ಬೆಂಗಳೂರು:ಕರೊನಾ ವೈರಸ್​ನ ಎರಡನೆಯ ಅಲೆ ಇದೀಗ ಭಾರಿ ಸುದ್ದಿ ಮಾಡುತ್ತಿದೆ. ಇನ್ನಿಲ್ಲದಂತೆ ಬಂದು ಎರಗಿರುವ ಈ ಮಹಾಮಾರಿಯಿಂದಾಗಿ ಇದಾಗಲೇ ಕೆಲ ರಾಜ್ಯಗಳಲ್ಲಿ ಪುನಃ ಲಾಕ್​ಡೌನ್​ ಜಾರಿಗೊಳಿಸಲಾಗಿದೆ.
ಕರ್ನಾಟಕದಲ್ಲಿಯೂ ಪುನಃ ಲಾಕ್​ಡೌನ್​ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ ಎಂಬ ಮಾತು ಇದಾಗಲೇ ಕೇಳಿಬರುತ್ತಿದೆ. ಇದರ ನಡುವೆಯೇ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪನವರು ಲಾಕ್​ಡೌನ್​ ಕುರಿತಂತೆ ಎಚ್ಚರಿಕೆಯ ಮಾತುಗಳನ್ನು ನೀಡಿದ್ದಾರೆ.
ಲಾಕ್​ಡೌನ್​ ಕುರಿತಂತೆ ನಾಳೆ ಯಡಿಯೂರಪ್ಪನವರು ನಾಳೆ ಸಭೆ ಕರೆಯಲಿದ್ದು, ಈ ಕುರಿತಂತೆ ಮಾಧ್ಯಮದವರ ಜತೆ ಇಂದು ಅವರು ಮಾತನಾಡಿದರು.
ಕರೊನಾ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಬೇಡವೆಂದಾದರೆ ಜನರು ನಿಯಮಗಳನ್ನು ಪಾಲಿಸಲೇಬೇಕಿದೆ ಎಂದು ಹೇಳಿದರು. ಸೋಂಕು ಮಾರಿ ಉಲ್ಬಣಿಸುವುದನ್ನು ತಡೆಯಲು ಬಿಗಿ ಕ್ರಮ ಅನಿವಾರ್ಯವಾಗಿದೆ. ಆದ್ದರಿಂದ ಜನರು ನಿಯಮಗಳನ್ನು ಪಾಲಿಸದೇ ಹೋದರೆ ಎಲ್ಲವೂ ಅನಿವಾರ್ಯ ಆಗಲಿದೆ ಎಂದರು.
ಈಗಾಗಲೇ ಮುಖ್ಯ ಕಾರ್ಯದರ್ಶಿ ಜತೆಗೆ ಚರ್ಚಿಸಿ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ಬಗ್ಗೆ ಅಭಿಪ್ರಾಯಗಳನ್ನು ಪಡೆದಿರುವೆ. ಸೋಮವಾರದ ಸಭೆಯಲ್ಲಿ ತಜ್ಞರು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳ ಜತೆಗೆ ಸಮಾಲೋಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು.
ಜನರ ಹಿತದೃಷ್ಟಿಯಿಂದ ಈಗಾಗಲೇ ಜಾರಿಗೊಳಿಸಿರುವ ಮಾರ್ಗಸೂಚಿಗಳ ಜಾರಿ, ಜನರ ಸ್ಪಂದನೆ ಕುರಿತು ಪರಾಮರ್ಶಿಸುವೆ ಎಂದು ಮುಖ್ಯಮಂತ್ರಿ ತಿಳಿಸಿದರು.
ಏಳು ಬಾರಿ ಸಂಸದರಾಗಿದ್ದ ಮೋಹನ್​ ಆತ್ಮಹತ್ಯೆ- ಸಾವಿಗೂ ಮನ್ನ ಮೋದಿ, ಅಮಿತ್​ ಷಾರಿಗೆ ಪತ್ರ ಬರೆದಿದ್ದರೆ?

ಲವರ್​ ಜತೆ ಮದುವೆಗೆ ಸಿದ್ಧಳಾಗಿದ್ದ ಸಿಡಿ ಲೇಡಿ: ಉತ್ತರ ಕರ್ನಾಟಕದ ಇಂಜಿನಿಯರಿಂಗ್​ ಯುವತಿಯ ಸ್ಟೋರಿ ಇದು…

ಮದುವೆಯಾದ ರಾತ್ರಿ ಸಿಂಹದ ಮರಿ ಬಾಡಿಗೆಗೆ ಪಡೆದರು- ನಿದ್ದೆ ಮಾತ್ರೆ ನೀಡಿದರು? ವಿಡಿಯೋ ನೋಡಿ ನೆಟ್ಟಿಗರು ಗರಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen − seven =
Remember me
