ಬೆಂಗಳೂರು:ಲಾಕ್‌ಡೌನ್‌ನಿಂದಾಗಿ ಬೆಂಗಳೂರು ಮಹಾನಗರ ಸೇರಿದಂತೆ ಹಲವು ನಗರಗಳಲ್ಲಿ ಕರೊನಾ 2ನೇ ಅಲೆ ಪ್ರಭಾವ ತಗ್ಗಲಾರಂಭಿಸಿದ್ದು, ಹಳ್ಳಿಗಳತ್ತ ಸರ್ಕಾರ ಹೆಚ್ಚಿನ ಲಕ್ಷ್ಯವಹಿಸಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ‌ ಹೇಳಿದರು.ಮಂಗಳವಾರ ತಮ್ಮ ನಿವಾಸದ ಬಳಿ ಸುದ್ದಿಗಾರರ ಜತೆಗೆ ಮಾತನಾಡಿದ ಅವರು ಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸೂಕ್ಷ್ಮ ನಿಯಂತ್ರಿತ ವಲಯ ಸ್ಥಾಪಿಸಲು ಸೂಚಿಸಲಾಗಿದೆ.ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ, ಆರೋಗ್ಯಾಧಿಕಾರಿ ಒಳಗೊಂಡ ಸಮಿತಿಯು ಈ ವಲಯದ ಮೇಲ್ವಿಚಾರಣೆ ನಡೆಸಲಿದ್ದು, ಸೂಕ್ಷ್ಮ ನಿಯಂತ್ರಿತ ವಲಯದ ಕುಟುಂಬಗಳಿಗೆ ಮೆಡಿಸಿನ್, ದಿನಸಿ ಪದಾರ್ಥಗಳ ವ್ಯವಸ್ಥೆ ಮಾಡಬೇಕು. ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರ ಟೆಸ್ಟ್ ಕಡ್ಡಾಯ, ಪ್ರಥಮ ಸಂಪರ್ಕಿತರಿಗೆ‌ ಜೀವಸತ್ವ ಮಾತ್ರೆಗಳನ್ನು ವಿತರಿಸಲು ಆದೇಶಿಸಲಾಗಿದೆ ಎಂದು ಬೊಮ್ಮಾಯಿ‌ ತಿಳಿಸಿದರು.ಸಿಎಂ ವಿಡಿಯೋ ಸಂವಾದ ನಾಳೆಸೋಂಕು ಪ್ರಕರಣಗಳು ಹೆಚ್ಚು ಕಂಡು ಬಂದಿರುವ, ‌ಆಯ್ದ ಗ್ರಾ.ಪಂ.ಗಳ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಜತೆಗೆ ಸಿಎಂ ಬಿಎಸ್ ವೈ ಬುಧವಾರ ವಿಡಿಯೋ ಸಂವಾದ ನಡೆಸಲಿದ್ದು, ಸರ್ಕಾರದ ಸೂಚನೆಯಂತೆ ಕೈಗೊಂಡ ಕ್ರಮಗಳನ್ನು ಪರಾಮರ್ಶಿಸಿ, ಅಗತ್ಯ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.ಸಿಎಂ ನಿವಾಸ ಕಾವೇರಿಯಲ್ಲಿ ಇಂದು ಸಂಜೆ ನಡೆಯಲಿರುವ ಸಚಿವರು, ಹಿರಿಯ ಅಧಿಕಾರಿಗಳ ಸಭೆಯಲ್ಲಿ ರಾಜ್ಯದ ಕರೊನಾ ಸ್ಥಿತಿಗತಿ, ಬ್ಲ್ಯಾಕ್ ಫಂಗಸ್ ಪರಿಸ್ಥಿತಿ ಹಾಗೂ ಚಿಕಿತ್ಸೆ, ಮಕ್ಕಳ ವಿಶೇಷ ವಾರ್ಡ್ ಸ್ಥಾಪನೆ ಹಾಗೂ ಐಸಿಯು ವ್ಯವಸ್ಥೆ ಮುಂತಾದ ವಿಷಯಗಳು ಚರ್ಚೆಯಾಗಲಿವೆ ಎಂದು ಬೊಮ್ಮಾಯಿ‌ ವಿವರಿಸಿದರು.ರಮೇಶ್ ಜಾರಕಿಹೊಳಿ ಪ್ರಕರಣ ತನಿಖೆ ಹಂತದಲ್ಲಿ ಇರುವಾಗ ಯಾವುದೇ ಹೇಳಿಕೆ, ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬೊಮ್ಮಾಯಿ‌ ಉತ್ತರಿಸಲು ನಿರಾಕರಿಸಿದರು.
ಬ್ಯಾಂಕ್‌ಗೆ ಕೋಟ್ಯಂತರ ರೂ. ವಂಚನೆ: ದಶಕಗಳ ಕಾಲ ನೆಮ್ಮದಿಯಿಂದಿದ್ದ ನೀರವ್‌ ಮೋದಿ ಮಾವನೂ ಎಸ್ಕೇಪ್‌!
ಸನ್ನಿ ಲಿಯೋನ್‌ ತೊಟ್ಟ ಡ್ರೆಸ್‌ನ ಜಿಪ್‌ ಮೇಲೇರಿಸಲು ಮೇಕಪ್‌ಮೆನ್‌ ಹರಸಾಹಸ- ವಿಡಿಯೋ ವೈರಲ್‌
ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
