎನ್ನುವವರು 95 ಮತ, ಸೈಯದ್​ ಖಜರ್​ ಎನ್ನುವವರು 33 ಮತ ಪಡೆದಿದ್ದಾರೆ.
ಇದರಲ್ಲೇನೂ ಅಚ್ಚರಿ ಇಲ್ಲ. ಆದರೆ ಇನ್ನೋರ್ವ ಅಭ್ಯರ್ಥಿ ಹಬೀದ್​ ಉಲ್ಲಾ ಎನ್ನುವವರು ಜೀರೋ ಮತ ಪಡೆದಿದ್ದಾರೆ! ಇದರ ಅರ್ಥ ತಮ್ಮ ಮತವನ್ನು ತಾವೇ ಹಾಕಿಕೊಳ್ಳಲಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗಿದೆ. ಈ ವಾರ್ಡ್​ನಲ್ಲಿ 259 ಮಂದಿ ಮತದಾನ ಮಾಡಿದ್ದು, ಒಂದು ಮತ ತಿರಸ್ಕೃತಗೊಂಡಿದೆ.
ಆ ತಿರಸ್ಕೃತಗೊಂಡಿರುವ ಮತ ಹಬೀದ್​ ಉಲ್ಲಾ ಅವರದ್ದೇ ಅಥವಾ ತಮ್ಮ ಮತವನ್ನು ಅವರು ತಮಗೇ ಹಾಕಿಕೊಳ್ಳಲು ಮರೆತರೆ ಎನ್ನುವುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಅವರಿಗೆ ಜೀರೋ ಮತಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.
ಹಾವೇರಿಯಲ್ಲಿ ಗೆದ್ದು ಬೀಗಿದ ಗಂಡ ಹೆಂಡತಿ!

ಬೆಳ್ತಂಗಡಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಎಸ್‌ಡಿಪಿಐ ಬೆಂಬಲಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 14 =
Remember me
