ಬೆಂಗಳೂರು:ಇದೀಗ ಎಲ್ಲೆಡೆ ಲವ್​ ಜಿಹಾದ್​ ಭಾರಿ ಸದ್ದು ಮಾಡುತ್ತಿದೆ. ಉತ್ತರ ಪ್ರದೇಶ ಸರ್ಕಾರ ಇದರ ವಿರುದ್ಧ ಕಠಿಣ ಕಾನೂನು ಜಾರಿಗೆ ತರುವ ಕುರಿತು ಚರ್ಚೆ ಆರಂಭಿಸಿದ ದಿನದಿಂದಲೂ ಇದು ದೇಶಾದ್ಯಂತ ಭಾರಿ ಕೋಲಾಹಲ ಸೃಷ್ಟಿಸಿದ್ದು, ಇದಾಗಲೇ ಕೆಲವು ಪ್ರಕರಣಗಳೂ ದಾಖಲಾಗಿದೆ.
ಅಂಥದ್ದೇ ಒಂದು ಪ್ರಕರಣ ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿತ್ತು. ಇದು ರಮ್ಯಾ ಮತ್ತು ವಜೀದ್​ ಖಾನ್​ ಎಂಬ ಪ್ರೇಮಿಗಳ ಕೇಸ್​. ಇಬ್ಬರೂ ಕಂಪೆನಿಯೊಂದರಲ್ಲಿ ಸಾಫ್ಟ್​ವೇರ್​ ಉದ್ಯೋಗಿಗಳಾಗಿದ್ದು, ಪರಸ್ಪರ ಪ್ರೀತಿಸುತ್ತಿದ್ದಾರೆ. ಇಬ್ಬರೂ ಪ್ರೇಮಪಾಶಕ್ಕೆ ಸಿಲುಕಿರುವುದು ರಮ್ಯಾ ಮನೆಯವರಿಗೆ ಇಷ್ಟವಿರಲಿಲ್ಲ. ಇದೊಂದು ಲವ್​ ಜಿಹಾದ್ ಕೇಸ್​ ಎನ್ನುವುದು ಅವರ ವಾದ.
ಆದ್ದರಿಂದ ಮುಸ್ಲಿಂ ಯುವಕರ ಪ್ರೇಮ ಪಾಶಕ್ಕೆ ಬಿದ್ದು ನಲುಗಿಹೋಗಿರುವ ಕೆಲವು ಯುವತಿಯರ ಬಗ್ಗೆ ಕೇಳಿ ಓದಿದ್ದ, ರಮ್ಯಾ ಪಾಲಕರಿಗೆ ತಮ್ಮ ಮಗಳ ಸ್ಥಿತಿಯೂ ಅದೇ ರೀತಿ ಆಗಬಾರದು ಎಂಬ ಆತಂಕ. ಅದೇ ಕಾರಣಕ್ಕೆ ಅವರು ಮಗಳನ್ನು ಗೃಹಬಂಧನದಲ್ಲಿ ಇಟ್ಟಿದ್ದರು. ಅಂದರೆ ಆಕೆಯನ್ನು ಹೊರಕ್ಕೆ ಬಿಡುತ್ತಿರಲಿಲ್ಲ.
ಇದರಿಂದ ಆತಂಕಗೊಂಡಿದ್ದ ಪ್ರೇಮಿ ವಜೀದ್​ ಖಾನ್​ ಹೈಕೋರ್ಟ್​ ಮೆಟ್ಟಿಲೇರಿದ್ದ. ತನ್ನ ಪ್ರೇಯಸಿಯನ್ನು ಹಾಜರುಪಡಿಸಲು ಪೊಲೀಸರಿಗೆ ಆದೇಶಿಸುವಂತೆ ಕೋರಿ ಹೇಬಿಯಸ್​ ಕಾರ್ಪಸ್​ (ಕಾಣೆಯಾದವರನ್ನು ಹುಡುಕಿ ಕೋರ್ಟ್​ಗೆ ಹಾಜರುಪಡಿಸಲು ಪೊಲೀಸರಿಗೆ ಆದೇಶಿಸುವಂತೆ ಕೋರುವ ಅರ್ಜಿ) ಸಲ್ಲಿಸಿದ್ದ.
ಇದರ ವಿಚಾರಣೆ ನಡೆಸಿದ ಹೈಕೋರ್ಟ್​, ಪಾಲಕರ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ. ಜಾತಿ ಅಥವಾ ಧರ್ಮದ ಹೊರತಾಗಿಯೂ ಯಾವುದೇ ವ್ಯಕ್ತಿಯನ್ನು ಮದುವೆಯಾಗುವ ಅವಕಾಶ ಪ್ರಾಪ್ತ ಹೆಣ್ಣುಮಕ್ಕಳಿಗೆ ಇದೆ. ತಮಗೆ ಬೇಕಾಗಿರುವ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಅವರಿಗೆ ಇದೆ ಎಂದು ಕೋರ್ಟ್​ ಹೇಳಿದೆ.
ಈ ಹಿಂದೆ ದೆಹಲಿ ಹೈಕೋರ್ಟ್ ಮತ್ತು ಅಲಹಾಬಾದ್ ಹೈಕೋರ್ಟ್ ಕೂಡ ಇದೇ ರೀತಿ ತೀರ್ಪು ನೀಡಿತ್ತು. ಅದನ್ನೇ ಈಗ ಕರ್ನಾಟಕ ಹೈಕೋರ್ಟ್​ ಕೂಡ ಹೇಳಿದೆ.
ಯಾವುದೇ ವ್ಯಕ್ತಿ ಅವನ ಅಥವಾ ಅವಳ ಇಚ್ಛೆಯಂತೆ ಯಾವುದೇ ವ್ಯಕ್ತಿಯನ್ನು ಮದುವೆಯಾಗುವ ಅವಕಾಶವನ್ನು ಭಾರತೀಯ ಸಂವಿಧಾನ ನೀಡಿದೆ. ಇದು ಅವರ ಮೂಲಹಕ್ಕಾಗಿದೆ. ಅವರಿಗೆ ಮದುವೆಯ ಸ್ವಾತಂತ್ರ್ಯವಿದೆ. ಈ ಹಕ್ಕನ್ನು ಯಾರಿಂದಲೂ ಕಿತ್ತುಕೊಳ್ಳಲು ಆಗದು ಎಂದಿದೆ ಕೋರ್ಟ್​.
ಹಿಂದಿನ ವಿಚಾರಣೆ ವೇಳೆ ಯುವತಿಯನ್ನು ಹಾಜರುಪಡಿಸುವಂತೆ ಕೋರ್ಟ್​ ಸೂಚಿತ್ತು. ತಮ್ಮ ಮಗಳನ್ನು ರಮ್ಯಾ ಪಾಲಕರು ಹಾಜರುಪಡಿಸಿದ್ದರು. ಅವರಿಗೆ ಕೋರ್ಟ್​ ಈ ರೀತಿ ಬುದ್ಧಿಮಾತು ಹೇಳುವ ಮೂಲಕ ಮಗಳನ್ನು ಈ ರೀತಿ ಮನೆಯಲ್ಲಿ ಇರಿಸಿಕೊಳ್ಳುವುದು ಸೂಕ್ತವಲ್ಲ ಎಂದು ಸೂಚಿಸಿದೆ.
ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − twelve =
Remember me
