ಚಿಕ್ಕಬಳ್ಳಾಪುರ:ಸಾಮಾಜಿಕ ಜಾಲತಾಣದಿಂದ ಪರಿಚಯವಾದ ಯುವಕನ ಜತೆ ಪ್ರೀತಿಗೆ ಬಿದ್ದು ಯುವತಿಯೊಬ್ಬಳು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಲವ್​ ಫೇಲ್ಯೂರ್​ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ವಿದ್ಯಾರ್ಥಿನಿ ಪವಿತ್ರಾ!
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುರಬೂರು ಸರ್ಕಾರಿ ಕೃಷಿ ಮಹಾವಿದ್ಯಾಲಯದಲ್ಲಿ ಬಿ.ಎಸ್ಸಿ ಅಗ್ರೀಕಲ್ಚರ್ ಓದುತ್ತಿದ್ದ ಪವಿತ್ರಾ ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನ ಪ್ರೀತಿಯ ಬಲೆಗೆ ಬಿದ್ದು ಜೀವ ಕಳೆದುಕೊಂಡಿದ್ದಾಳೆ. ಕಾಲೇಜಿನ ವಸತಿ ನಿಲಯದಲ್ಲಿಯೇ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾಳೆ.
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿಟ್ಟು ಭಗ್ನಪ್ರೇಮದ ಕುರಿತು ಮಾಹಿತಿ ನೀಡಿದ್ದಾಳೆ. ಜತೆಗೆ ಡೆತ್​ನೋಟ್​ ಕೂಡ ಬರೆದಿಟ್ಟಿದ್ದಾಳೆ.
ಇನ್ಟಾಗ್ರಾಂ ನಲ್ಲಿ ಪರಿಚಯವಾದ ಹುಡಗನ ಜೊತೆ ಲವ್ ಮಾಡಿದ್ದು, ಈಗ ಲವ್​ ಫೇಲ್ಯೂರ್​ ಆಗಿದೆ. ಈ ಹಿನ್ನೆಲೆಯಲ್ಲಿ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿ ಹೇಳಿದ್ದಾಳೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ದಾಖಲಾಗಿದೆ (ದಿಗ್ವಿಜಯ ನ್ಯೂಸ್​)
ತಾಳಿ ಕಟ್ಟಲು ವರ ಮುಂದಾದಾಗ, ಹಣೆಗೆ ಬೇರೊಬ್ಬ ಹಚ್ಚಿದ ಸಿಂಧೂರ! ಆಮೇಲಾದದ್ದು ದುರಂತ

ಪ್ರಿಯಕರನ ಒಲಿಸಿಕೊಳ್ಳಲು ಆತನ ಪತ್ನಿ, ತಾಯಿಯನ್ನು ಜೀವಂತ ಸುಟ್ಟು ಹಾಕಿದ ಎರಡು ಮಕ್ಕಳ ತಾಯಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:7 + 12 =
Remember me
