ಕಲಬುರಗಿ:ಅನ್ಯ ಜಾತಿಯ ಯುವತಿಯನ್ನ ಪ್ರೀತಿಸಿ ಮದುವೆ ಹಿನ್ನೆಲೆಯಲ್ಲಿ ಯುವತಿಯ ಮನೆಯವರಿಂದ ಯುವಕನ ಮನೆಯವರ ಮೇಲೆ ಹಲ್ಲೆ ನಡೆದಿದ್ದು, ಘಟನೆಯಲ್ಲಿ ಯುವಕನ ತಂದೆ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರ್ ಗ್ರಾಮದಲ್ಲಿ ನಡೆದಿದೆ.
ದಶರಥ್ ಪೂಜಾರಿ (60) ಮೃತಪಟ್ಟಿದ್ದಾರೆ. ತೀವ್ರ ಹಲ್ಲೆಗೆ ಒಳಗಾಗಿದ್ದ ಇವರು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃಪಟ್ಟಿದ್ದಾರೆ.
ಕೊಲೆಯಾದ ದಶರಥ ಪೂಜಾರಿ ಮಗ ಸುರ್ಯಕಾಂತ್ ಚಾಮನೂರ್ ಗ್ರಾಮದ ಸಂಗೀತಾ ಎನ್ನುವ ಯುವತಿಯನ್ನ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಮದುವೆಯ ಬಳಿಕ ಯುವತಿಯ ಮನೆಯವರಿಂದ ತೀವ್ರ ವಿರೋಧ ಉಂಟಾಗಿತ್ತು.
ಮದುವೆಯ ಬಳಿಕ ಚಾಮನೂರ್ ತೊರೆದು ನವದಂಪತಿ ಬೆಂಗಳೂರು ಸೇರಿದ್ದರು. ಒಂದು ವರ್ಷದ ಬಳಿಕ ಅವರು ಊರಿಗೆ ವಾಪಸಾಗಿದ್ದರು. ಈ ವೇಳೆ ಎರಡೂ ಕುಟುಂಬದ ಮಧ್ಯೆ ಗಲಾಟೆಯಾಗಿದೆ.
ಯುವತಿಯ ಮನೆಯವರು ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ದಶರಥ ಅವರಿಗೆ ತೀವ್ರ ಗಾಯಗಳಾಗಿದ್ದವು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ಕಾನ್ವೆಂಟ್​ನಲ್ಲಿ ಲೈಂಗಿಕ ದೌರ್ಜನ್ಯ, ಕೊಲೆ? ಕಣ್ಣಾರೆ ಕಂಡ ಸಿಸ್ಟರ್​ಗೆ ಜೀವ ಬೆದರಿಕೆ- ದೂರು ದಾಖಲು

9 ವರ್ಷದ ಬಾಲಕನನ್ನು ಮದ್ವೆಯಾಗಿ ಭಾರಿ ಸುದ್ದಿ ಮಾಡಿದ್ದ ನಟಿಗಿಂದು ಹುಟ್ಟುಹಬ್ಬದ ಸಂಭ್ರಮ

‘ಭಾರತದ ಸ್ನೇಹಿತರೇ… ಸತ್ಯದ ಪರವಾಗಿ ನಿಲ್ಲಿ… ಕಾನೂನು​ ಇರುವಾಗ ಛೇ… ಇಂಥವರಿಗೆ ತಲೆಬಾಗುವಿರಾ?’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + 20 =
Remember me
